ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿಯೊಂದಿಗೆ ತಮ್ಮ ಕುಟುಂಬ ಸುರಕ್ಷತೆ ಕಡೆ ಗಮನ ಹರಿಸಬೇಕು -ರವಿ ಬಾಗಲಕೋಟೆ.
ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿಯೊಂದಿಗೆ ತಮ್ಮ ಕುಟುಂಬ ಸುರಕ್ಷತೆ ಕಡೆ ಗಮನ ಹರಿಸಬೇಕು -ರವಿ ಬಾಗಲಕೋಟೆ.
ಕೊಪ್ಪಳ:ಸತ್ಯಮಿಥ್ಯ (ಸ -23)
ಜಿಲ್ಲೆಯ ಕುಕುನೂರು ಪಟ್ಟಣದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರ ದಿನಾಚರಣೆ ನೆರವೇರಿಸಲಾಯಿತು.
ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲಲಿತಮ್ಮ ಯಡಿಯಾಪುರ ಚಾಲನೆ ನೀಡಿದರು.
ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರವಿ ಬಾಗಲಕೋಟಿ ಮಾತನಾಡುತ್ತಾ.ಪೌರ ಕಾರ್ಮಿಕರನ್ನು ಸಮಾಜ ಕೀಳಾಗಿ ಕಾಣಬಾರದು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ.ಪ್ರತಿಯೊಬ್ಬ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಅಡಿ ಮನೆ ನಿರ್ಮಾಣ ಮಾಡಿಕೊಳ್ಳಲು 8 ಲಕ್ಷದವರೆಗೆ ಅನುದಾನ, ಕಚ್ಚಾ ಮನೆ ನಿರ್ಮಾಣಕ್ಕೆ 50ಸಾವಿರ ,ರೂ ಗಳು ಸಿಗುತ್ತದೆ.ಆರೋಗ್ಯ ಸೌಲಭ್ಯಗಳು ಮತ್ತು ವಸತಿ ಶಾಲೆಗಳಲ್ಲಿ ನೇರವಾಗಿ ಪ್ರವೇಶ ಸಿಗುತ್ತದೆ. ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಪೌರ ಕಾರ್ಮಿಕರು ನಿತ್ಯ ಪುರಸಭೆಯಿಂದ ನೀಡಲಾದ ಆರೋಗ್ಯ ಸುರಕ್ಷಾ ಕವಚಗಳನ್ನು ಧರಿಸಿ ಕೆಲಸ ನಿರ್ವಹಿಸಬೇಕು. ನಿಮ್ಮ ಮಕ್ಕಳ ಉತ್ತಮ ಶಿಕ್ಷಣ, ಆರೋಗ್ಯದತ್ತ ಚಿತ್ತ ಹರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ಗಗನ್ ನೋಟಗಾರ್ ಮಾತನಾಡುತ್ತ ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯಕ್ಕೆ ಗಮನ ಹರಿಸುವ ಜೊತೆಗೆ ನಗರದ ಆರೋಗ್ಯ ಕಾಪಾಡಲು ಒತ್ತು ನೀಡಬೇಕು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸ್ವಚ್ಛ ಭಾರತ ಅಭಿಯಾನದ ಮೂಲಕ ಬಹುದೊಡ್ಡ ಬದಲಾವಣೆಯನ್ನು ತಂದಿದ್ದಾರೆ . ನಾವೆಲ್ಲರೂ ಮೋದಿ ಅವರು ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಗೌರವ ನೀಡುವುದರೊಂದಿಗೆ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ ಎಂದು ಹೇಳಿದರು.
ಪಟ್ಟಣ ಪಂಚಾಯತ್ ಸದಸ್ಯರಾದ ಮಹಾಂತೇಶ್ ಹೂಗಾರ್ ಮಾತನಾಡಿದರು.
ಪೌರಕಾರ್ಮಿಕರಿಗೆ ಕ್ರೀಡಾಕೂಟ ಆಯೋಜನೆ ಮಾಡಿ ಕ್ರೀಡೆಯಲ್ಲಿ ವಿಜಯಶಾಲಿಗಳಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಎಲ್ಲಾ ಪೌರಕಾರ್ಮಿಕರಿಗೆ ಸನ್ಮಾನಿಸಿ ಸುರಕ್ಷಾ ಕಿಟ್ ವಿತರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿಪಟ್ಟಣ ಪಂಚಾಯತ್ ಅಧ್ಯಕ್ಷ ಲಲಿತವ್ವ ಯಡೆಯಾಪುರ್, ಉಪಾಧ್ಯಕ್ಷ ಪ್ರಶಾಂತ್ ಆರುಬೆರಳಿನ, ಸದಸ್ಯರಾದ ಗಗನ್ ನೋಟಗಾರ, ಸಿದ್ದು ಉಳ್ಳಾಗಡ್ಡಿ, ರಾಮಣ್ಣ ಬಂಕದ ಮನೆ, ನೂರುದ್ದೀನ್ ಗುಡಿ ಹಿಂದೆಲ್ಲ, ಶಿವರಾಜ್ ಯಲ್ಲಪ್ಪ ಗೌಡರ್, ಜಗನ್ನಾಥ್ ಬೋವಿ, ಬಾಲರಾಜ್ ಗಾಳಿ, ಶಾಧಿಕ್ ಖಾಜಿ, ಮಹಾಂತೇಶ್ ಹೂಗಾರ್, ಯಲ್ಲಪ್ಪ ಕಲ್ಮನಿ, ಇತರ ಸದಸ್ಯರು ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಪೌರಕಾರ್ಮಿಕರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.