ಸುಡಗಾಡ ಸಿದ್ಧರಿಂದ ಭವ್ಯ ಗಣೇಶ ಉತ್ಸವ. ಸಮಾಜಕ್ಕೆ ಮಾದರಿ – ಕುಡಗುಂಟಿ.
ಕುಕನೂರಲ್ಲಿ ಗಣೇಶೋತ್ಸವ ಕಾರ್ಯಕ್ರಮ ಅಂಗವಾಗಿ ಅನ್ನಸಂತರ್ಪಣೆ.
ಸುಡಗಾಡ ಸಿದ್ಧರಿಂದ ಭವ್ಯ ಗಣೇಶ ಉತ್ಸವ. ಸಮಾಜಕ್ಕೆ ಮಾದರಿ – ಕುಡಗುಂಟಿ.
ಕುಕನೂರ : ಸತ್ಯಮಿಥ್ಯ (ಸೆ-09)
ಊರಿಂದ ಊರಿಗೆ ಅಲೆಯುತ್ತಾ ಜನರ ಭವಿಷ್ಯ ನುಡಿದು ಸಮಾಜದ ಸರ್ವ ಜನಾಂಗದ ಒಳಿತು ಬಯಸುತ್ತಾ ಅಲೆಮಾರಿ ಜೀವನ ನಡೆಸುವ ಸುಡಗಾಡು ಸಿದ್ದರ ಉತ್ಸಾಹದ ಗಣೇಶೋತ್ಸವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.
ಅವರು ಕುಕನೂರು ಪಟ್ಟಣದ ಕುಂತಾಳ ನಗರದ 17ನೇ ವಾರ್ಡನ ಸುಡಗಾಡು ಸಿದ್ದರ ಸಮಾಜದ ಬುದ್ದಿಪ್ರಿಯ ಯುವಕರ ಸಂಘದಿಂದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರದಂದು ಹಮ್ಮಿಕೊಂಡ ಅನ್ನ ಸಂತರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಈ ಜನಾಂಗವು ಅಲೆಮಾರಿ ಜನಾಂಗದವರಾಗಿದ್ದು ಸುಮಾರು 25 ವರ್ಷಗಳಿಂದ ಸಮಾಜದವರನ್ನೊಳಗೊಂಡ ಗಣೇಶ ಪ್ರತಿಷ್ಠಾಪನೆ ನಡೆಯುತ್ತಿದ್ದು, ಆಗಮಿಸಿದ ಪ್ರತಿಯೊಬ್ಬರಿಗೂ ಬಾಳೆಯೂಟ ಊಣ ಬಡಿಸಿದರು.
ಇವರು ಪ್ರತಿ ನಿತ್ಯ ವಿವಿಧ ಗ್ರಾಮಗಳಿಗೆ ತೆರಳಿ ಸಾರ್ವಜನಿಕ ಜೀವನದಲ್ಲಿ ನೊಂದು ಬೆಂದ ಜನರಿಗೆ ಸಮಾಧಾನದ ನುಡಿಗಳ ಮೂಲಕ ಜೀವನೋತ್ಸಹ ತುಂಬಿ, ನವ ಚೈತನ್ಯ ನೀಡಿ, ಜೀವನ ಆಗು ಹೋಗುಗಳ ಕುರಿತು ಭವಿಷ್ಯ ನುಡಿದು ಸಾರ್ವಜನಿಕರು ಕೊಟ್ಟಷ್ಟು ದಕ್ಷಿಣೆ ಪಡೆದು ಜೀವನ ಸಾಗಿಸುತ್ತಾ ಹೊಂದಾಣಿಕೆ ಮನೋಭಾವನೆಯನ್ನು ಇವರು ಹೊಂದಿದ್ದಾರೆ. ಇಂತಹ ಉತ್ಸವಗಳಲ್ಲಿ ಎಲ್ಲರನ್ನು ಆಹ್ವಾನಿಸಿ ಭಕ್ತಿ ಮೆರೆಯುವುದು ವಿಷೇಶವಾಗಿದೆ ಎಂದು ಅವರು ಹೇಳಿದರು.
ನಂತರದಲ್ಲಿ ವಾರ್ಡನ ನಿವಾಸಿ ವಿನಾಯಕ ಯಾಳಗಿ ಗಣೇಶ ಪ್ರತಿಷ್ಠಾಪನೆ ಹಾಗೂ ಅನ್ನ ಸಂತರ್ಪಣೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅನಿಲ ಆಚಾರ, ಅರವಿಂದಗೌಡ ಪಾಟೀಲ್, ನವೀನ ಗುಳಗಣ್ಣವರ, ಎಸ್ಐ ಟಿ. ನಿರಂಜನ್, ಚಂದ್ರಕಾಂತ ಗುಡಿಮನಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು, ಸದಸ್ಯರು, ಸಮುದಾಯದ ಹಿರಿಯರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.
ವರದಿ : ಚನ್ನಯ್ಯ ಹಿರೇಮಠ.