ಅಚ್ಚುಮೆಚ್ಚಿನ ಗುರುವಿಗೆ ಬಿಳ್ಕೊಡುಗೆ ಸಮಾರಂಭ.
ವ್ಯಾಸನಂದಿಹಾಳ:ಸತ್ಯಮಿಥ್ಯ (ಡಿ -15)
ಪ್ರತಿಯೊಬ್ಬರ ಬದುಕಿನಲ್ಲೂ ಒಂದಲ್ಲ ಒಂದು ಬಾರಿ ಮಧುರ ನೆನಪಿನ ಘಳಿಗೆ ಒಮ್ಮೆಯಾದರೂ ಹಾದು ಹೋಗಿರದೆ ಇರಲಾರರು ಓದಿದ ಶಾಲೆ, ಕಾಲೇಜನ್ನು ಬಿಟ್ಟು ಹೊರಬರುವ ಕೊನೆಯ ದಿನವೇ ಇರಬಹುದು, ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡ ಘಳಿಗೆಯೇ ಆಗಿರಬಹುದು, ಈಗ ಆ ಕ್ಷಣದ ನೆನಪಾದರೂ ಸಾಕು – ಅಂದು ಎದೆಯಾಳದಲ್ಲಿ ತುಂಬಿ ಬಂದಿದ್ದ ಭಾವೋದ್ವೇಗವನ್ನು ನೆನೆದು ಇಂದು ಕೂಡ ಮನವು ಒಮ್ಮೆ ನವಿರಾಗಿ ಕಂಪಿಸದೆ ಇರಲಾರದು.
ಒಲ್ಲದ ಮನಸ್ಸಿನಿಂದ ಬಿಡುಗಡೆಗೊಂಡ ವ್ಯಾಸನಂದಿಹಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ಮೀಕಿ ನಗರದ ಶಿಕ್ಷಕರಾದ ಜಂಬಣ್ಣ.ಯ. ಹುಲ್ಲಿಕೇರಿ ಇವರು ಕಳೆದ 11 ವರ್ಷಗಳ ಸೇವೆಯನ್ನು ಸಲ್ಲಿಸಿ ಬಾಗಲಕೋಟ ಜಿಲ್ಲೆಯ ಬೊಮ್ಮಣಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದಾರೆ
ವರ್ಗಾವಣೆಗೊಂಡ ಗುರುಗಳಿಗೆ ಊರಿನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಶಾಲೆಯ ಆವರಣದಲ್ಲಿ ಹಮ್ಮಿಕೊಳಲಾಯಿತ್ತು.ಕಳೆದ 11 ವರ್ಷದಿಂದ ವ್ಯಾಸನಂದಿಹಾಳ ಗ್ರಾಮದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆತೆಯಿಂದ ಮುದ್ದು ಮಕ್ಕಳೊಂದಿಗೆ ಮಕ್ಕಳ ತರ ಬೆರೆತು ಕೇವಲ ಶಿಕ್ಷಕರಾಗಿ ಕಾರ್ಯ ನಿರ್ವಹಿಸದೆ ಪ್ರತಿಯೊಂದು ಮಗವಿಗೂ ಪ್ರೀತಿ ಹಾಗೂ ವಾತ್ಸಲ್ಯ ನೀಡಿ ಮಕ್ಕಳಿಗೆ ಮನ ಮುಟ್ಟುವಂತೆ ಪಾಠ ಪ್ರವಚನ ಭೋದಿಸುತ್ತಿದರು ಅವರು 11 ವರ್ಷ ವ್ಯಾಸನಂದಿಹಾಳ ಶಾಲೆಯಲ್ಲಿ ಯಾವದೇ ಒಂದು ದಿನವೂ ಕೂಡ ತಮ್ಮ ವಿಷಯದಲ್ಲಿ ಮಕ್ಕಳಿಗೆ ಕೊರತೆಯಾಗದಂತೆ ಪಾಠ ಭೋದಿಸಿ ಗ್ರಾಮಸ್ಥರ ಹಾಗೂ ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಈ ಶಾಲೆಯಿಂದ ವರ್ಗಾವಣೆಯಾಗಿದರು ಸಮಸ್ತ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಎಲ್ಲ ಶಾಲಾ ಶಿಕ್ಷಕರು ಗುರುಗಳ ಕುಟುಂಬಕ್ಕೆ ಹೂ ಮಳೆಯನ್ನು ಸುರಿಸುತ್ತಾ ಪ್ರೀತಿಯ ಬಿಳ್ಕೊಡುಗೆ ಮಾಡಿದರು.
ವರ್ಗಾವಣೆಗೊಂಡ ಗುರುಗಳಿಗೆ ಊರಿನ ಯುವಕರ ಸನ್ಮಾನಿಸುವುದರೊಂದಿಗೆ ನೆನಪಿನ ಉಡುಗೊರೆಗಳನ್ನು ಕೊಡುವುದರೊಂದಿಗೆ ಗೌರವಿಸಿದರು.
ಬೀಳ್ಕೊಡುಗೆ ಸಮಾರಂಭದಲ್ಲಿ ಮುದಗಲ್ ವಲಯದ ಸಿಆರಪಿ, ವ್ಯಾಸನಂದಿಹಾಳ ಗ್ರಾಮದ ಹಿರಿಯರು ,ಅಂಗನವಾಡಿ ಕಾರ್ಯಕರ್ತೆಯರು ,ಬಿಸಿಯೂಟದ ಮುಖ್ಯ ಅಡುಗೆಯವರು, ಮುಖ್ಯ ಗುರುಗಳು,ಸಹ ಶಿಕ್ಷಕರು ಹಾಗೂ ಕನ್ನಾಳ ವಲಯದ ಎಲ್ಲ ಶಿಕ್ಷಕರು ಭಾಗವಹಿಸಿದ್ದರು. ಮುಖ್ಯ ಗುರುಮಾತೆ ಶ್ರೀ ಮತಿ ರಂಗಮ್ಮ , ವ್ಯಾಸನದಿಹಾಳ ಮುಖ್ಯ ಗುರುಗಳಾದ ಶ್ರೀ ಶ್ರೀಶೈಲ .ಅಂಬಿಗೇರ ,ಶ್ರೀ ಕನಕರಾಯ. ತಳವಾರ ಶಿಕ್ಷಕರು .ವಿದ್ಯಾರ್ಥಿಗಳಾದ ಶ್ರೀದೇವಿ,ಯಲ್ಲಪ್ಪ ,ಮಾರುತಿ ಅನಿಸಿಕೆಗಳನ್ನು ತಿಳಿಸಿದರು. ಗ್ರಾಮದ ಹಿರಿಯರಾದ ಶ್ರೀ ಗಂಗಪ್ಪ ಡಿಎಸ್ಎಸ್ ಅವರು ಹಾಗೂ ಶ್ರೀ ಗೋವಿಂದಪ್ಪ ಅವರು ಮಾತನಾಡಿದರು.ಎಸ,ಡಿ,ಎಂ,ಸಿ
ಅಧ್ಯಕ್ಷರಾದ ರಮೇಶ್,ಪಕೀರಪ್ಪ ಹಿರಿಯರಾದ ಛತ್ರಪ್ಪ, ಶ್ರೀ ಅಮರಪ್ಪ, ಮಂಜುನಾಥ್, ರಾಮಪ್ಪ ತಳವಾರ್ , ಬಸಪ್ಪ ,ಲಿಂಗಪ್ಪ ಕುಂಬಾರ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರಗೌಡ,ಮಾಲಿಪಾಟೀಲ್ ಇತರರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮಂಜುನಾಥ್ ಶಿಕ್ಷಕರು ಗೊಲ್ಲರಹಟ್ಟಿ ನಿರೂಪಿಸಿದರು.
ವರದಿ : ಮುತ್ತು ಗೋಸಲ್.