ಆರೋಗ್ಯವಂತ ಸಮಾಜ ನಿರ್ಮಾಣಕ್ಕ ಕ್ರೀಡೆಗಳು ಅವಶ್ಯ: ಮುದಿಯಪ್ಪ ಕರಡಿ
ಗಜೇಂದ್ರಗಡ:ಸತ್ಯಮಿಥ್ಯ (ಆಗಸ್ಟ್ -20)
ಯುವಕರಿಗೆ ಕ್ರೀಡಾಭಿಮಾನವನ್ನು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು, ದೈಹಿಕ, ಮಾನಸಿಕ ನೆಮ್ಮದಿಗೆ ಕ್ರೀಡೆ ಹಾಗೂ ಯೋಗದ ಅವಶ್ಯಕತೆ ಇದೆ ಎಂದು ಮುದಿಯಪ್ಪ ಕರಡಿ ಹೇಳಿದರು.
ಸಮೀಪದ ಕುಂಟೋಜಿ ಗ್ರಾಮದಲ್ಲಿ ಗಜೇಂದ್ರಗಡ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿ ಮಾತನಾಡಿದರು.
ಸ್ಪರ್ಧೆಗಳಲ್ಲಿ ಮೊದಲು ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸಿನ ಶಾಂತಿಗಾಗಿ ಕ್ರೀಡೆ ಬೇಕು. ಕೇವಲ ಬಹುಮಾನ ಗೆಲ್ಲಲು ಅಲ್ಲ. ಇಂದಿನ ಯುವಕರು ಆರೋಗ್ಯದತ್ತ ನಿರ್ಲಕ್ಷ ತೋರುತ್ತಿರುವುದು ವಿಷಾದದ ಸಂಗತಿ. ದಿನದ ಒಂದಷ್ಟು ಅವಧಿಯನ್ನು ಆರೋಗ್ಯಕ್ಕಾಗಿ ಮೀಸಲಾಗಿಡಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಪುಸ್ತಕ ಜ್ಞಾನಕ್ಕಿಂತ ಮಿಗಿಲಾದ ಕ್ರೀಡಾ ಪ್ರೌಢಿಮೆ ಕೆಲವರಲ್ಲಿರುತ್ತದೆ ಎಂದರು.
ಬಳಿಕ ಎಸ್.ಡಿ.ಎಮ್.ಸಿ.ಅಧ್ಯಕ್ಷ ಕಳಕಪ್ಪ ಅರಮನಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಶಾಲಾ ಮುದ್ದು ಮಕ್ಕಳಿಂದ ಪ್ರಾರ್ಥನೆ , ನೃತ್ಯದ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಇದೇ ಸಂದರ್ಭದಲ್ಲಿ ತುಳಜಾಬಾಯಿ ರಾಠೋಡ, ಮುದಿಯಪ್ಪ ಕರಡಿ, ಪ್ರಭಯ್ಯ ಕಾರಡಗಿಮಠ, ಶರಣಪ್ಪ ಭಗವತಿ, ಹನಮಂತಪ್ಪ ಪೂಜಾರ, ಬಾಲಪ್ಪ ಕರಡಿ, ಆನಂದ ಬಂಕದ, ಚನ್ನಮ್ಮ ಅಜಮೀರ, ವಿರೇಶ ರಾಠೋಡ, ಚನ್ನಬಸಪ್ಪ ಕರಡಿ, ಯಂಕಪ್ಪ ಅಜಮೀರ, ಮಂಜುನಾಥ ಪೂಜಾರ, ವಿರೂಪಾಕ್ಷಯ್ಯ ಕುಕ್ಕನೂರಮಠ, ಶರಣಪ್ಪ ಮಾದರ, ರಂಗನಾಥ ಡೊಳ್ಳಿನ, ಮುತ್ತಪ್ಪ ಜೂಲಗುಡ್ಡ, ವಿ.ಎ.ಹಾದಿಮನಿ, ಎಸ್.ಕೆ.ಸರಗಣಾಚಾರಿ, ಎ.ಕೆ.ವಂಟಿ, ಎಮ್.ವಿ.ಗೊಡೆಕಾರ, ಆರ್.ಜಿ.ಮ್ಯಾಕಲ್, ಕೆ.ಎಸ್.ವನ್ನಾಲ, ಪಿ.ಪಿ.ಅಂಬೋರೆ, ಎಸ್.ವಾಯ್ ಜಿಗಳೂರ, ಶ್ರೀಧರ ಯಂಕಚಿ, ಎಸ್.ಕೆ.ಮಠದ ಶಾಲೆಯ ಮುಖ್ಯ ಶಿಕ್ಷಕ ಎಸ್.ಕೆ.ಹುನಗುಂದ, ಜಿ.ಬಿ.ಪತ್ತಾರ, ಎಸ್.ಎಸ್.ಕರಾಬಶೆಟ್ಟಿ, ಎನ್.ಎಚ್.ಓಲೇಕಾರ, ಆರ್.ವಿ.ನಿರಂಜನ, ಎಸ್.ಎಫ್.ಉಪ್ಪಾರ, ಬಸವರಾಜ, ವಿ.ಎ.ಜವಳಿ, ಪಿ.ಎಸ್.ನಾಯಕ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ.