ಹೊಸ ಬಸ್ ನಿಲ್ದಾಣದಲ್ಲಿ ನೂತನ ಪೊಲೀಸ್ ಹೊರಠಾಣೆಯ ಉದ್ಘಾಟನೆ.
ಗದಗ-ಸತ್ಯಮಿಥ್ಯ (ಜ -09).
ನಗರದ ಹೊಸ ಬಸ್ನಿಲ್ದಾಣದಲ್ಲಿ ನೂತನವಾಗಿ ಪೊಲೀಸ್ ಹೊರಠಾಣೆಯನ್ನು ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಅವರು ಉದ್ಘಾಟಿಸಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಬಸ್ ನಿಲ್ದಾಣದಲ್ಲಿ ನೂತನ ಪೊಲೀಸ್ ಹೊರಠಾಣೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ.ಸಂಕದ, ಡಿವೈಎಸ್ ಪಿ ಇನಾಮದಾರ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎಂ.ದೇವರಾಜ, ಪೊಲೀಸ ಇಲಾಖೆಯ ಧೀರಜ ಶಿಂಧೆ, ಸಿದ್ದರಾಮೇಶ್ವರ ಗಡೇದ, ಡಿ ಬಿ ಪಾಟೀಲ, ಪಿಎಸ್ಐ ಮಾರುತಿ ಜೋಗದಂಡಕರ್, ವಿಜಯಕುಮಾರ ಕಮಟಳ್ಳಿ ಸೇರಿದಂತೆ ಬೆಟಗೇರಿ ಬಡಾವಣೆಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಚನ್ನು. ಎಸ್.