ವಿವಿಧಡೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ನರೇಗಲ್ಲ : ಸತ್ಯಮಿಥ್ಯ (ಅ.೧೭).
ಸಮೀಪದ ಬೂದಿಹಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜಗತ್ತಿಗೆ ಹಲವು ಆದರ್ಶಗಳ ಮೌಲ್ಯಗಳನ್ನು ಸಾರಿದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮೊದಲಿಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ವಾಲ್ಮೀಕಿ ಜನಾಂಗದ ಮುಖಂಡ ಬಸಪ್ಪ ಪೂಜಾರ ಪೂಜೆಯನ್ನು ಸಲ್ಲಿಸಿ ನಮಿಸಿದರು.
ಈ ವೇಳೆ ಶಿಕ್ಷಕ ಸಿ.ಕೆ. ಕೇಸರಿ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಸಾರಿರುವ ಸಂದೇಶ ಸರ್ವಕಾಲಿಕ ಸತ್ಯವಾಗಿದೆ ಅವರ ಜೀವನದ ತತ್ವಾದರ್ಶಗಳನ್ನು ಪಾಲಿಸಬೇಕು. ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಮುನ್ನಡೆಯಬೇಕು ಕೆಟ್ಟ ಗುಣಗಳನ್ನು ಬಿಟ್ಟು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಇಡೀ ವಿಶ್ವಕ್ಕೆ ರಾಮಾಯಣ ಮಹಾಕಾವ್ಯ ಭಾರತ ನೀಡಿದ ಅಭೂತಪೂರ್ವ ಸಾಹಿತ್ಯದ ಕೊಡುಗೆಯಾಗಿದೆ. ಮನುಕುಲಕ್ಕೆ ಸಂಸ್ಕೃತಿಯನ್ನು ಪರಿಚಯಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿ ಸಮಾಜದ ಸಮಾನತೆಯನ್ನ ವಿಚಾರಗಳನ್ನು ಐದನೇ ಶತಮಾನದಲ್ಲಿ ತಿಳಿಸಿದರು ಎಂದರು.
ಈ ವೇಳೆ ಯುಧಿಷ್ಠಿರ ಚಿಗರಿ, ಚನ್ನಬಸಪ್ಪ ಮರಲಿಂಗಣ್ಣವರ ಶಿವಾನಂದ ಮಡಿವಾಳರ, ಶೇಖಪ್ಪ ಹಡಗಲಿ, ಭೀಮಪ್ಪ ಮರಲಿಂಗಣ್ಣವರ ಸೇರಿದಂತೆ ಮುಂತಾದವರು ಇದ್ದರು. ಶಾಲಾ ಮಕ್ಕಳಿಗೆ ಸಿಹಿ ವಿತರಣೆ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಬಿ.ವಿ. ದೇಸಾಯಿ ಪಟ್ಟಿ ಸ್ವಾಗತಿಸಿದರು.
ಬಸವೇಶ್ವರ ಶಾಲೆ: ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿಯವರು ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿ ಅವರು ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚನೆ ಮಾಡುವ ಮೂಲ ಆದರ್ಶ ಪುರುಷ ರಾಮನನ್ನು ಜಗತ್ತಿಗೆ ಪರಿಚಯಿಸಿದರು ಅವರ ಜೀವನ, ಬದುಕು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ ಎಂದರು.
ಈ ವೇಳೆ ಶಿಕ್ಷಕ/ಕಿಯರಾದ ಎಸ್.ವಿ. ಹಿರೇಮಠ, ವಿ.ಪಿ. ಗ್ರಾಮಪುರೋಹಿತ, ವಿ.ಎಸ್. ಜಾದವ್, ಜಿ.ವಿ. ಕೆರಿಯವರು, ನಂದಿತಾ ರಾಜೂರ, ಎಮ್.ವಿ. ಕಡೆತೋಟದ, ಆಯ್.ಬಿ. ಒಂಟೇಲಿ ಸೇರಿದಂತೆ ಇನ್ನಿತರರು ಇದ್ದರು.
ವರದಿ : ಸಂಗಮೇಶ ಮೆಣಸಗಿ.