ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಪರಿವೀಕ್ಷಣೆ.
ಕೊಪ್ಪಳ :ಸತ್ಯಮಿಥ್ಯ (ಆಗಸ್ಟ್ -14)
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕೊಪ್ಪಳ ರವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಸಬಹಂಚಿನಾಳ ಮತ್ತು ರಾಜೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು ಮಾಡಿದರು.
ಮಸಬಹಂಚಿನಾಳ ಗ್ರಾಮ ಪಂಚಾಯತಿಯಲ್ಲಿ. ಶಾಲಾ ಶೌಚಾಲಯ, ದನದ ದೊಡ್ಡಿ, JJM ಕಾಮಗಾರಿಗಳು ರಾಜೂರ ಗ್ರಾಮ ಪಂಚಾಯತಿಯಲ್ಲಿ ಶಾಲಾ ಶೌಚಾಲಯ ಪರಿಶೀಲನೆ ಮಾಡಿ ಶಾಲಾ ಮಕ್ಕಳೋಂದಿಗೆ ಸಂವಾದ ಮಾಡಿದರು.
ಶಾಲಾ ಮಕ್ಕಳೋಂದಿಗೆ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಿದರು.ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಕೋಠಡಿ ಹಾಗೂ ಆಹಾರ ತಯಾರಿಕೆಯಲ್ಲಿ ಭಾಗಿಯಾದ ಅಡುಗೆ ಸಹಾಯಕರೊಂದಿಗೆ ಚರ್ಚಿಸಿದರು.
ಸ್ಥಳದಲ್ಲಿ ಮಾನ್ಯ ಯೋಜನಾ ನಿರ್ದೇಶಕರಾದ ಪ್ರಕಾಶ್ ವಡ್ಡರ್ ಸರ್, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್ ಸರ್, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಶರಣಪ್ಪ ಕೆಳಗಿನ ಮನಿ, ಹನಮಂತಗೌಡ ಪಾಟೀಲ್, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಎ.ಡಿ.ಪಿ.ಸಿ ಮಹಾಂತ ಸ್ವಾಮಿ, ಅಕೌಂಟ್ ಮ್ಯಾನೇಜರ್ ಪಂಪನಗೌಡ, MIS, ತಾಂತ್ರಿಕ, ಹಾಗೂ ಐ.ಇ.ಸಿ ಸಂಯೋಜಕರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.
ವರದಿ :ಚೆನ್ನಯ್ಯ ಹಿರೇಮಠ.