
ದಿ. ಲಕ್ಷ್ಮಿ ಅರ್ಬನ್ ಕೋ -ಆಫ್ ಬ್ಯಾಂಕ ಚುನಾವಣೆ ಫಲಿತಾಂಶ – ಹಳೆ ಟೀಮ್ ಗೆ ಜೈ ಎಂದ ಮತದಾರ.
ಗಜೇಂದ್ರಗಡ : ಸತ್ಯಮಿಥ್ಯ (ಡಿ -29).
ಸ್ಥಳೀಯ ದಿ.ಲಕ್ಷ್ಮಿ ಅರ್ಬನ್ ಕೋ -ಆಫ್ ಬ್ಯಾಂಕ ಆಡಳಿತ ಮಂಡಳಿ ಚುನಾವಣೆ ಇಂದು ಬೆಳಿಗ್ಗೆಯಿಂದ ಬಹಳಷ್ಟು ತುರಾತುರಿಯಿಂದ ನಡೆದಿತ್ತು.ಈಗ ಫಲಿತಾಂಶ ಪ್ರಕಟಗೊಂಡಿದ್ದು ಹಳೆಯ ಟೀಮ್ ಗೆ ಮತದಾರ ಪ್ರಭು ಜೈ ಎಂದಿದ್ದಾನೆ.
7 ಸ್ಥಾನಗಳ ಆಯ್ಕೆಗೆ ಜರುಗಿದ ಈ ಚುನಾವಣೆಯಲ್ಲಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಒಬ್ಬ ಮತದಾರ 7 ಮತಗಳನ್ನು ಹಾಕಬೇಕಾಗಿತ್ತು.
ಸಾಯಂಕಾಲ 4 ಗಂಟೆಗೆ ಚುನಾವಣೆ ಪ್ರಕ್ರಿಯೇ ಮುಕ್ತಾಯಗೊಂಡು. ಮತಗಳ ಎಣಿಕೆ ಪ್ರಕ್ರಿಯೇ ಸಾಯಂಕಾಲ 7 ಗಂಟೆಗೆ ಮುಕ್ತಾಯಗೊಂಡು. ಫಲಿತಾಂಶ ಕೆಳಗಿನಂತಿದೆ.
ಚುನಾವಣೆ ಫಲಿತಾಂಶ :
1)ಪವಾಡೆಪ್ಪ ಮ್ಯಾಗೇರಿ – 615.
2)ಸಿದ್ದಪ್ಪ ಬಂಡಿ – 615.
3)ವೀರೇಶ ನಂದಿಹಾಳ -602.
4)ಬಸವರಾಜ ಕಂಬಳ್ಯಾಳ – 599.
5)ಶಿದ್ದಲಿಂಗಪ್ಪ ಕನಕೇರಿ -592.
6)ಕಲ್ಲಪ್ಪ ಸಜ್ಜನರ – 550.
7) ಸುರೇಶ ಚೆನ್ನಿ – 515.
ಈ ಎಲ್ಲ ಏಳು ಜನ ಉಮೇದುವಾರರು ಜಯಶಾಲಿಯಾಗಿದ್ದಾರೆ.
8) ಬಸವರಾಜ ಕೊಟಗಿ – 272 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದ್ದಾರೆ.ಎಂದು ಚುನಾವಣೆ ಅಧಿಕಾರಿ ತಿಳಿಸಿದರು.
ವಿಜಯೋತ್ಸವದ ಬಳಿಕ ಮಾಜಿ ಸಚಿವ ಕಳಕಪ್ಪ ಬಂಡಿಯವರನ್ನು ಭೇಟಿ ಮಾಡಿ ಸಿಹಿ ಹಂಚಿದ ವಿಜೇತ ಉಮೇದುವಾರರು.
ನಂತರ 7 ಜನ ವಿಜೇತರ ಪರವಾಗಿ ಮಾತನಾಡಿದ ಸಿದ್ದಪ್ಪ ಬಂಡಿ.111 ವರ್ಷ ಪೂರೈಸಿದ ನಮ್ಮ ಬ್ಯಾಂಕಿಗೆ ನಡೆದ ಈ ಚುನಾವಣೆ ಫಲಿತಾಂಶ ಪ್ರಾಮಾಣಿಕತೆಗೆ ಸಂದ ಜಯವಾಗಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ನಾವೆಲ್ಲ ನಡೆದುಕೊಂಡು. ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಈ ಚುನಾವಣೆ ಪ್ರಕ್ರಿಯೇಯಲ್ಲಿ ಭಾಗವಹಿಸಿದ ಎಲ್ಲ ಮತದಾರರಿಗೆ, ಬ್ಯಾಂಕಿನ ಸಿಬ್ಬಂದಿಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದರು.
ಪರಾಜಿತ ಅಭ್ಯರ್ಥಿ ಬಸವರಾಜ ಕೊಟಗಿ ಮಾತನಾಡಿ.ನನ್ನ ನಿರೀಕ್ಷೆಗೂ ಮೀರಿ ಇಂದಿನ ಚುನಾವಣೆಯಲ್ಲಿ ಜನ ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಫಲಿತಾಂಶ ನನ್ನ ಆತ್ಮಸ್ಥರ್ಯ ಹೆಚ್ಚಿಸಿದೆ. ನನಗೆ ಮತನೀಡಿದ ಸರ್ವಧರ್ಮದ ಮತದಾರರಿಗೆ ಧನ್ಯವಾದಗಳು. ಆಯ್ಕೆಯಾದ ನೂತನ ಸದಸ್ಯರಿಗೆ ಅಭಿನಂದನೆಗಳು ಎಂದರು.
ವರದಿ : ಚನ್ನು. ಎಸ್.