
ಗಣೇಶ ವಿಸರ್ಜನೆ ಕಾರ್ಯಕ್ರಮ ಅಂಗವಾಗಿ ಅದ್ದೂರಿಯಾಗಿ ಜರುಗಿದ ರಸಮಂಜರಿ ಕಾರ್ಯಕ್ರಮ.
ಗಣೇಶ ವಿಸರ್ಜನೆ ಕಾರ್ಯಕ್ರಮ ಯಶಸ್ವಿಗೆ ಕಿಲ್ಲೆದ ಓಣಿ ಗುರು ಹಿರಿಯರೂ ಮತ್ತು ಗೆಳೆಯರ ಬಳಗದವರ ಒಗ್ಗಟ್ಟು ಮತ್ತು ಹೊಂದಾಣಿಕೆ ಕಾರಣ:ಡಾ. ಮಹಾದೇವ ಮಹಾಸ್ವಾಮಿಗಳು
ಕೊಪ್ಪಳ:ಸತ್ಯಮಿಥ್ಯ (ಸೆ -19)
ಜಿಲ್ಲೆಯ ಕುಕನೂರು ಪಟ್ಟಣದ ಕಿಲ್ಲೇದ ಓಣಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ಡಾ. ಮಹದೇವ ಮಹಾಸ್ವಾಮಿಗಳು ನೆರವೇರಿಸಿ ಮಾತನಾಡುತ್ತಾ ಬಡವ ಶ್ರೀಮಂತ ಎನ್ನದೆ ಗಣೇಶ ವಿಸರ್ಜನೆ ಕಾರ್ಯಕ್ರಮ ಯಶಸ್ವಿಗೆ ಕಿಲ್ಲೆದ ಓಣಿ ಗುರು ಹಿರಿಯರೂ ಮತ್ತು ಗೆಳೆಯರ ಬಳಗದವರ ಒಗ್ಗಟ್ಟು ಮತ್ತು ಹೊಂದಾಣಿಕೆ ಕಾರಣ ಎಂದು ಮಾತನಾಡಿದರು.
ಪಟ್ಟಣದ ಹಿರಿಯರಾದ ಗಿರಿಧರ್ ಜೋಶಿ ಮಾತನಾಡಿ ಕಿಲ್ಲೇದ ಓಣಿಯ ಗೆಳೆಯರ ಬಳಗದ ಯುವಕರು ಪ್ರತಿ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ವರ್ಷಕ್ಕಿಂತ ಈ ವರ್ಷ ವಿಭಿನ್ನವಾಗಿ ಕಾರ್ಯಕ್ರಮ ನೆರವೇರಿಸುತ್ತಿದ್ದು. ಓಣಿಯಲ್ಲಿ ನಾನು ಒಬ್ಬನು ಆಗಿರುವುದರಿಂದ ತುಂಬಾ ಸಂತೋಷ ಅನಿಸುತ್ತದೆ ಇನ್ನು ಮುಂದಿನ ದಿನಮಾನಗಳಲ್ಲಿ ಇಂತಹ ಉತ್ತಮ ಕಾರ್ಯಕ್ರಮಗಳನ್ನು ನೀಡುವುದರೊಂದಿಗೆ ಉತ್ತುಂಗಕ್ಕೆ ಎರಲಿ ಎಂದು ಶುಭ ಹಾರೈಸಿದರು.
ಡಿ .ಸೂರಿ ಕಲಾ ತಂಡ ಚಿಲಕಮುಕಿ ರಿಧಂ ಡ್ಯಾನ್ಸ್ ಸ್ಟುಡಿಯೋ ಕುಕುನೂರ ಅವರಿಂದ ರಸಮಂಜರಿ ಕಾರ್ಯಕ್ರಮ ಮತ್ತು ವಿಶೇಷ ನೃತ್ಯಗಳು ನೆರವೇರಿದವು.
ನಂತರ ಪೂಜ್ಯರಿಗೂ ಹಾಗೂ ಗ್ರಾಮದ ಗುರು ಹಿರಿಯರಿಗೂ ಪ್ರಸಾದ ಸೇವೆಯನ್ನು ಕಾರ್ಯವನ್ನ ನೆರವೇರಿಸಿದವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದಈರಪ್ಪ ಹೂಗಾರ್, ದೇವಪ್ಪ ಸೋಬಾನದ, ಶರಣಪ್ಪ ಈಶಪ್ಪ ದಿವಟರ್, ಬಸಪ್ಪ ದಿವಟರ, ಮಲ್ಲಪ್ಪ ಹೂಗಾರ, ಸಿದ್ದಪ್ಪ ತಳಬಾಳ, ಮೌಲಾಸಾಬ್, ಮಲ್ಲು ಚೌದ್ರಿ, ಭೋಗೇಶ್ ಕಾಟ್ರಳ್ಳಿ, ಪ್ರಕಾಶ ಬೋರಣ್ಣವರ್, ಸುರೇಶ ಪತ್ತಾರ, ಗಿರಿಧರ ಜೋಶಿ, ಕಳಕಪ್ಪ ಹತ್ತಿಕಟಗಿ, ಹನುಮಪ್ಪ ದಿಶಟರ, ಕಿಲೇದ ಓಣಿಯ ಗೆಳೆಯರ ಬಳಗದ ಯುವ ಮಿತ್ರರು ಗುರು ಹಿರಿಯರು ಇತರರು ಇದ್ದರು.
ವರದಿ:ಚೆನ್ನಯ್ಯ ಹಿರೇಮಠ.