
ಸೋಲು -ಗೆಲುವು ಮುಖ್ಯವಲ್ಲ.ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿ: ಬಸವರಾಜ ಮೇಟಿ.
ಕುಕನೂರು: ಸತ್ಯಮಿಥ್ಯ (ಅಗಸ್ಟ್ -28)
ಕ್ರೀಡೆಯಲ್ಲಿ ಮಕ್ಕಳ ಸಾಧನೆಯನ್ನು ಗೌರವಿಸಿ. ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರೇಪಿಸಿ. ಸೋಲನ್ನು ಸ್ಪರ್ಧಾತ್ಮಕ ಮನೋಭಾವದಿಂದ ಸ್ವೀಕರಿಸುವಂತೆ ಸಲಹೆ ನೀಡಿ. ಮಕ್ಕಳ ಸೋಲು-ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ಬೆಳೆಸಿ. ಪ್ರೌಢಶಾಲಾ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರೆ ಅವರಿಗೆ ಉಚಿತವಾಗಿ ನನ್ನಿಂದ ಸ್ಪೋರ್ಟ್ಸ್ ಡ್ರೆಸ್ ನೀಡುತ್ತೇನೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷರು ಬಸವರಾಜ ಮೇಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ತಳಕಲ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು
ಕ್ರೀಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಸುಜಾತ ಡಂಬಳ ವಹಿಸಿದ್ದರು, ಕ್ರೀಡಾಕೂಟದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಣ್ಣ ಗೊಂದಿ ನೆರವೇರಿಸಿದರು. ಕ್ರೀಡಾ ಧ್ವಜಾರೋಹಣವನ್ನು ಶರಣಪ್ಪ ಗೌಡ ವೀರಪ್ಪ ಗೌಡ್ರು ಕೆಡಿಪಿ ಸದಸ್ಯರು ನೆರವೇರಿಸಿದರು,
ಕ್ರೀಡಾಕೂಟಕ್ಕೆ ಚಾಲನೆಯನ್ನು ಗುಂಡು ಎಸೆಯುವ ಮೂಲಕ ಗೌರಮ್ಮ ನಾಗನೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರು ಚಾಲನೆ ನೀಡಿದರು.
ಪ್ರಾಸ್ತಾವಿಕ ನುಡಿಯನ್ನು ಹಿರಿಯ ದೈಹಿಕ ಶಿಕ್ಷಕರಾದ ಶರಣಪ್ಪ ವೀರಾಪುರ ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಶಿಕ್ಷಕರಾದ ಹನುಮೇಶ್ ಎಂ .ಬಿ, ರಾಜಕುಮಾರ, ಶ್ರೀಮತಿ ರೇಖಾ ಜ್ಯೋತಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್ ಮುರಗೋಡ,ಶಿವಣ್ಣ ಯರಾಶಿ, ವೀರಪ್ಪನಗೌಡ ಶಿವಪ್ಪ ಗೌಡ್ರು, ವೆಂಕರೆಡ್ಡಿ ಯರಾಸಿ, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಶೇಖಪ್ಪ ಜಂತಲಿ, ನಾರಾಯಣ, ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ದೈಹಿಕ ಶಿಕ್ಷಕರಾದ ಉಮೇಶ ಕಂಬಳಿ, ಚಂದ್ರು ದೊಡ್ಮನಿ, ಎಸ್. ಎಂ .ಹಿರೇಮಠ, ಇತರ ದೈಹಿಕ ಶಿಕ್ಷಕರು ಮತ್ತು ಗ್ರಾಮದ ಗುರು ಹಿರಿಯರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.