ಗಜೇಂದ್ರಗಡ : ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲ್ಯೆ ಮತ್ತು ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ.
ಗಜೇಂದ್ರಗಡ : ಸತ್ಯಮಿಥ್ಯ (ಆಗಸ್ಟ್ -17).
ಕೊಲ್ಕತ್ತದ ಆರ್. ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮೇಲೆ ನಡೆದ ಗುಂಪು ದಾಳಿ ಮತ್ತು ಹಿಂಸಾಚಾರವನ್ನು ಖಂಡಿಸಿ ಇಂದು ನಗರದ ವೈದ್ಯರು, ಔಷಧಿ ವ್ಯಾಪಾರಸ್ಥರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು .
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಾ. ಪಾರ್ವತಿಬಾಯಿ ಚವಡಿ.ಆಸ್ಪತ್ರೆ ಮೇಲೆ ಈ ರೀತಿಯ ಮಾರಣಾಂತಿಕಾ ದಾಳಿಯಿಂದ ವೈದ್ಯರು ಹೆದರುತ್ತಾರೆ ಮತ್ತು ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದು ಅಕ್ಷಮ್ಯ ಅಪರಾಧ. ಅಲ್ಲಿನ ಸರ್ಕಾರ ಈ ಪ್ರಕರಣವನ್ನು ಲಗುವಾಗಿ ತೆಗೆದುಕೊಂಡಿದೆ. ಶೀಘ್ರದಲ್ಲಿ ಸರಿಯಾಗಿ ತನಿಖೆ ನಡೆಸಿ ತಪ್ಪಿತಸ್ತರಿಗೆ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಔಷಧಿ ವ್ಯಾಪಾರಸ್ಥರ ಸಂಘದ ತಾಲೂಕಾಧ್ಯಕ್ಷ ಉಮೇಶ ಮೆಣಸಗಿ ಮಾತನಾಡಿ. ಕೊಲ್ಕತ್ತಾ ವೈದ್ಯ ಡಾ. ಮೌಮಿತಾ ದೇಬಂತ್ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವೈದ್ಯಕೀಯ ಕ್ಷೇತ್ರದ ಮೇಲಿನ ದೌರ್ಜನ್ಯವಾಗಿದೆ. ಇದನ್ನು ಸುಸಂಸ್ಕೃತ ಸಮಾಜ ಕ್ಷಮಿಸುವುದಿಲ್ಲ. ಕೂಡಲೇ ಅಪರಾಧಿಗಳನ್ನು ಸೆರೆಹಿಡಿದು ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ನಂತರ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ. ಬಿ. ವ್ಹಿ. ಕಂಬಳ್ಯಾಳ, ಡಾ. ಸಿ. ವಿ. ಮಾಳಗಿ, ಡಾ. ಆರ್. ಎಸ್. ಜೀರೆ, ಡಾ. ಶರಣು ಗಾಣಿಗೇರ, ಮೋಹನ ಕನಕೇರಿ,ಅಶೋಕ ಮೂದೇನೂರ,ಕಳಕಪ್ಪ ಅಳವಂಡಿ ಡಾ.ವಿಠ್ಠಲ್, ಹನಮಂತ ಕೇರಿಕಟ್ಟಿ, ನಿಖಿಲ್ ರಾಜಪುರೋಹಿತ, ಅಂಬರೀಶ ಮಾರನಬಸರಿ, ಅಂಬರೀಶ ಅಂಗಡಿ, ಶಿವು ಪಾಗಿ, ರಾಘವೇಂದ್ರ ಚವಡಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.