ತಾಲೂಕು

ಮುಂಡರಗಿ ಪೊಲೀಸ ಠಾಣೆ ಭರ್ಜರಿ ಕಾರ್ಯಾಚರಣೆ ₹4.20 ಲಕ್ಷ ಮೌಲ್ಯದ ಚಿನ್ನಾಆಭರಣ ವಶ.

Share News

ಮುಂಡರಗಿ ಪೊಲೀಸ ಠಾಣೆ ಭರ್ಜರಿ ಕಾರ್ಯಾಚರಣೆ ₹4.20 ಲಕ್ಷ ಮೌಲ್ಯದ ಚಿನ್ನಾಆಭರಣ ವಶ.

ಮುಂಡರಗಿ:ಸತ್ಯಮಿಥ್ಯ (ಆಗಸ್ಟ್ – 19)

ಪಟ್ಟಣದಲ್ಲಿ ಆ.15ರಂದು ಸಂಭವಿಸಿದ್ದ ಕಳ್ಳತನ ಪ್ರಕರಣವನ್ನು ಸ್ಥಳೀಯ ಪೊಲೀಸರು 72 ಗಂಟೆಗಳಲ್ಲಿ ಪತ್ತೆ ಹಚ್ಚಿ, ಕಳುವಾಗಿದ್ದ ₹3 ಲಕ್ಷ ಮೌಲ್ಯದ ಚಿನ್ನದ ಸರ, ₹1.20 ಲಕ್ಷ ಮೌಲ್ಯದ ಚಿನ್ನದ ಪದಕ ಹಾಗೂ ನಗದು ಸೇರಿ ಸುಮಾರು ₹4.20 ಲಕ್ಷ ಮೌಲ್ಯದ ಆಭರಣಗಳನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ಸುಂಕದ, ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್‍ಐ ವಿ.ಜಿ.ಪವಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿ ಕಾರ್ತಿಕ ಅಪ್ಪಣ್ಣ ಕೊಂಪಿ ಎಂಬಾತನನ್ನು ಬಂಧಿಸಿದ್ದಾರೆ.

ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಎಎಸೈ ಎಸ್.ಎಂ.ಹಡಪದ, ಎಂ.ಐ.ಮುಲ್ಲಾ, ಎಸ್.ಡಿ.ನರ್ತಿ, ಜೆ.ಐ.ಬಚೇರಿ, ವಿ.ಬಿ.ಬಿಸನಳ್ಳಿ, ಮಹೇಶ ಗೊಳಗೊಳಕಿ, ಐ.ಎ.ಮದರಂಗಿ, ಲಕ್ಷ್ಮಣ ಲಮಾಣಿ, ಎಂ.ಎಂ.ಬನ್ನಿಕೊಪ್ಪ, ಪ್ರಕಾಶ ಲಮಾಣಿ, ಎಂ.ಐ.ಪಾಟೀಲ, ಆನಂದ ಲಮಾಣಿ, ಕೆ.ಐ.ಮುತ್ತಾಳಮಠ, ಎಚ್.ಎಫ್.ಡಂಬಳ, ಬಸವರಾಜ ಬಣಕಾರ, ಎಚ್.ಕೆ.ನದಾಫ್, ಪರಶುರಾಮ ಧಾರವಾಡ ಅವರಿಗೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮನಗೌಡರ ಅವರು ಬಹುಮಾನ ಘೋಷಿಸಿದ್ದಾರೆ.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!