ಸ್ಥಳೀಯ ಸುದ್ದಿಗಳು

ಮುಖ್ಯಾಧಿಕಾರಿ ವಿರುದ್ಧ ಬಿಜೆಪಿ ಸದಸ್ಯರ ಧರಣಿ – ಭರವಸೆ ನಂತರ ಧರಣಿ ಹಿಂದಕ್ಕೆ.

Share News

ಮುಖ್ಯಾಧಿಕಾರಿ ವಿರುದ್ಧ ಬಿಜೆಪಿ ಸದಸ್ಯರ ಧರಣಿ – ಭರವಸೆ ನಂತರ ಧರಣಿ ಹಿಂದಕ್ಕೆ.

ಗಜೇಂದ್ರಗಡ:ಸತ್ಯಮಿಥ್ಯ (ಡಿ -31)

ಗಜೇಂದ್ರಗಡ ಪುರಸಭೆ ಬಿಜೆಪಿ ಸದಸ್ಯರಿಂದ ಇಂದು ಮದ್ಯಾಹ್ನ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಅವರ ಕಛೇರಿ ಬಾಗಿಲಿನಲ್ಲಿಯೇ ಧರಣಿ ಕುಳಿತ ಪ್ರಸಂಗ ನಿರ್ಮಾಣವಾಗಿತ್ತು.

ಸೆಪ್ಟೆಂಬರ್ 3 ರಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಬಿಜೆಪಿ 7 ಸದಸ್ಯರು ಬಂಡಾಯ ಬಾವುಟ ಆರಿಸಿ ಕಾಂಗ್ರೇಸ್ ಸದಸ್ಯರ ಬೆಂಬಲದಿಂದ ಅಧಿಕಾರ ಹಿಡಿದಿದ್ದರು.

ಬಳಿಕ ಬಿಜೆಪಿ ಸದಸ್ಯರು ವಿರೋಧ ಪಕ್ಷದ ಸದಸ್ಯರಿಗಾಗಿ ಕೊಠಡಿಯ ಬೇಡಿಕೆ ಇಟ್ಟಿದ್ದರು.ನಿರಂತರವಾಗಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಬಳಿ ಕೇಳಿಕೊಂಡಿದ್ದರು .ಅದಕ್ಕೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ಇದ್ದಾಗ ಇವತ್ತಿನ ಸನ್ನಿವೇಶ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

ಈ ಕುರಿತು ಮಾಧ್ಯಮದೊಂದಿಗೆ ಪುರಸಭೆ ಸದಸ್ಯ ಯಮನೂರಪ್ಪ ತಿರಕೋಜಿ ಮಾತನಾಡಿ ಕಳೆದ ಹಲವಾರು ತಿಂಗಳುಗಳಿಂದ ವಿರೋಧ ಪಕ್ಷ ಕಚೇರಿಗಾಗಿ ಮುಖ್ಯಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಆದರೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಸರಿಯಾಗಿ ಸ್ಪಂದಿಸದೆ ಇದ್ದದರಿಂದ ಅವರ ಕಚೇರಿ ಎದುರು ಕುಳಿತುಕೊಳ್ಳುವುದು ಅನಿವಾರ್ಯವಾಗಿತ್ತು. ಒಂದು ವಾರದಲ್ಲಿ ಕೊಠಡಿ ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದರು.

ಬಳಿಕ‌ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾಧ್ಯಮದೊಂದಿಗೆ ಮಾತನಾಡಿ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದೆ. ವಿಷಯ ತಿಳಿದ ನಂತರ ಸ್ವಲ್ಪ ತಡವಾಗಿ ತೆರಳಿದೆ.ಅಷ್ಟರಲ್ಲಿ ಬಿಜೆಪಿ ಸದಸ್ಯರು ನಮ್ಮ ಕಚೇರಿ ಮುಂದೆ ಕುಳಿತಿದ್ದರು.ನಂತರ ವಾಸ್ತವ ವಿವರವಾಗಿ ಹೇಳಿದ್ದೇನೆ.ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ವಿರೋಧ ಪಕ್ಷ ಕಚೇರಿ ಬೇಡಿಕೆಯನ್ನು ಶೀಘ್ರವಾಗಿಯೇ ಅದನ್ನು ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಅಶೋಕ ವನ್ನಾಲ,ಕನಕಪ್ಪ ಅರಳಿಗಿಡದ, ರೂಪಲೇಶ್ ರಾಠೋಡ್, ಮುಖಪ್ಪ ನಿಡಗುಂದಿ, ವೀರಪ್ಪ ಪಟ್ಟಣಶೆಟ್ಟಿ, ಯು. ಆರ್. ಚನ್ನಮ್ಮನವರ, ಸವಣೂರ, ರವಿ ಶಿಂಗ್ರಿ, ಸೇರಿದಂತೆ ಅನೇಕರು ಇದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!