
ಲಿಂಗಸಗೂರು : ನಮ್ಮ ಕರ್ನಾಟಕ ಸೇನೆವತಿಯಿಂದ ಶಾಸಕರಿಗೆ ಮನವಿ.
ಲಿಂಗಸೂಗೂರು:ಸತ್ಯಮಿಥ್ಯ (ಆಗಸ್ಟ್ -16).
ನಮ್ಮ ಕರ್ನಾಟಕ ಸೇನೆ ವತಿಯಿಂದ ಲಿಂಗಸುಗೂರು ಪಟ್ಟಣದ ವಿವಿಧ ವಾರ್ಡಗಳಲ್ಲಿ ಮೂಲಭೂತ ಸೌಕರ್ಯಗಳಾದ ಹೈಟೆಕ್ ಶೌಚಾಲಯ, ಹದಗೆಟ್ಟ ರಸ್ತೆಗಳ ದುರಸ್ಥಿ , ಬೀದಿ ವಿದ್ಯುತ್ ದೀಪಗಳ ದುರಸ್ತಿ ಹಾಗೂ ರಸ್ತೆ ಮೇಲಿನ ಧೂಳು ನಿರ್ವಹಣೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲರಿಗೆ ಮನವಿ ಪತ್ರ ಸಲ್ಲಿಸುವ ಮುಖಾಂತರ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶಿವರಾಜ್ ನಾಯ್ಕ, ಚಂದ್ರು ನಾಯಕ, ಬಸವರಾಜ ನಾಯಕ, ನಿರುಪಾದಿ ಹಿರೇಮಠ, ಚಂದ್ರು ಬೋವಿ, ಮಹಾಂತಯ್ಯಸ್ವಾಮಿ, ರುದ್ರಯ್ಯಸ್ವಾಮಿ ಐದುನಾಳ್, ರಾಜು ಪತ್ತಾರ್, ರಮೇಶ್ ಭೋವಿ, ಮೌನೇಶ್ ನಾಯಕ, ಶಿವರಾಜ್ ಅಲಬನೂರ, ನವಾಬ್ ಸಾಬ್, ದೇವೇಂದ್ರ ನಾಯಕ್, ವಿವೇಕಾನಂದ ನಾಯಕ, ವೇಂಕಟೇಶ ಗುತ್ತೇದಾರ, ಮಂಜುನಾಥ ರಾಠೋಡ್ ಹಾಗೂ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ರಮೇಶ ನಾಯಕ್