
ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಮುಖ್ಯ – ಅಶೋಕಕುಮಾರ ಬಾಗಮಾರ
ಗಜೇಂದ್ರಗಡ : ಸತ್ಯಮಿಥ್ಯ (ಫೆ -13).
ಮನೆಯೆ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎಂಬುವಂತೆ. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ.ಆದ್ದರಿಂದ ನೀವು ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಇಲ್ಲದಿದ್ದರೆ ನೀವೂ ಎಷ್ಟೇ ಉನ್ನತ ಶಿಕ್ಷಣ ಪಡೆದರು ಪ್ರಯೋಜನವಾಗುವುದಿಲ್ಲ. ಶಿಕ್ಷಣದೊಂದಿಗೆ ಸಂಸ್ಕಾರ ಮುಖ್ಯ ಎಂದು ಅಶೋಕಕುಮಾರ ಬಾಗಮಾರ ಹೇಳಿದರು.
ನಿನ್ನೆ ಕೊಡಗಾನೂರ ಗ್ರಾಮದ ಸರಹದ್ದಿನಲ್ಲಿ ಬರುವ ಓಂ ಶ್ರೀ ಸಾಯಿ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 13 ನೇ ಶಾಲಾ ವಾರ್ಷಿಕೋತ್ಸವವನ್ನು ಉಧ್ಗಾಟನೆ ಮಾಡಿ ಮಾತನಾಡಿದರು.
ಡಾ. ಪವನಕುಮಾರ ದಾರಕ ಮಾತನಾಡಿ ಶಿಕ್ಷಕ ಮತ್ತು ಮಕ್ಕಳ ನಡುವಿನ ಸಂಬಂಧ ಮೊದಲು ಇದ್ದಂತೆ ಈಗ ಇಲ್ಲ ಶಿಕ್ಷಕರಿಗೆ ಮಕ್ಕಳು ಮೊದಲು ಗೌರವವನ್ನು ಕೊಡುವುದನ್ನು ಕಲಿಯಬೇಕು.ವಿನಾಕಾರಣ ಪಾಲಕರು ಶಿಕ್ಷಕರನ್ನು ಧೂಶಿಸಬಾರದು ಎಂದರು.
ಕಾರ್ಯಕ್ರಮವು ಅತಿಥಿಗಳಿಗೆ ಸ್ವಾಗತ ಮಾಡುವ ಮೂಲಕ ಆರಂಭವಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ನಿರೂಪಣೆ ಅದ್ಬುತವಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷ ಆನಂದ ಮಂತ್ರಿ ಅಧ್ಯಕ್ಷೀಯ ಭಾಷಣ ಮಾಡಿದರು, ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಅದ್ಬುತವಾದ ಮಕ್ಕಳು ಡ್ಯಾನ್ಸ ಪ್ರದಶ್ರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾದ್ಯಕ್ಷ ಸಂತೋಷ ಮಂತ್ರಿ , ಕಾರ್ಯದರ್ಶಿ ಕೃಷ್ಣಾ ಮಂತ್ರಿ ಶಾಲೆಯ ಮುಖ್ಯೋಪಾದ್ಯಾಯ ಸತೀಶ ದಳವಿ, ಹಾಗೂ ಪಾಲಕರು ಮುದ್ದು ಮಕ್ಕಳು ಇದ್ದರು.
ವರದಿ : ಚನ್ನು. ಎಸ್.