ಗಾಂಧೀಜಿಯವರನ್ನು ಕೊಂದದ್ದು ನೆಹರೂ ಎನ್ನುವ ಸುಳ್ಳು ಇತಿಹಾಸವನ್ನು ರಾಜಕೀಯ ದುಷ್ಟ ಶಕ್ತಿಗಳು ನೀಡುತ್ತಿವೆ : ಕಾಂಗ್ರೇಸ್ ಶಾಸಕ ಜಿಎಸ್ಪಿ ಕಳವಳ.

ಗಾಂಧೀಜಿಯವರನ್ನು ಕೊಂದದ್ದು ನೆಹರೂ ಎನ್ನುವ ಸುಳ್ಳು ಇತಿಹಾಸವನ್ನು ರಾಜಕೀಯ ದುಷ್ಟ ಶಕ್ತಿಗಳು ನೀಡುತ್ತಿವೆ : ಕಾಂಗ್ರೇಸ್ ಶಾಸಕ ಜಿಎಸ್ಪಿ ಕಳವಳ.
ಗಜೇಂದ್ರಗಡ : ಸತ್ಯಮಿಥ್ಯ (ಜ -26).
ದೇಶಕ್ಕೆ ಪವಿತ್ರವಾದ ಸಂವಿಧಾನ ಕೊಟ್ಟಂತ ಅಂಬೇಡ್ಕರವರ ಬಗ್ಗೆ .ರಾಜಕೀಯ ದುಷ್ಟ ಶಕ್ತಿಗಳು ಸಂಸತ್ತಿನ ಸಭೆಯಲ್ಲಿ ಹಗುರವಾಗಿ ಮಾತನಾಡಲು ಪ್ರಾರಂಭ ಮಾಡಿದ್ದಾರೆ. ಪೂಜ್ಯ ಜವಾಹರಲಾಲ್ ನೆಹರೂರವರೇ ಗಾಂಧೀಜಿಯವರನ್ನು ಕೊಂದಿದ್ದು ಎಂದು ಯಾರೋ ರಾಜಕೀಯ ನಾಯಕರು ಮಾತನಾಡುತ್ತಾರೆ ಎಂಬುವದನ್ನು ಇವತ್ತಿನ ಪತ್ರಿಕೆಗಳಲ್ಲಿ ನೋಡುತ್ತೇವೆ.ದೇಶದಲ್ಲಿ ಇಂದಿನ ಪರಿಸ್ಥಿತಿ ಭಯಾನಕವೆನಿಸುತ್ತಿದೆ. ಈ ರೀತಿಯ ವಾತಾವರಣ ಮುಂದಿನ ಯುವ ಪೀಳಿಗೆಗೆ ಎಂತಹ ಸಂದೇಶ ನೀಡುತ್ತಿದೆ ಎಂಬುವದನ್ನು ತಿಳಿದುಕೊಳ್ಳಬೇಕು ಎಂದು ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲ್ ಕಳವಳ ವ್ಯಕ್ತಪಡಿಸಿದರು .
ಅವರು ನಗರದ ಎಸ್.ಎಮ್. ಭೂಮರಡ್ಡಿ ಕಾಲೇಜಿನ ಆವರಣದಲ್ಲಿ ತಾಲೂಕಾಡಳಿತದಿಂದ ಜರುಗಿದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ.ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತ ದೇಶವನ್ನು. ನಮ್ಮ ಹಿರಿಯರು ತ್ಯಾಗ ಬಲಿದಾನ ದೇಶಪ್ರೇಮದಿಂದ ನಮಗೆ ಸ್ವಾತಂತ್ರ ದೊರಕಿಸಿ ಕೊಟ್ಟಿದ್ದಾರೆ ಅವರೆಲ್ಲರನ್ನು ಇಂದು ನೆನೆಯಬೇಕಾಗಿದೆ .ಡಾ ಬಾಬಾ ಸಾಹೇಬ್ ಅಂಬೇಡ್ಕರವರು ನಮ್ಮ ದೇಶಕ್ಕೆ ಪವಿತ್ರವಾದ ಸಂವಿಧಾನವನ್ನು ನೀಡಿ ನಾವೆಲ್ಲ ಭಾರತೀಯರು ಹೇಗೆ ಬದುಕು ನಡೆಸಬೇಕು ಎಂದು ಮಾರ್ಗದರ್ಶನ ಮಾಡಿದ್ದಾರೆ . 76 ವರ್ಷ ಅಖಂಡ ಭಾರತವಾಗಿ ನೂರಾರು ಜಾತಿ, ಸಾವಿರಾರು ಧರ್ಮಗಳಿದ್ದರು ಒಂದೇ ತಾಯಿಯ ಮಕ್ಕಳಂತೆ ಜೀವನ ನಡೆಸುತ್ತಿದ್ದೇವೆ. ಇಂದಿನ ಯುವ ಪೀಳಿಗೆ ಮುಂದಿನ ಜವಾಬ್ದಾರಿಯುತ ನಾಗರಿಕರಾಗಿ ದೇಶವನ್ನು ಮುನ್ನಡೆಸುವ ಗುರಿಯನ್ನು ಹೊಂದಬೇಕು.
ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ 1.2 ಕೋಟಿ ಕುಟುಂಬಗಳ ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದೆ ಆದರೆ ವಿರೋಧ ಪಕ್ಷ ಅವುಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವದು ಖೇದಕರ.
ಗಜೇಂದ್ರಗಡ ನಗರ ತಾಲೂಕು ಕೇಂದ್ರವಾದ ಮೇಲೆ ತಾಲೂಕಾ ಕಚೇರಿಗಳು ಕಟ್ಟಡದ ಕೊರತೆಯನ್ನು ಅನುಭವಿಸುತ್ತಿವೆ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನೀಲನಕ್ಷೆ ತಯಾರಾಗಿದೆ. ಈಗಾಗಲೇ 10 ಕೋಟಿ ರೂಪಾಯಿ ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣವಾಗುತ್ತಿದೆ, ತಾಲೂಕಾ ಕ್ರೀಡಾಂಗಣಕ್ಕೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದೇವೆ ಈ ರೀತಿಯ ಅನೇಕ ಅಭಿವೃದ್ಧಿ ಕೆಲಸಗಳಿಗೆ ತಯಾರಾಗಿದ್ದೇವೆ ಎಂದರು.
ಪೊಲೀಸ್ ಪಡೆಯಿಂದ ಪಥಸಂಚಲನ ಮತ್ತು ಮಕ್ಕಳಿಂದ ದೇಶಭಕ್ತಿ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ,ತಾಲೂಕಾ ಪಂಚಾಯತ್ ಇಒ ಶ್ರೀಮತಿ ಮಂಜುಳಾ ಹಕಾರಿ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ,ಪುರಸಭೆ ಅಧ್ಯಕ್ಷ ಸುಭಾಸ್ ಮ್ಯಾಗೇರಿ,ನರೇಗಲ್ ಪ. ಪಂ.ಮುಖ್ಯಾಧಿಕಾರಿ ಮಹೇಶ ನೀಡಶೇಸಿ,ಪಿ ಎಸ್ ಐ ಸೋಮನಗೌಡ,ಸ್ಥಾಯಿ ಕಮೀಟಿ ಚೇರಮನ್ ಮುದಿಯಪ್ಪ ಮುಧೋಳ್,ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಬಿದರಳ್ಳಿ,ಸಿದ್ದಪ್ಪ ಬಂಡಿ,ಮುರ್ತುಜ ಡಾಲಯತ,ರಾಜು ಸಾಂಗ್ಲಿಕರ, ಸಿದ್ದಪ್ಪ ಚೋಳಿನ, ಶರಣಪ್ಪ ಉಪ್ಪಿನಬೆಟಗೇರಿ,ವೆಂಕಟೇಶ ಮುದಗಲ ಸೇರಿದಂತೆ ಅನೇಕರು ಇದ್ದರು.
ವರದಿ : ಚನ್ನು. ಎಸ್.