ರಾಷ್ಟ್ರ ನಿರ್ಮಾಣದಲ್ಲಿ ರಸ್ತೆಗಳ ಪಾತ್ರ ಪ್ರಮುಖ : ಬಸವರಾಜ ಬೊಮ್ಮಾಯಿ.
ಮೋದಿ - ಗಡ್ಕರಿ ನೇತೃತ್ವದಲ್ಲಿ ದಾಖಲೆ ಪ್ರಮಾಣದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ - ಬೊಮ್ಮಾಯಿ.

ರಾಷ್ಟ್ರ ನಿರ್ಮಾಣದಲ್ಲಿ ರಸ್ತೆಗಳ ಪಾತ್ರ ಪ್ರಮುಖ : ಬಸವರಾಜ ಬೊಮ್ಮಾಯಿ.
ಗಜೇಂದ್ರಗಡ : ಸತ್ಯಮಿಥ್ಯ (ಜೂ-22)
ರಸ್ತೆಗಳು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರವೆನ್ನುವ ಮಾತಿಗೆ ಅರ್ಥ ಬಂದಿದೆ. ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಮೇಲೆ ನಿತಿನ್ ಗಡ್ಕರಿಯವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಂತರ ದಾಖಲೆ ಮಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಹೊಂದಿವೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಲೋಕಸಭಾ ಸಂಸದ ಬಸವರಾಜ ಬೊಮ್ಮಾಯಿ ನುಡಿದರು.
ಅವರು ಎನ್ ಎಚ್ (ಓ)ರ ಇಪಿಸಿ ಮೋಡ್ ನ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿನ ರಾಷ್ಟೀಯ ಹೆದ್ದಾರಿ-367 ಭಾನಾಪುರ-ಗದ್ದನಕೇರಿ ಸೆಕ್ಸನ್ ರಲ್ಲಿ ಗಜೇಂದ್ರಗಡ ಪಟ್ಟಣಕ್ಕೆ ಬೈ ಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತ. ರಾಷ್ಟ್ರೀಯ ಹೆದ್ದಾರಿಗಳು ಪರಸ್ಪರ ಸೇರಿಸುವುದರಿಂದ ವ್ಯಾಪಾರ ವಹಿವಾಟು ಅಭಿವೃದ್ಧಿ ಹೊಂದಲು ಸಾಧ್ಯ ಆ ದೃಷ್ಟಿ ಕೋನದಲ್ಲಿ ರಾಷ್ಟ್ರೀಯ ಹೆದ್ದಾರಿ 367 ನ್ನು ರಾಷ್ಟ್ರೀಯ ಹೆದ್ದಾರಿ 2 ಕ್ಕೆ ಸೇರಿಸುವ ಸದುದ್ದೇಶದಿಂದ ಈ ಕಾಮಗಾರಿ ಸಹಕಾರಿಯಾಗಲಿದೆ.ಗಜೇಂದ್ರಗಡ, ಕುಕನೂರ ಮತ್ತು ಯಲಬುರ್ಗಾ ಮೂರು ಬೈಪಾಸ್ ಗಳು ನಿರ್ಮಾಣವಾಗಲಿದ್ದು ಗಜೇಂದ್ರಗಡ ಬೈಪಾಸ್ 48 ಕೋಟಿ ರೂಪಯಿ ವೆಚ್ಚದಲ್ಲಿ 5.6 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ಕಾಮಗಾರಿ ಅತ್ಯಂತ ಉತ್ತಮವಾಗಿ ನಿರ್ಮಾಣವಾಗಬೇಕು ಎಂದು ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಟಾಕೀತು ಮಾಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರೋಣ ಮತಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್. ಸ್ಥಳೀಯ ಖಾಸಗಿ ಜನರೇ ಕೋಟಿಗಟ್ಟಲೆ ಹಣ ನೀಡಿ ಜಮೀನು ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರ ರೈತರ ಭೂಮಿಯನ್ನು ಕಡಿಮೆ ಹಣಕ್ಕೆ ತೆಗೆದುಕೊಳ್ಳುವದನ್ನು ಅನ್ನದಾತರು ಈ ಕಾಮಗಾರಿಗೆ ಭೂಮಿ ಕೊಡಲು ವಿರೋಧಿಸಿದ್ದರು. ಆ ಸಂದರ್ಭದಲ್ಲಿ ನಾನು ಮತ್ತು ಸಂಸದರು ಸರ್ಕಾರದಿಂದ ರೈತರಿಗೆ ೪೫ ರಿಂದ ೫೦ ಲಕ್ಷ ರೂಪಾಯಿ ವರೆಗೆ ಹಣ ಕೊಡಿಸುವ ಭರವಸೆ ನೀಡಿದ್ದರಿಂದ ರೈತರು ಒಲ್ಲದ ಮನಸ್ಸಿನಿಂದ ಭೂಮಿಯನ್ನು ಕೊಡುತ್ತಿದ್ದಾರೆ.
ಸಂಸದರು ರೈತರ, ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ, ರೈತರಿಗೆ ಹೆಚ್ಚಿನ ಅನುದಾನ ಕೊಡಿಸುವ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಗಡ್ಕರಿಯವರ ಆಡಳಿತದಲ್ಲಿ ಕೇಂದ್ರ ಸರ್ಕಾರ ಅನೇಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೇ ಇನ್ನೂ ಸೊರಬ ಇಲ್ಲಕಲ್ಲ ರಸ್ತೆ ಅಭಿವೃದ್ಧಿ ಮಾಡಬೇಕಿದೆ. ಬಂಕಾಪೂರದಿಂದ ಗದ್ದನಕೇರಿ ರಸ್ತೆ ಕೂಡಾ ಅಭಿವೃದ್ಧಿ ಆಗಬೇಕಿದೆ. ಕೇಂದ್ರ ಸರ್ಕಾರ ಇದರ ಬಗ್ಗೆಯೂ ಕೂಡಾ ಗಮನ ಹರಿಸಬೇಕು ಹಾಗೂ ಈ ಭಾಗದ ಪ್ರಮುಖ ಕನಸು ಗದಗ – ವಾಡಿ ರೈಲು ಬಹಳ ದಿನದ ಕನಸಿನ ಮಾರ್ಗ ಬದಲು ಮಾಡಲಾಗಿದೆ. ಯಾರದೊ ವಿಚಾರಕ್ಕೆ ಆ ಕೆಲಸವು ಆಗಿಲ್ಲ, ಬಹಳ ದಿನದ ಕನಸು ನನಸು ಮಾಡಲು ಮುಂದಾಗಬೇಕು. ಕೇಂದ್ರದಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಧ್ವನಿ ಎತ್ತಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಮಾಜಿ ತಾಂ.ಪಂ ಅಧ್ಯಕ್ಷ ಇಂದಿರಾ ತೇಲಿ,ಉಮೇಶ ಮಲ್ಲಾಪೂರ, ರಾಜೇಂದ್ರ ಘೋರ್ಪಡೆ, ಅಶೋಕ ನವಲಗುಂದ, ನಿಂಗಪ್ಪ ಕೆಂಗಾರ, ಶಿವಾನಂದ ಮಠದ, ರಾಜೂ ಸಾಂಗ್ಲೀಕರ, ಮುದಿಯಪ್ಪ ಮುಧೋಳ, ಮೂಖಪ್ಪ ನಿಡಗುಂದಿ, ಮುತ್ತಣ್ಣ ಕಡಗದ, ಹನಮಂತಪ್ಪ ಹಟ್ಟಿಮನಿ, ಮುದಿಯಪ್ಪ ಕರಡಿ, ಯಮನೂರ ತಿರಕೋಜಿ, ರೂಪ್ಲೇಶ ರಾಠೋಡ, ಮುರ್ತುಜಾ ಡಾಲಾಯತ, ಉಮೇಶ ರಾಠೋಡ,ವೀರಪ್ಪ ಪಟ್ಟಣಶೆಟ್ಟಿ,ಬಸವರಾಜ ಹೂಗಾರ, ಹನಮಂತಪ್ಪ ಹಟ್ಟಿಮನಿ,ಅಂದಪ್ಪ ಬಿಚ್ಚುರ,ಉಮೇಶ ಮಲ್ಲಾಪುರ, ಚವ್ಹಾಣ, ಸೂಗಿರೇಶ ಕಾಜಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಚನ್ನು. ಎಸ್.