
ಗುರುವಿನ ಆಶೀರ್ವಾದವಿದ್ದರೆ ಜಗತ್ತನ್ನು ಗೆಲ್ಲುವ ಶಕ್ತಿ ಲಭ್ಯವಾಗುತ್ತದೆ-ಶಶಿಕಲಾ ಪಾಟೀಲ

ಗಜೇಂದ್ರಗಡ : ಸತ್ಯಮಿಥ್ಯ (ಫೆ -12).
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ದಾರ್ಶನಿಕರ ವಾಣಿಯಂತೆ. ಗುರುವಿನ ಆಶೀರ್ವಾದವಿದ್ದರೆ ಜಗತ್ತನ್ನು ಗೆಲ್ಲುವ ಶಕ್ತಿ ಲಭ್ಯವಾಗುತ್ತದೆ. ನಿಮಗೆ ತರಬೇತಿ ನೀಡುತ್ತಿರುವ ಗುರುಗಳ ಮಾತನ್ನು ಶ್ರದ್ದೆಯಿಂದ ಕೇಳಿ ಉತ್ತಮರಾಗಿ ಎಂದು ರೋಣ ತಾಲೂಕಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಶಿಕಲಾ ಮಿಥುನ್ ಪಾಟೀಲ ನುಡಿದರು.
ಅವರು ಕಳೆದ ಮಂಗಳವಾರ ನಗರದ ಕನಸು ಸೇವಾ ಪೌಂಡೇಷನ್ ವತಿಯಿಂದ ಆರಿ ವರ್ಕ ತರಬೇತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ
ಮಹಿಳೆ ಮಗಳಾಗಿ,ಮಡದಿಯಾಗಿ, ಅತ್ತೆಯಾಗಿ ಮತ್ತು ತಾಯಿಯಾಗಿ ಈ ಎಲ್ಲ ಜವಾಬ್ದಾರಿಯನ್ನು ನಿಬಾಯಿಸಬೇಕಾಗಿದೆ. ಮಹಿಳೆಯರು ಸ್ವಾವಲಂಬಿ ಬದುಕಿಗಾಗಿ ಉದ್ಯೋಗ ತರಬೇತಿಯೊಂದಿಗೆ ವೃತ್ತಿ ಆರಂಭಿಸಿ ಮನೆತನದ ಗೌರವ ಹೆಚ್ಚಿಸಲು ಸಂಸ್ಕಾರಯುತ ಜೀವನ ನಡೆಸಬೇಕು. ಅಲ್ಲದೇ ಶೈಕ್ಷಣಿಕ, ಧಾರ್ಮಿಕ ಮತ್ತು ಆರ್ಥಿಕ ಸ್ವಾತಂತ್ರಕ್ಕಾಗಿ ಸ್ವಉದ್ಯೋಗದಲ್ಲಿ ತೊಡಗುವ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಕನಸು ಸೇವಾ ಪೌಂಡೇಷನ್ ತನ್ನ ಕಾರ್ಯಕ್ರಮಗಳ ಮುಖಾಂತರ ಮಹಿಳೆಯರ ಜೀವನ ಮಟ್ಟ ಸುಧಾರಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕನಸು ಸೇವಾ ಪೌಂಡೇಷನ್ ಅಧ್ಯಕ್ಷೆ ರೇಣುಕಾ ಏವೂರ ಮಾತನಾಡಿ. ಮಹಿಳೆಯರ ಸ್ವಾವಲಂಬಿ ಬದುಕಿನ ಕನಸು ಕಂಡು ನಮ್ಮ ಸಂಸ್ಥೆಗೆ “ಕನಸು” ಎಂದು ನಾಮಕರಣ ಮಾಡಿದೆ. ನಮ್ಮ ಸಂಸ್ಥೆ ಅನೇಕ ಮಹಿಳೆಯರ ಕನಸನ್ನು ನನಸು ಮಾಡುತ್ತಿರುವದು ನಮಗೆ ಸಂತಸ ತಂದಿದೆ ಅಲ್ಲದೇ ಅನೇಕ ಬಡ ಮಹಿಳೆಯರ ಜೀವನಕ್ಕೆ ದಾರಿದೀಪವಾಗಿದೆ ಎಂದು ಹೇಳಲು ಹೆಮ್ಮೆಯನಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳಾ ದೇಶಮುಖ ಮಾತನಾಡಿ. ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಅನುಭವಿಸುತ್ತಿರುವ ಎಲ್ಲ ಸವಾಲುಗಳಿಗೆ ಆರ್ಥಿಕ ಸ್ವಾತಂತ್ರ್ಯವಿಲ್ಲದಿರುವುದೇ ಕಾರಣವಾಗಿದೆ. ಕನಸು ಸೇವಾಪೌಂಡೇಷನ್ ತರಬೇತಿ ಕಾರ್ಯಕ್ರಮ ಮೂಲಕ ಮಹಿಳೆಯರ ಸಬಲೀಕರಬಕ್ಕೆ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಯಶರಾಜ್ ಘೋರ್ಪಡೆ, ಸುರೇಶ ಪತ್ತಾರ, ಡಾ. ಮಹಾಂತೇಶ ಅಂಗಡಿ, ಸಂಗಮೇಶ ಹೆರಕಲ್,ಶ್ರೀಮತಿ ಪ್ರೇಮಾ ಇಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.