
ವಿವಿಧ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಅ.ವಿ.ವಿ.ಪ್ರ ಸಮಿತಿಯಿಂದ ಸನ್ಮಾನ.
ನರೇಗಲ್ಲ:ಸತ್ಯಮಿಥ್ಯ (ಸೆ.18).
ಪಟ್ಟಣದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬುಧವಾರ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದ ಶಿಕ್ಷಕರನ್ನು ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಬಳಗದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
* ಎಸ್.ಆರ್. ಪಾಟೀಲ ಪ್ರತಿಷ್ಠಾನ ರೋಣ ತಾಲೂಕಾ ಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಶ್ರೀ ಅನ್ನದಾನೇಶ್ವರ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಎಫ್. ಎನ್. ಹುಡೇದ,
* ಕಪ್ಪತಗಿರಿ ಫೌಂಡೇಶನ್ ವತಿಯಿಂದ ನೀಡಲಾದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆ ಶಿಕ್ಷಕ ಬಿ.ಡಿ. ಯರಗುಪ್ಪ,
* ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಸಿರಸಿ,
* ಧಾರವಾಡ ಚೈತನ್ಯ ಫೌಂಡೇಶನ್ ವತಿಯಿಂದ ನೀಡಲಾದ ಡಾ. ರಾಧಾಕೃಷ್ಣನ್ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆಯ ಪ್ರಾಥಮಿಕ ವಿಭಾಗದ ಹಿರಿಯ ಶಿಕ್ಷಕ ಟಿ.ಬಿ. ಆಡೂರ ಇವರನ್ನು ಸನ್ಮಾನಿಸಲಾಯಿತು.
ಈ ವೇಳೆಯಲ್ಲಿ ಅ.ವಿ.ವಿ.ಪ್ರ ಸಮಿತಿಯ ಆಡಳಿತಾಧಿಕಾರಿ ಎನ್. ಆರ್. ಗೌಡರ, ಚೇರಮನ್ ಶರಣಪ್ಪ ಕೆ. ರೇವಡಿ, ಸದಸ್ಯ ಶಿವಯ್ಯ ಸಿ. ಚಕ್ಕಡಿಮಠ, ಶಾಲೆಯ ಮುಖ್ಯ ಶಿಕ್ಷಕ ಎ.ಕೆ. ಕಡೆತೋಟದ ಉಪಸ್ಥಿತರಿದ್ದರು.
ಸಹ ಶಿಕ್ಷಕರಾದ ಎ.ಸಿ. ಮರಡಿಮಠ, ಎಲ್.ಎಂ. ತಳಬಾಳ, ಎಂ. ವ್ಹಿ. ಹರ್ಲಾಪೂರ, ಬಿ.ಎಸ್. ಗಾಣಿಗೇರ, ಎಸ್.ವ್ಹಿ. ಪಾಟೀಲ, ಆರ್. ಕೆ. ಬಾಗವಾನ, ಎ.ಎಸ್. ಚಿಕ್ಕಮಠ, ಡಿ. ಲಕ್ಷ್ಮಣ, ಎಂ.ಎಫ್. ರೇವಡಿಗಾರ, ಶ್ರೀಮತಿ ಎಸ್. ಕೆ. ರೇಣುಕಮಠ, ಸೌಮ್ಯ ಜುಟ್ಲದ, ಬಿ.ಬಿ. ಪಟ್ಟಣಶೆಟ್ಟಿ, ಅನ್ನಪೂರ್ಣ ಹುಡೇದಗಟ್ಟಿ, ರೇಣುಕಾ ಹಿರೇಮಠ, ನಾಗರಾಜ ಹೊಸಮನಿ, ಸೇರಿದಂತೆ ಸರ್ವ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವರದಿ : ಸಂಗಮೇಶ ಮೆಣಸಗಿ.