ಗಜೇಂದ್ರಗಡ : ಬಸ್ ಹಾಯ್ದು 31 ಕುರಿಗಳ ಸಾವು.
ಗಜೇಂದ್ರಗಡ : ಸತ್ಯಮಿಥ್ಯ ( ಅಗಸ್ಟ್-22)
ನಗರದಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ದಿಂಡೂರ್ ಕ್ರಾಸ್ ಬಳಿ ಸಾಗುತ್ತಿರುವ ಕುರಿಗಳ ಹಿಂಡಿಗೆ ಬಸ್ಸೋಂದು ಡಿಕ್ಕಿ ಹೊಡೆದು 31 ಕುರಿಗಳು ಸಾವನ್ನಪ್ಪಿವೆ.
ಇಂದು ಸಾಯಂಕಾಲ 7 ಗಂಟೆ ಸುಮಾರಿಗೆ ಗಜೇಂದ್ರಗಡದಿಂದ ಬದಾಮಿಗೆ ಹೊರಟಿದ್ದ ಬಸ್ ಸಂಖ್ಯೆ ಕೆ ಎ 42 ಎಫ್ 0341 ಕೆ ಎಸ್ವಾ ಆರ್ ಟಿ ಸಿ ವಾಹನವಾಗಿದ್ದು
ಬಾದಾಮಿಗೆ ತೆರಳುವ ಮಾರ್ಗ ಮಧ್ಯದ ದಿಂಡುರ ಕ್ರಾಸ್ ಬಳಿ ರಸ್ತೆ ಮೇಲೆ ಸಂಚಾರಿಸುತ್ತಿದ್ದ ಕುರಿಗಳ ಗುಂಪಿನ ಮೇಲೆ ಹಾಯ್ದದ್ದರಿಂದ 31 ಕುರಿಗಳು ಸಾವನ್ನಪ್ಪಿವೆ.
ಕನಕಗಿರಿ ತಾಲೂಕಿನ ಉಮಳಿ ಗ್ರಾಮದ ತಿರುಪತಿ ಬಾಲಪ್ಪ ಗೊಲ್ಲರ ಎಂಬುವವರಿಗೆ ಸೇರಿದ್ದ ಕುರಿಗಳು. ಗಜೇಂದ್ರಗಡ – ರಾಜೂರ ಮಾರ್ಗ ಮಧ್ಯದ ಕುರಿಹಟ್ಟಿಗೆ ತೆರಳುತ್ತಿದ್ದವು. ಬಸ್ ಚಾಲಕನ ತಪ್ಪಿನಿಂದ 31 ಕನಕಗಿರಿತಳಿಯ ಕುರಿಗಳು ಸಾವನ್ನಪ್ಪವೆ ಎಂದು ಅಪ್ಪಣ್ಣ ಪತ್ರಿಕೆಯೊಂದಿಗೆ ತಮ್ಮ ನೋವನ್ನು ತೊಡಿಕೊಂಡಿದ್ದಾನೆ.
ಸ್ಥಳಕ್ಕೆ ಯಲಬುರ್ಗಾ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು ತನಿಖೆ ನಡೆದ ನಂತರ ಯಾರ ತಪ್ಪು ಎಂದು ತಿಳಿದು ಬರುತ್ತದೆ ಎನ್ನಲಾಗುತ್ತಿದೆ.
ವರದಿ : ಸುರೇಶ ಬಂಡಾರಿ