ಜಿಲ್ಲಾ ಸುದ್ದಿ

ಮುದ್ದೇಬಿಹಾಳ್: ಅಂಗನವಾಡಿ ಅವ್ಯವಸ್ಥೆ ಆಗರ – ತರಾಟೆಗೆ ತೆಗೆದುಕೊಂಡ ಸಿಡಿಪಿಓ.

Share News

ನಾಲತವಾಡ: ಸತ್ಯಮಿಥ್ಯ ( ಆಗಸ್ಟ್ -14).

ಪಟ್ಟಣದ 4ನೇ ವಾರ್ಡಿನ ಕಾರ್ಯಕರ್ತೆ ಹಾಗೂ ಸಹಾಯಕಿಯರ ಮಧ್ಯ ಹೊಂದಾಣಿಕೆಯ ಕೊರತೆಯಿಂದ ವಿತರಣೆಯಾಗಬೇಕಿದ್ದ ಗರ್ಭಿಣಿಯರ ಆಹಾರ, ಮೊಟ್ಟೆ ಹಾಗೂ ಮಕ್ಕಳಿಗೆ ಕಳಪೆ ಊಟದ ಸಿದ್ಧತೆ ಸೇರಿದಂತೆ ಕಳೆದ ಹಲವು ವರ್ಷಗಳಿಂದಲೂ ಅವ್ಯವಸ್ಥೆ ಮುಂದುವರೆದ ಪರಿಣಾಮ ಸಾರ್ವಜನಿಕರ ದೂರಿನನ್ವಯ ಸಿಡಿಪಿಒ ಶಿವಮೂರ್ತಿ ಕುಂಬಾರ ಭೇಟಿ ನೀಡಿ ಕೇಂದ್ರದ ಅವ್ಯವಸ್ಥೆಗೆ ದಿಗ್ಬ್ರಮೆ ವ್ಯಕ್ತಪಡಿಸಿದ ಘಟನೆ ಸೋಮವಾರ ನಡೆದಿದೆ.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ವಿತರಣೆಯಾಗಬೇಕಿದ್ದ ಆಹಾರ ಇತರೆ ಸಾಮಗ್ರಿಗಳನ್ನು ಕಾರ್ಯಕರ್ತೆ ವಿತರಿಸುತ್ತಿಲ್ಲ. ಕೆಲಸ ನಿರ್ವಹಿಸುವ ಸಹಾಯಕಿಯೂ ಸಹ ಮಕ್ಕಳಿಗೆ ಗುಣಮಟ್ಟದ ಊಟ ಬಡಿಸುತ್ತಿಲ್ಲ, ಸರಕಾರ ವಿತರಣೆ ಮಾಡಿದ ರವೆ, ಬೆಲ್ಲ ಮೊಟ್ಟೆ ಸೇರಿದಂತೆ ಕೇಂದ್ರದ ಎಲ್ಲೆಂದರಲ್ಲಿ ಎಸೆದಿದ್ದಾರೆ ಅಲ್ಲದೇ ಆಹಾರ ವಿತರಣೆಯ ಅವಧಿಯೂ ಮುಗಿದ ಪರಿಣಾಮ ಚೀಲಗಳಲ್ಲೇ ನುಸಿ ಹುಳು ಉತ್ಪತ್ತಿಗೊಂಡಿವೆ. ಸರಕಾರದ ನಿಯಮದಂತೆ ಫಲಾನುಭವಿಗಳಿಗೆ ಮೊಟ್ಟೆ ವಿತರಣೆ ಮಾಡದೇ ಮಾರಿಕೊಳ್ಳುತ್ತಿದ್ದಾರೆ ಎಂದು ಕಳೆದ ಆ.10 ರಂದು ಆಕ್ರೋಶ ವ್ಯಕ್ತಪಡಿಸಿದ ಡಿಎಸ್ಎಸ್ ಮುಖಂಡ ರಾಜು ಮಸಬಿನಾಳ ಹಾಗೂ ಹುಸನ್ ಅವಟಿ ಸೇರಿದಂತೆ ಮಹಿಳಾ ಫಲಾನುಭವಿಗಳು ಸಹ ಕೊಳೆತ ಆಹಾರವನ್ನು ಕೇಂದ್ರದಲ್ಲೇ ಬೀಸಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ತರಾಟೆಗೆ: ಕೇಂದ್ರದಲ್ಲಿನ ಅವ್ಯವಸ್ಥೆ ಗಮನಿಸಿದ ಸಿಡಿಪಿಒ ಕುಂಬಾರ ಅವರು ಕಾರ್ಯಕರ್ತೆ ರುದ್ರಮ್ಮ ಕೋಟಿ ಹಾಗೂ ಭಾರತೀ ಬೂದಿಹಾಳ ಅವರ ಮೇಲೆ ಗರಂ ಆದ ಘಟನೆ ನಡೆಯಿತು. ಕಳೆದ ಹಲವು ವರ್ಷಗಳಿಂದಲೂ ಈ ಕೇಂದ್ರದಲ್ಲಿ ಇಬ್ಬರ ಮದ್ಯೆ ಹೊಂದಾಣಿಕೆಯ ಕೊರತೆಯಲ್ಲಿ ಆಹಾರ ಮೊಟ್ಟೆ ಮೂಲೆಗುಂಪಾಗಿವೆ. ಮಕ್ಕಳಿಗೆ ಕಳಪೆ ಊಟ ಸಿದ್ಧಪಡಿಸಲಾಗುತ್ತಿದೆ. ಅಡುಗೆ ಕುಕ್ಕರ್ 3 ವರ್ಷಗಳಿಂದಲೂ ದುರಸ್ಥಿ ಕಂಡಿಲ್ಲ ಈ ಕುರಿತು ಶೀಘ್ರವೇ ನನಗೆ ಮಾಹಿತಿ ಸಂಗ್ರಹಿಸಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ನೋಟಿಸ್ ನೀಡಿ ಕಾರಣ ಕೇಳಿ ಎಂದು ಸ್ಥಳದಲ್ಲಿದ್ದ ಹಿರಿಯ ಮೇಲ್ವಿಚಾರಕಿ ಪಾರ್ವತಿ ಕಾಗಲ್ ಹಾಗೂ ಮೇಲ್ವಿಚಾರಕಿ ಶಕುಂತಲಾ ದೇಸಾಯಿ ಅವರಿಗೆ ಸೂಚಿಸಿದರು.

ನಾಡಗೌಡ ಓಣಿಯ 4ನೇ ವಾರ್ಡಿನಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿ ಮಧ್ಯೆ ಹಲವು ದಿನಗಳಿಂದ ಸಹಕಾರದ ಕೊರತೆ ಕಂಡು ಬಂದಿದೆ. ಈಗಾಗಿ ಕೇಂದ್ರದಲ್ಲಿ ಆಹಾರ ಮೊಟ್ಟೆ ಇತರೇ ಸಾಮಗ್ರಿಗಳನ್ನು ಮಾರಿಕೊಂಡಿದ್ದಾರೆ ಎನ್ನುವ ಆರೋಪವಿದೆ, ಈ ಕುರಿತು ನೋಟಿಸ್ ನೀಡುತ್ತೇನೆ ಹಾಗೂ ಇಬ್ಬರಲ್ಲಿ ಒಬ್ಬರನ್ನು ಬೇರೆ ಕೇಂದ್ರಕ್ಕೆ ಎತ್ತಂಗಡಗಿ ಶಿಫಾರಸ್ಸು ಮಾಡುತ್ತೇನೆ.

– ಶಿವಮೂರ್ತಿ ಕುಂಬಾರ ಸಿಡಿಪಿಓ ಮುದ್ದೇಬಿಹಾಳ,

ವರದಿ : ಶಿವು ರಾಠೋಡ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!