ಗಜೇಂದ್ರಗಡ : ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ.
ಸಿಎಂ ಸಿದ್ದು, ಡಿಸಿಎಂ ಡಿಕೆಶಿ ರಾಜೀನಾಮೆಗೆ ಒತ್ತಾಯ.

ಐ ಪಿ ಎಲ್ ವಿಜಯೋತ್ಸವ ವೇಳೆ ಬೆಂಗಳೂರಲ್ಲಿ ನಡೆದ ಕಾಲ್ತುಳಿತದ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಗಾರಿಕೆ ಹೊರುವಂತೆ ಬಿಜೆಪಿ ಪ್ರತಿಭಟನೆ.
ಗಜೇಂದ್ರಗಡ:ಸತ್ಯಮಿಥ್ಯ (ಜೂ -17)
ಭಾರತೀಯ ಜನತಾ ಪಾರ್ಟಿ ರೋಣ ಮತಕ್ಷೇತ್ರ ರೋಣ ಮಂಡಳದಿಂದ ಆರ್ ಸಿ ಬಿ ತಂಡದ ಐ ಪಿ ಎಲ್ ವಿಜಯೋತ್ಸವ ವೇಳೆ ಬೆಂಗಳೂರಲ್ಲಿ ನಡೆದ ಕಾಲ್ತುಳಿತದ ಸಾವಿಗೆ ರಾಜ್ಯ ಸರ್ಕಾರವೇ ಹೊಣೆಗಾರಿಕೆ ಹೊರುವಂತೆ ಹಾಗು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯ ರಾಜಿನಾಮೆಗೆ ಆಗ್ರಹಿಸಿ ನಗರದ ಕಾಲಕಾಲೇಶ್ವರ ವೃತ್ತದಲ್ಲಿ ನಿನ್ನೆ ಸೋಮವಾರ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ರೋಣ ಮಂಡಲದ ಅಧ್ಯಕ್ಷರಾದ ಉಮೇಶ್ ಮಲ್ಲಾಪುರ ಮಾತನಾಡಿ. ಆರ್ ಸಿ ಬಿ ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಯಾವ ಅಧಿಕಾರಿಯ ಅಭಿಪ್ರಾಯ ಸಂಗ್ರಹಿಸದೆ ವಿಧಾನಸೌಧದ ಮುಂದೆ ಕಾರ್ಯಕ್ರಮ ಹಮ್ಮಿಕೊಂಡು ಈ ಸಂದರ್ಭದಲ್ಲಿಯಾದ ಕಲ್ತುಳಿತಕ್ಕೆ ಅನೇಕ ಜನರ ಪ್ರಾಣ ಹಾನಿಯಾಯಿತು ಇದಕ್ಕೆಲ್ಲ ನೇರ ಹೊಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರಕರಣ ಕುರಿತು ನೈತಿಕ ಹೊಣೆಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪಕ್ಷದ ಹಿರಿಯ ಮುಖಂಡರಾದ ಅಶೋಕ ನವಲಗುಂದ, ಶಿವಾನಂದ ಮಠದ ಮಾತನಾಡಿ ರಾಜ್ಯಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ, ದಿನಬೆಳಗಾದರೆ ಸಾಕು ಅಪರಾಧ ಕೃತ್ಯಗಳು ಕಣ್ಣಿಗೆ ರಾಚುತ್ತವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕಾನೂನು ಪಾಲಿಸಬೇಕಾದ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಹತ್ತಾರು ಜನರ ಸಾವಿಗೆ ಕಾರಣವಾಗಿದೆ ಇಷ್ಟಾದರೂ ಸಿಎಂ, ಡಿಸಿಎಂ ಮಾತುಗಳು ಜನರನ್ನು ಕೆರಳಿಸುತ್ತಿವೆ. ಆದ್ದರಿಂದ ಸಿಎಂ ಡಿಸಿಎಂ ಇಬ್ಬರು ರಾಜೀನಾಮೆ ನೀಡಿ. ಸಾವಿಗೀಡಾದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಭಾಸ್ಕರ ರಾಯಬಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚವ್ಹಾಣ, ಗಜೇಂದ್ರಗಡ ನಗರದ ಅಧ್ಯಕ್ಷರಾದ ರಾಜೇಂದ್ರ ಘೋರ್ಪಡೆ ಮಂಡಲ ಪ್ರಧಾನ ಕಾರ್ಯದರ್ಶಿ ರಮೇಶ್ ವಕ್ಕರ, ಮುಖಂಡರಾದ ಮಹಾಂತೇಶ ಸೋಮನಕಟ್ಟಿ ,ಮುದಿಯಪ್ಪ ಕರಡಿ, ಬುಡ್ಡಪ್ಪ ಮೂಲಿಮನಿ, ಯುವ ಮುಖಂಡರಾದ ಕರಣ ಬಂಡಿ, ಮಾಂತೇಶ್ ಪೂಜಾರ, ಎಸ್ ಟಿ ಮೋರ್ಚಾ ಅಧ್ಯಕ್ಷ ಸಂತೋಷ ಕಡಿವಾಲ, ಯುವ ಮೋರ್ಚಾ ಅಧ್ಯಕ್ಷ ಹುಲ್ಲಪ್ಪ ಕೆಂಗಾರ, ಹಿಂದುಳಿದ ಮೋರ್ಚಾ ಅಧ್ಯಕ್ಷ ರಂಗನಾಥ ಮೇಟಿ ಎಸ್ ಸಿ ಮೋರ್ಚಾ ಅಧ್ಯಕ್ಷ ಭೀಮಪ್ಪ ಮಾದರ ಪುರಸಭೆ ಸದಸ್ಯರಾದ ಯು.ಆರ್. ಚನ್ನಮ್ಮನವರು, ಯಮನೂರು ತಿರಕೋಜಿ, ಸುಗುರೇಶ ಕಾಜಗಾರ, ದುರ್ಗಪ್ಪ ಕಟ್ಟಿಮನಿ, ಮುತ್ತಯ್ಯ ಕಾರಡಗಿ ಮಠ,ದಾನು ರಾಠೋಡ, ಅಂದಪ್ಪ ಅಂಗಡಿ, ಶಿವಕುಮಾರ ಜಾದವ, ಮುತ್ತಯ್ಯ ಬಾಳೆಕಾಯಿಮಠ, ಶಿವಾನಂದ ಜಿಡ್ಡಿ ಬಾಗಿಲ, ಬಸವರಾಜ ಕೊಟಗಿ, ವೆಂಕನಗೌಡ ಗೌಡ ಗೌಡರ, ಪಂಚಾಕ್ಷರಿ ಹರ್ಲಾಪುರಮಠ ,ರಾಜು ಘೋರ್ಪಡೆ, ಮಹೇಶ್ ಮಕ್ತಲಿ ಅನಿಲ ಪಲ್ಲೇದ, ಮಲ್ಲು ಕುರಿ, ಸಂಜುಪ್ಪ ಲಕ್ಕಿಹಾಳ, ಮಹೇಶ ಶಿವಸಿಂಪರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಚನ್ನು. ಎಸ್.