ಗಜೇಂದ್ರಗಡ : ಸ್ವಾತಂತ್ರ್ಯ ದಿನಾಚರಣೆ – ಗಾಂಧೀಜಿ ಮತ್ತು ಅಂಬೇಡ್ಕರ್ ಫೋಟೋ ಇಡದೆ ಆಚರಿಸಿದ್ದಕ್ಕೆ ದಲಿತ ಮುಖಂಡರಿಂದ ವಿರೋಧ.

ಗಜೇಂದ್ರಗಡ : ಸ್ವಾತಂತ್ರ್ಯ ದಿನಾಚರಣೆ – ಗಾಂಧೀಜಿ ಮತ್ತು ಅಂಬೇಡ್ಕರ್ ಫೋಟೋ ಇಡದೆ ಆಚರಿಸಿದ್ದಕ್ಕೆ ದಲಿತ ಮುಖಂಡರಿಂದ ವಿರೋಧ.

ಗಜೇಂದ್ರಗಡ : ಸತ್ಯಮಿಥ್ಯ (ಆಗಸ್ಟ್ -16).
ನಿನ್ನೆ ಗಜೇಂದ್ರಗಡದ ಚಿಲ್ಝೆರಿ ಕ್ರಾಸ್ ಬಳಿ ಇರುವ ಪಾಠಶಾಲಾ ವಿದ್ಯಾಕೇಂದ್ರ ಕೋಚಿಂಗ್ ಸೆಂಟರನಲ್ಲಿ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಭಾರತಮಾತೆಯ ಫೋಟೋ ಮಾತ್ರ ಇಟ್ಟು ಧ್ವಜಾರೋಹಣ ಗೈದಿದ್ದರೆ ಎಂದು ಆರೋಪಿಸಿ ಜೈಭೀಮ್ ದಲಿತ ಸಂಘಟನೆ ಕಾರ್ಯಕರ್ತರು ಮಹಾತ್ಮಾ ಗಾಂಧಿಜೀ ಮತ್ತು ಅಂಬೇಡ್ಕರ್ ಫೋಟೋ ಯಾಕೆ ಇಟ್ಟಿಲ್ಲ ಎಂದು ಶಾಲೆಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತರ ತಪ್ಪಿನ ಅರಿವು ಮೂಡಿದ್ದರಿಂದ ನಂತರದಲ್ಲಿ ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರ್ ಫೋಟೋ ಇರಿಸಿ ಪೂಜೆ ಮಾಡಲಾಯಿತು ಎಂದು ತಿಳಿದು ಬಂದಿದೆ. ಈ ಕುರಿತು ದಲಿತ ಮುಖಂಡರು ಶಾಲೆಯ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ್ದು ಇನ್ನುಮುಂದೆ ಈ ರೀತಿಯ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳಿ ಎಂದಿದ್ದಾರೆ.
ಶಾಲೆಯ ಮುಖ್ಯಸ್ಥ ಸಂತೋಷ ವಸ್ತ್ರದರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಡೆದ ಸಂಗತಿ ಬಗ್ಗೆ ಕೇಳಿದಾಗ. ಫೋಟೋ ಇಡಲಾರದೆ ಪೂಜೆ ಮಾಡಿದ್ದು ತಪ್ಪಾಗಿದೆ. ಆಗಸ್ಟ್ 14 ರ ರಾತ್ರಿ ಸುರಿದ ಮಳೆ ಗಾಳಿಗೆ ಶಾಲೆಯಲ್ಲಿನ ಫೋಟೋಗಳು ಮೇಲಿಂದ ಬಿದ್ದು ಒಡೆದು ಹೋಗಿದ್ದವು. 15 ರ ಬೆಳಿಗ್ಗೆ ಅವುಗಳಿಗೆ ಲ್ಯಾಮಿನೆಷನ್ ಮಾಡಿಸಲು ಶಾಲಾ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು. ಆದರೆ ಅಷ್ಟು ಬೆಳಿಗ್ಗೆ ಯಾವುದೇ ಫೋಟೋ ಅಂಗಡಿ ತೆಗೆದಿರದ ಕಾರಣ ಭಾರತ ಮಾತೆಯ ಫೋಟೋ ಇಟ್ಟು ಪೂಜೆಮಾಡಿ ಧ್ವಜಾರೋಹಣ ಮಾಡಲಾಯಿತು.ಇದನ್ನು ಗಮನಿಸಿದ ದಲಿತ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸಿದ್ದೇನೆ ಮತ್ತು ಮುಂದೆ ಈ ರೀತಿಯ ಘಟನೆ ನಡೆಯದಂತೆ ಗಮನಹರಿಸಲಾಗುವದು. ನಮ್ಮ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ದೇಶಾಭಿಮಾನ, ಸಂವಿಧಾನ ಪರಿಕಲ್ಪನೆ ಮತ್ತು ನಾಡು-ನುಡಿಯ ಸಂರಕ್ಷಣೆ ಬಗ್ಗೆ ವಿಶೇಷ ಪರಿಕಲ್ಪನೆ ಇಟ್ಟುಕೊಂಡಿದೆ ಎಂದರು.
ವರದಿ : ಸುರೇಶ ಬಂಡಾರಿ.