ಬನ್ನಿಕೊಪ್ಪ ಗ್ರಾ.ಪಂ ನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ.
ಬನ್ನಿಕೊಪ್ಪ-ಸತ್ಯಮಿಥ್ಯ (ಸೆ-18).
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕೊಪ್ಪಳ ಜಿಲ್ಲೆ, ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಆಚರಿಸಲಾಯಿತು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀರಪ್ಪ ವಿರೂಪಾಕ್ಷಪ್ಪ ಗೊಂದಿಯವರು ಧ್ವಜಾರೋಹಣ ನೆರವೇರಿಸಿದರು .
ನಿವೃತ್ತ ಯೋಧ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ ವೆಂಕಟಾಪುರ ಮಾತನಾಡಿ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರುವಂತೆ ಅಂದಿನ ಗೃಹ ಸಚಿವ ಸರ್ಧಾರ್ ವಲ್ಲಭಬಾಯ್ ಪಟೇಲ್ ಅವರು ಹೈದರಾಬಾದ್ ನಿಜಾಮನಿಗೆ ಸಾಕಷ್ಟು ಮನವಿ ಮಾಡುತ್ತಾರೆ. ಆದರೆ, ಸರ್ಕಾರದ ಮನವಿಗೆ ಹೈದರಾಬಾದ್ ನಿಜಾಮ ಬಗ್ಗುವುದಿಲ್ಲ. ಬದಲಾಗಿ ಸ್ವತಂತ್ರವಾಗಿಯೇ ಇರುತ್ತೇನೆ ಅನ್ನೋ ಮೊಂಡುತನವನ್ನು ಪ್ರದರ್ಶಿಸುತ್ತಾನೆ. ಜೊತೆಗೆ ಸ್ವತಂತ್ರಕ್ಕಾಗಿ ನಡೆದ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಮುಂದುವರಿಸುತ್ತಾನೆ. ಹೋರಾಟಗಳಿಂದ ಹೈದರಾಬಾದ್ ನಿಜಾಮ ಬಗ್ಗದಿದ್ದಾಗ ದೇಶದ ಮೊದಲ ಗೃಹ ಸಚಿವ ಮತ್ತು ಉಕ್ಕಿನ ಮನುಷ್ಯ ಅಂತ ಖ್ಯಾತಿ ಪಡೆದಿದ್ದ ಸರ್ಧಾರ ವಲ್ಲಾಬಾಯ್ ಪಟೇಲ್ ಅವರು ಹೈದರಾಬಾದ್ ಸಂಸ್ಥಾನವನ್ನು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಿಸಲು ಮುಂದಾಗುತ್ತಾರೆ.
ಸೆಪ್ಟಂಬರ್ 13 -1948 ರಂದು ಆಪರೇಷನ್ ಪೋಲೋ ಎನ್ನುವ ಹೆಸರಿನಲ್ಲಿ ಹೈದರಾಬಾದ್ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನ ಮಾಡಲಿಕ್ಕೆ ಕಾರ್ಯಾಚರಣೆ ಆರಂಭವಾಗುತ್ತದೆ. ಭಾರತೀಯ ಸೈನ್ಯ ಕಾರ್ಯಚರಣೆಗೆ ಇಳಿಯಿತ್ತುದೆ. ಆದರೆ, ಕಾರ್ಯಚಾರಣೆ ಪ್ರಾರಂಭವಾದ ನಾಲ್ಕೇ ದಿನದಲ್ಲಿ ಯಾವುದೆ ಪ್ರತಿರೋದವಿಲ್ಲದೆ ಹೈದರಾಬಾದ್ ನಿಜಾಮ ಭಾರತದಲ್ಲಿ ತನ್ನ ಸಂಸ್ಥಾನವನ್ನು ವಿಲೀನ ಮಾಡಲಿಕ್ಕೆ ಒಪ್ಪಿಗೆಯನ್ನು ಸೂಚಿಸಿದನು. ಹೀಗಾಗಿ ಸೆಪ್ಟಂಬರ್ 17 ಇಲ್ಲಿನ ಜನ ವಿಮೋಚನಾ ದಿನಾಚಾರಣೆ ಅಂತ ಆಚರಿಸುತ್ತಾ ಬಂದಿದ್ದಾರೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೀರಪ್ಪ ವಿ ಗೊಂದಿ, ಉಪಾಧ್ಯಕ್ಷರಾದ ಹನುಮವ್ವ ಆಲೂರ್, ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ ವೆಂಕರಡ್ಡಿ ವೆಂಕಟಾಪುರ, ಸಿದ್ದಪ್ಪ ಜೀವನ್ನವರ್, ಮಹೇಶ್ ತಳವಾರ್, PDO ಸುರೇಶ ರಾಥೋಡ್, ತೋಟದರೆ ಕಾನ್ವೆಂಟಿನ ಶಿಕ್ಷಕ ವರ್ಗ, ಗುರುಹಿರಿಯರು, ಯುವಕರು, ಗ್ರಾಮ ಪಂಚಾಯಿತಿ ಸದಸ್ಯರುಗಳು ಇತರರು ಇದ್ದರು.
ವರದಿ:ಚನ್ನಯ್ಯ ಹಿರೇಮಠ.