ದುರ್ಗಾದೇವಿ ದೇವಸ್ಥಾನಕ್ಕೆ ತೆರಳುವ ರಸ್ತೆ ಅತಿಕ್ರಮಣ. ಸ್ವಚ್ಛತೆ ಮರೀಚಿಕೆ – ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ : ಮುತ್ತಣ್ಣ ತಿರ್ಲಾಪುರ
ದುರ್ಗಾದೇವಿ ದೇವಸ್ಥಾನಕ್ಕೆ ತೆರಳುವ ರಸ್ತೆ ಅತಿಕ್ರಮಣ. ಸ್ವಚ್ಛತೆ ಮರೀಚಿಕೆ – ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಿರ್ಲಕ್ಷ : ಮುತ್ತಣ್ಣ ತಿರ್ಲಾಪುರ
ಕೊಪ್ಪಳ:ಸತ್ಯಮಿಥ್ಯ (ಸ-24).
ಜಿಲ್ಲೆಯ ಕುಕನೂರು ಪಟ್ಟಣದ ವಾರ್ಡ್ ನಂ-11 ಅಂಬೇಡ್ಕರ್ ನಗರದಲ್ಲಿರುವ ಶ್ರೀ ಭೋವಿ ವಡ್ಡರ್ ದುರ್ಗಾದೇವಿ ದೇವಸ್ಥಾನ ಪೂರ್ವಿ ಕಾಲದಿಂದಲೂ ಇದ್ದು ಅದಕ್ಕೆ ಸುಲಭವಾದ ರಸ್ತೆಯು ಇತ್ತು. ದೇವಸ್ಥಾನದ ರಸ್ತೆ ಜಾಗದಲ್ಲಿ ಸಾರ್ವಜನಿಕರ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು ದೇವಸ್ಥಾನಕ್ಕೆ ರಸ್ತೆ ಇಲ್ಲದಂತಾಗಿದ್ದು ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ಬರುವ ಸಾರ್ವಜನಿಕ ಭಕ್ತರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು .
ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ತೆರಳುವ ರಸ್ತೆಯನ್ನು ತೆರೆವುಗೊಳಿಸಿಕೊಡಬೇಕು ಮತ್ತು ದೇವಸ್ಥಾನದ ಪಕ್ಕದಲ್ಲಿ ಚರಂಡಿ ನಿರ್ಮಾಣವಾಗಿದ್ದು. ಅದು ನೀರು ಹೋಗಲು ಅವಕಾಶವಿರುವುದಿಲ್ಲ. ಅಲ್ಲಿ ವಾಸವಾಗಿರುವ ಸಾರ್ವಜನಿಕರು ಮನೆಯಲ್ಲಿ ಬೇಡವಾದ ವಸ್ತುಗಳನ್ನು ಚರಂಡಿಗೆ ಎಸೆಯುತ್ತಿದ್ದು ಅದರಿಂದ ದೇವಸ್ಥಾನದ ವಾತಾವರಣ ಸುತ್ತಮುತ್ತ ರೋಗರುಜಿನಗಳು ಬರುವ ಸಂಭವ ಸೃಷ್ಟಿಯಾಗಿದ್ದು ಈಗಾಗಲೇ ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಚರಂಡಿ ಮೇಲಿನ ಸ್ಲಾಬ್ ನ್ನು ಹಾಕಿಸಿ ಕೊಡಬೇಕೆಂದು ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದರು.
ಈಗಾಗಲೇ ಸಾಕಷ್ಟು ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದು ಇದುವರೆಗೂ ಸಂಬಂಧ ಪಟ್ಟ ಇಲಾಖೆಗಳಾಗಲಿ, ಸಾರ್ವಜನಿಕರ ಹಿತಾಸಕ್ತಿಗೆ ಸ್ಪಂದಿಸದೆ ಇರುವ ಅಧಿಕಾರಿಗಳು ಇನ್ನು ಮುಂದಾದರು ಸ್ಪಂದಿಸುವರು ಇಲ್ಲವೋ ಕಾದು ನೋಡಬೇಕಿದೆ ಮತ್ತು ಶ್ರೀ ದುರ್ಗಾದೇವಿ ದೇವಸ್ಥಾನದ ಜಾಗಿಯಾ ಚಕ್ಕ ಬಂದಿ ಮಾಡಿ ಉತಾರ ಕೊಡಬೇಕು . ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಚರಂಡಿ ಮೇಲೆ ಸ್ಲ್ಯಾಬ್ ಹಾಕಿ ದೇವಸ್ಥಾನದ ಜಾಗೆಯ ಉತಾರ ಮತ್ತು ಚಿಕ್ಕಬಂದಿ ಕೊಡದಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳು ಮುಂದೆ ಹೋರಾಟ ಮಾಡುವುದಾಗಿ ದೇವಸ್ಥಾನದ ಕಮಿಟಿಯವರು ಮತ್ತು ಸಾರ್ವಜನಿಕರು ಮಾಧ್ಯಮದ ಮುಂದೆ ತಿಳಿಸಿದರು.
ಈ ಸಂದರ್ಭದಲ್ಲಿ ಮುತ್ತಣ್ಣ ತಿರ್ಲಾಪುರ, ಮಾರುತಿ ತೊಂಡಿಹಾಳ, ಯಲ್ಲಪ್ಪ ಬಂಡಿಹಾಳ, ಹನುಮಂತಪ್ಪ ಕುಷ್ಟಗಿ, ಹುಲಗಪ್ಪ ಬಸರಗಿಡ, ಮುದುಕಪ್ಪ ಕಲ್ಮನಿ, ಯಲ್ಲಪ್ಪ ತೊಂಡೆಯಾಳ, ರಾಮಪ್ಪ ಕಲಾದಗಿ, ರಾಘವೇಂದ್ರ ಕಟ್ಟಿಮನಿ, ಯಮನೂರಪ್ಪ ವೈ. ವಡ್ಡರ್, ಮರಿಯಪ್ಪ ಸವಣೂರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.