
ರಂಗ ಕಲಾವಿದನಿಗೆ ಸರಕಾರದ ಸೌಲಭ್ಯಗಳಿಲ್ಲ , ಜೀವನ ನಿರ್ವಹಣೆಗೆ ಬೀದಿಗಳಲ್ಲಿ ನಾಟಕ :-ಬಸಪ್ಪ
ಕೊಪ್ಪಳ : ಸತ್ಯಮಿಥ್ಯ (ಆಗಸ್ಟ್ -19).
ಜಿಲ್ಲೆಯ ಕುಕನೂರು ಪಟ್ಟಣದ ಪ್ರಮುಖ ರಸ್ತೆಯಾದ ಕೊಪ್ಪಳ- ಯಲಬುರ್ಗಾ ರಸ್ತೆಯ ಪಕ್ಕದಲ್ಲಿ ಮೈಸೂರು ನಗರದ ಶಿವರಾಜ, ಬಸಪ್ಪ, ಅರುಣ, ರಕ್ಷಿತಾ ಎಂಬ ಕಲಾವಿದರು ಮೈಸೂರು ನಾಟಕ ಮಂಡಳಿ ಎಂಬ ತಂಡವನ್ನು ಕಟ್ಟಿಕೊಂಡು ಕುಕುನೂರು ಪಟ್ಟಣದಲ್ಲಿ ಸುಮಧುರ ರಸಮಂಜರಿ ಕಾರ್ಯಕ್ರಮ ಮತ್ತು ಹಾಸ್ಯ ಡ್ಯಾನ್ಸ್ ಕಾರ್ಯಕ್ರಮವನ್ನು ನೀಡುತ್ತಿದ್ದು ಈ ಸಂದರ್ಭದಲ್ಲಿ ಕಲಾವಿದರಾದ ಶಿವರಾಜ್ ಮತ್ತು ಬಸಪ್ಪ ಸಂಪರ್ಕಿಸಿದಾಗ ನಾಟಕ ಎಂದರೆ ಬರಿ ಪ್ರೇರಿಕ್ಷಕರನ್ನು ನಗಿಸಿ, ಅಳಿಸಿ ಮನೋರಂಜನೆಯನ್ನು ಮಾತ್ರ ನೀಡುವಂತದ್ದಲ್ಲ. ರಂಗಭೂಮಿ ಎನ್ನುವುದು ಬದುಕು. ಕೆಲವೊಬ್ಬರಿಗೆ ಅದೇ ಜೀವಳಾ, ಅಂತಹ ರಂಗಭೂಮಿ ಇಂದು ನಶಿಸಿ ಹೋಗುತ್ತಿದ್ದು, ನಮ್ಮ ತಂದೆಯವರ ಕಾಲದಿಂದಲೂ ನಾವು ವೃತ್ತಿ ರಂಗಭೂಮಿ ಯಲ್ಲಿ ನಟಸುತ್ತಿದ್ದು ಇತ್ತೀಚಿನ ದಿನಮಾನಗಳಲ್ಲಿ ಕಂಪನಿಯು ಮುಚ್ಚಿ ಹೋಗಿವೆ .
ಇಂದು ನಾವು ಬೀದಿಯಲ್ಲಿ ನಾಟಕವನ್ನು ಹಾಸ್ಯಗಳನ್ನ ಮಾಡುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ಪ್ರದರ್ಶನ ಮಾಡುತ್ತಾ ಬಂದ ದುಡ್ಡಿನಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟವಾಗಿದೆ.
ನಾವು ಪ್ರತಿ ಹಳ್ಳಿ ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಇಂತಹ ಪ್ರದರ್ಶನಗಳನ್ನು ನೀಡುತ್ತಾ ಸಾಗಿದಾಗ ಕೆಲವೊಂದು ಕಡೆಗೆ ಕುಡಿದ ಮತ್ತಿನಲ್ಲಿ ಕೆಲವೊಂದಿಷ್ಟು ಜನರು ಅವಮಾನ, ಅಪಮಾನಗಳನ್ನು ಹಿಂಸೆಯನ್ನು ಕೊಟ್ಟರು ಸಹಿಸಿಕೊಂಡು, ಹೊಟ್ಟೆಯ ಪಾಡಿಗಾಗಿ ಬಂದ ದುಡ್ಡಿನಲ್ಲಿ ಜೀವನ ಮಾಡುವುದು ತುಂಬಾ ಕಷ್ಟಕರವಾಗಿದೆ. ನಮ್ಮಂತಹ ಬಡ ಕಲಾವಿದರಿಗೆ ಯಾವುದೇ ರೀತಿಯಿಂದ ಸರ್ಕಾರದ ಸೌಲಭ್ಯಗಳು ಮತ್ತು ಮಾಶಾಸನಗಳು ಇಂದಿಗೂ ಬಾರದೆ ಕಷ್ಟಕರ ಜೀವನವನ್ನು ಅನುಭವಿಸುತ್ತಿದ್ದು. ಕಲಾವಿದರ ಜೀವನ ಅತ್ಯಂತ ಸಂಕಷ್ಟಕ್ಕೆ ಬಂದಿದ್ದೆ ಎಂದು ಹೇಳಲು ತುಂಬಾ ವಿಷಾದವೆನಿಸುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಬಡ ರಂಗ ಕಲಾವಿದರನ್ನು ಗುರುತಿಸಿ ಅವರಿಗೆ ಸೂಕ್ತ ಜೀವನಕ್ಕೆ ಮಾಸಾಸನ ಮತ್ತು ಜೀವನ ಭದ್ರತೆಗೆ ರಕ್ಷಣೆ ನೀಡಿಸಬೇಕು ಎಂದು ತಮ್ಮ ಜೀವನದ ಅಳಲನ್ನು ತೋಡಿಕೊಂಡರು.
ಇನ್ನು ಮುಂದಾದರೂ ಸರ್ಕಾರ ಇಂತಹ ಬಡ ಕಲಾವಿದರ ಗೋಳನ ಅರಿತು ಅವರಿಗೆ ಜೀವನಕ್ಕೆ ಬೇಕಾದ ಸೌಲಭ್ಯಗಳನ್ನು ಮತ್ತು ಭದ್ರತೆಯನ್ನು ನೀಡುವುದು ಇಲ್ಲವೋ ಕಾದು ನೋಡಬೇಕಿದೆ ?
ವರದಿ :ಚನ್ನಯ್ಯ ಹಿರೇಮಠ.