ಟ್ರೆಂಡಿಂಗ್ ಸುದ್ದಿಗಳು

ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಶಿಕ್ಷಕನ ಕಣ್ಣು ಹದ್ದಿನ ಕಣ್ಣು ಇದ್ದಹಾಗೆ ಇದ್ದಾಗ ಶಿಕ್ಷಣ ಪ್ರಗತಿ ಸಾಧ್ಯ:-ಅರ್ಜುನ ದೇವಯ್ಯ

Share News

ಪ್ರತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಶಿಕ್ಷಕನ ಕಣ್ಣು ಹದ್ದಿನ ಕಣ್ಣು ಇದ್ದಹಾಗೆ ಇದ್ದಾಗ ಶಿಕ್ಷಣ ಪ್ರಗತಿ ಸಾಧ್ಯ:-ಅರ್ಜುನ ದೇವಯ್ಯ

ಕೊಪ್ಪಳ:ಸತ್ಯಮಿಥ್ಯ(ಸ -20)

ಜಿಲ್ಲೆ ಕುಕನೂರು ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳ ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಒಕ್ಕೂಟ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರವರ 136 ನೇ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಆಯಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವರಾದ ಹಾಲಪ್ಪ ಆಚಾರ, ಚೈತಾನಂದ ಸ್ವಾಮೀಜಿ, ಅರ್ಜುನ್ ದೇವಯ್ಯ, ಸಂಸ್ಥೆಯ ಅಧ್ಯಕ್ಷರಾದ ಜಸ್ವಂತ್ ರಾಜ್ ನೆರವೇರಿಸಿದರು.

ಕಾರ್ಯಕ್ರಮದ ವಿಶೇಷ ಉಪನ್ಯಾಸವನ್ನು ಏಶಿಯನ್ ಗೇಮ್ಸ್ ಬಂಗಾರ ಪದಕ ವಿಜೇತರು, ಏಕಲವ್ಯ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಅರ್ಜುನ ದೇವಯ್ಯ ರವರು ಮಾತನಾಡುತ್ತಾ ಶಿಕ್ಷಕರಾದವರು ಪ್ರತಿ ಒಂದು ವಿಷಯಗಳನ್ನು ನೋಟ್ ಮಾಡುವುದನ್ನು ಕಲಿತುಕೊಳ್ಳಬೇಕು. ನಾನು ಇಷ್ಟೆಲ್ಲ ಹೇಳುತ್ತಿದ್ದರು , ನಾಲ್ಕು ಮಂದಿ ಶಿಕ್ಷಕರು ಮಾತ್ರ ಪ್ರತಿ ಒಂದು ವಿಷಯಗಳನ್ನು ನೋಟ್ ಮಾಡಿಕೊಳ್ಳುತ್ತಿರುವುದು ಕಾಣುತ್ತಿದೆ. ವಿದ್ಯಾರ್ಥಿಗಳನ್ನು ಬೈಯುವ ಹಕ್ಕು ಶಿಕ್ಷಕರಿಗೆ ಇಲ್ಲ. ಎಲ್. ಕೆ. ಜಿ ಇಂದ ಶಿಕ್ಷಕರಾದವರು ವಿದ್ಯಾರ್ಥಿಯನ್ನು ಸೂಕ್ಷ್ಮವಾಗಿ ಗುರುತಿಸಬೇಕು, ಶಿಕ್ಷಕರ ಕಣ್ಣು ಹದ್ದಿನ ಕಣ್ಣಾಗಿರಬೇಕು.

ಪ್ರತಿ ಒಬ್ಬ ವಿದ್ಯಾರ್ಥಿ ಓದುತ್ತಾನೋ ಇಲ್ವೋ,, ಗಲಾಟೆ ಮಾಡುತ್ತಾನೋ ಏನೋ,, ಸೂಕ್ಷ್ಮವಾಗಿ ವೀಕ್ಷಣೆ ಮಾಡುವಂತಹ ಶಕ್ತಿ ಶಿಕ್ಷಕರಿಗೆ ಇರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳ ಶಿಕ್ಷಣದಿಂದ ಭಾರತ ದೇಶದ ಪ್ರಗತಿ ಶಿಕ್ಷಕನಿಂದ ಮಾತ್ರ ಸಾಧ್ಯ ಮತ್ತು ಅನವಶ್ಯಕವಾಗಿ ಮೊಬೈಲ್ ಬಳಸುವುದರಿಂದ ಅದು ನಿಮ್ಮ ಏಕಾಗ್ರತೆಯನ್ನು ಹಾಳುಮಾಡುವುದರ ಜತೆಗೆ ನಿಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳುತ್ತದೆ. ಅದಕ್ಕೆ ನೀವು ಅಸ್ಪದ ನೀಡಬೇಡಿ ಎಂದು ಅರ್ಜುನ್​ ದೇವಯ್ಯ ಸಲಹೆ ನೀಡಿದ್ರು.

ಮಾಜಿ ಸಚಿವರಾದ ಹಾಲಪ್ಪ ಆಚಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಅನುದಾನರಹಿತ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದಾಗ ಅನುದಾನರಹಿತ ಶಾಲೆಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳ ನೋಂದಣಿ ಸಾಧ್ಯವಾಗುತ್ತದೆ. ಆದ್ದರಿಂದ ಶಿಕ್ಷಣ ಸಂಸ್ಥೆಯ ಪ್ರತಿಯೊಬ್ಬರ ಕಠಿಣ ಪರಿಶ್ರಮ ಅತ್ಯವಶ್ಯಕವಾಗಿದೆ ಎಂದು ಮಾತನಾಡಿದರು.

ಉತ್ತಮ ಶಿಕ್ಷಕರಿಗೆ ಸನ್ಮಾನ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಜಸ್ವಂತ್ ರಾಜ್ ಜೈನ್,ಬಸವರಾಜ ಉಳ್ಳಾಗಡ್ಡಿ, ಸತ್ಯನಾರಾಯಣ ಹರಪನಹಳ್ಳಿ, ಶೇಖರ್ ಗೌಡ ಜಿ. ರಾಮತ್ನಾಳ, ಸಂಗಣ್ಣ ಟೆಂಗಿನಕಾಯಿ, ನಾಗರಾಜ್ ಕೊಪ್ಪಳ, ಶಿವಕುಮಾರ ನಾಗಲಾಪುರ ಮಠ, ರವಿ ನಾಲ್ವಾಡ, ಶೇಖರಗೌಡ ಉಳ್ಳಾಗಡ್ಡಿ, ಕೊಟ್ರಪ್ಪ ತೋಟದ, ಶರಣಪ್ಪ ವೀರಪ್ಪ ಅರಿಕೇರಿ, ವೀರಯ್ಯ ಉಳ್ಳಾಗಡ್ಡಿ, ಶರಣಪ್ಪ ಮುತ್ತಾಳ, ನವೀನ್ ನವಲೆ, ಯಲಬುರ್ಗಾ ಹಾಗೂ ಕುಕುನೂರು ತಾಲೂಕುಗಳ ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳ ಒಕ್ಕೂಟದ ಸದಸ್ಯ ಸಂಸ್ಥೆಗಳ ಪದಾಧಿಕಾರಿಗಳು ಶಿಕ್ಷಕರು ಮತ್ತು ಶಿಕ್ಷಕಿಯರು ಇದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!