ಕೊಪ್ಪಳ : ವಿದ್ಯಾರ್ಥಿಗಳಿಗೆ ಆರೋಗ್ಯಕ್ಕಾಗಿ ಕ್ರೀಡೆ ಅವಶ್ಯ, ಕ್ರೀಡೆಯಿಂದ ಆರೋಗ್ಯ ವೃದ್ಧಿ,:-ವೀರಭದ್ರಪ್ಪ ಅಂಗಡಿ

ಕೊಪ್ಪಳ : ವಿದ್ಯಾರ್ಥಿಗಳಿಗೆ ಆರೋಗ್ಯಕ್ಕಾಗಿ ಕ್ರೀಡೆ ಅವಶ್ಯ, ಕ್ರೀಡೆಯಿಂದ ಆರೋಗ್ಯ ವೃದ್ಧಿ,:-ವೀರಭದ್ರಪ್ಪ ಅಂಗಡಿ
ಕೊಪ್ಪಳ : ಸತ್ಯಮಿಥ್ಯ (ಆಗಸ್ಟ್ -16).
ಪ್ರತಿಯೊಬ್ಬ ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ಕ್ರೀಡೆ ಅವಶ್ಯ, ಕ್ರೀಡೆಯಿಂದ ಆರೋಗ್ಯ ವೃದ್ಧಿ, ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಸದೃಢ ದೇಹವನ್ನು ಬೆಳೆಸಿಕೊಳ್ಳಬೇಕೆಂದು ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕ ನುಡಿದರು.
ಶುಕ್ರವಾರ ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ರಾವಣಕಿ ಗ್ರಾಮದಲ್ಲಿ ಮಂಗಳೂರು-ಕುದುರಿಮೋತಿ ವಲಯಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನಂತರ ಮುಖಂಡರಾದ ಹನುಮಂತಪ್ಪ ಮುತ್ತಾಳ ಮಾತನಾಡುತ್ತಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯವನ್ನು ಸಮತೋಲನ ಕಾಪಾಡಿಕೊಳ್ಳಬಹುದು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಸದೃಢ ದೇಹ, ಚೈತನ್ಯ, ಮತ್ತು ಮನಸ್ಸು ಯಾವಾಗಲೂ ಖುಷಿಯಿಂದ ಇರಲು ಮೊದಲು ಕ್ರೀಡೆಯಲ್ಲಿ ಪಾಲ್ಗೊಳ್ಳೋದನ್ನ ಕಲಿಯಬೇಕು, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಯಲ್ಲಪ್ಪ ಸೋಮಪುರ ಪ್ರಾಚಾರ್ಯರು ಇಂದಿರಾ ಗಾಂಧಿ ವಸತಿ ಶಾಲೆ ರಾವಣಕಿ ವಹಿಸಿದ್ದರು.ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಕ್ರಪ್ಪ ಚಿನ್ನೂರು ವಹಿಸಿದ್ದರು,
ಸ್ವಾಗತವನ್ನು ರವಿ ಮಾಳಗಿ ನೆರವೇರಿಸಿದರು ನಿರೂಪಣೆಯನ್ನು ಅಜಯ ಕುಮಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ ರಾವಣಕಿ ಶಿಕ್ಷಣ ಸಂಯೋಜಕರು , ಬಿ.ಆರ್.ಪಿ, ಶಿವಪ್ಪ ಉಪ್ಪಾರ, ಮಹೇಶ ಅಸೂಟಿ, ಬಸವರಾಜ ಅಂಗಡಿ, ಶರಣಪ್ಪ ವೀರಾಪುರ್ ದೈಹಿಕ ಶಿಕ್ಷಕರ ಮುಖ್ಯಸ್ಥರು, ಗ್ರಾಮ ಪಂಚಾಯತ್ ಸದಸ್ಯರಾದ ಕಲ್ಲಪ್ಪ ದೇವರ, ಜ್ಯೋತಿ ನಾಗರಾಜ್ ಬೆಲ್ಲದ, ದಾನವ ಚಂದಪ್ಪ ಬೂದಗುಂಪಿ, ಚಿನ್ನವ್ವ ಈರಪ್ಪ ತಾಪಲಿ, ಬಸಪ್ಪ ರಾಮಪ್ಪ ತಳವಾರ, ಮಾನವ್ವ ಎಸ್ ಬಡಿಗೇರ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು , ಶಿಕ್ಷಕರು ಇತರರು ಇದ್ದರು.
ವರದಿ :ಚೆನ್ನಯ್ಯ ಹಿರೇಮಠ.