ಅನ್ನದಾನೇಶ್ವರ ಮಠದ ಆಸ್ತಿ ವಕ್ಪಬೋರ್ಡ್ನಿಂದ ರಕ್ಷಿಸಲು ಬಿಜೆಪಿ ಮುಖಂಡರ ಮನವಿ.
ಹುಬ್ಬಳ್ಳಿ :ಸತ್ಯಮಿಥ್ಯ (ನ-07).
ವಕ್ಪಬೋರ್ಡ್ ವಿರುದ್ದ ಬಿಜೆಪಿ ರಾಜ್ಯಾದ್ಯಾಂತ ಪ್ರತಿಭಟನೆ ಕಾವು ಹೆಚ್ಚಿಸುತ್ತಿದ್ದೂ. ಸಂಭವವಿರುವ ಎಲ್ಲ ಮಾರ್ಗಗಳ ಮುಖಾಂತರ ವಕ್ಪಬೋರ್ಡ್ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ದ ರಣಕಹಳೆ ಮೊಳಗಿಸಿದ್ದಾರೆ.
ಗದಗ ಜಿಲ್ಲೆಯ ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನ ಮಠದ ನರೇಗಲ್, ರಾಜೂರು, ಡಂಬಳ, ಕೋಟುಮಚಗಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ರೈತರ ಹೊಲಗಳನ್ನು ವಕಫ್ ಆಸ್ತಿ ಎಂದು ದಾಖಲಾಗಿರುವುದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿಂದು ಅನೇಕ ಬಿಜೆಪಿ ಮುಖಂಡರು ಕೇಂದ್ರದ ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿಯ (ಜೆಪಿಐಸಿ) ಅಧ್ಯಕ್ಷರಾದ ಜಗದಂಬಿಕಪಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಮಹೇಶ ತೆಂಗಿನಕಾಯಿ, ಶ್ರೀ ಅನ್ನದಾನೇಶ್ವರ ವಿಜಯ ಪ್ರಸಾರಕ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ ದೊಡ್ಡಮೇಟಿ, ಹಿರಿಯ ಬಿಜೆಪಿ ಮುಖಂಡರಾದ ಶಿವಾನಂದ ಮಠದ, ಮುತ್ತಣ್ಣ ಕಡಗದ, ಬಸಯ್ಯ್ ಕಲ್ಮಠ, ಶ್ರೀಧರ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.