
ಪತ್ರಿಕಾ ರಂಗವು ಆಡಳಿತ ವರ್ಗದವರ ಅಂಕುಶವಿದ್ದತೆ : ಅನಂತ ಕಾರ್ಕಳ.
ಪತ್ರಿಕೆಗಳು ಜನರ ವಿಶ್ವಾಸಾರ್ಹತೆಗಳನ್ನು ಅರಿಯಬೇಕಿದೆ : ಸಲೀಂ ಬಳಬಟ್ಟಿ.
ಗಜೇಂದ್ರಗಡ: ಸತ್ಯಮಿಥ್ಯ (ಜು-14)
ನಗರದ ಎಸ್.ಎಮ್.ಭೂಮರೆಡ್ಡಿ ಪಿ.ಯು. ಕಾಲೇಜಿನಲ್ಲಿ ಬಿ.ಎಸ್.ಎಸ್.ಮೀಡಿಯಾ ತರಬೇತಿ ಕೇಂದ್ರ ವತಿಯಿಂದ ಮಾಧ್ಯಮ ಸಂವಾದ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಸೋಮವಾರ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಅನಂತ ಕಾರ್ಕಳ ವಿಧ್ಯಾರ್ಥಿಗಳೊಂದಿಗೆ ಮಾಧ್ಯಮ ಸಂವಾದ ನಡೆಸುತ್ತಾ ಆಲಿಸುವ ಸೌಜನ್ಯತೆಯು ಪತ್ರಿಕಾ ಮಾಧ್ಯಮದ ಮೊದಲ ಅಧ್ಯಾಯ. ಪತ್ರಕರ್ತರಾಗಬೇಕಾದವರು ಪ್ರಶ್ನಿಸುವ ಮನೋಭಾವ ಬೆಳಿಸಿಕೊಳ್ಳಬೇಕು. ಓದುಗರ ಸಂಖ್ಯೆ ಕಡಿಮೆ ಇದ್ದರು ಸಹ ಪತ್ರಿಕೆಗಳನ್ನು ಮುದ್ರಣ ಮಾಡಲಾಗುತ್ತದೆ. ಜನರ ಮನಸ್ಥಿತಿಯನ್ನು, ಸಮಾಜದ ಆಗುಹೋಗುಗಳನ್ನು ಜನರಿಗೆ ತಿಳಿಸಿ ಅದರ ಬದಲಾವಣೆಗಾಗಿ ಪತ್ರಿಕೆಗಳನ್ನು ಮದ್ರಿಸಲಾಗುತ್ತಾ ಇದೆ. ಸು. ಒಂದು ಲಕ್ಷಕ್ಕೂ ಹೆಚ್ಚು ಪತ್ರಿಕೆ, ಸು. ೫೦೦ ಕ್ಕೂ ಹೆಚ್ಚು ದೃಶ್ಯ ಮಾಧ್ಯಮಗಳು, ಸಾವಿರಾರು ಡಿಜಿಟಲ್ ಮಾಧ್ಯಮಗಳು ಇವೆ. ಇವುಗಳನ್ನು ನಾವೂ ಉತ್ತಮ ಸಮಾಜ ನಿರ್ಮಾಣ ಮಾಡಲು ಬಳಸಬೇಕು ವಿನಃ ಅನ್ಯ ಮಾರ್ಗಕ್ಕೆ ಅಲ್ಲ. ಯುವ ವಿಧ್ಯಾರ್ಥಿಗಳಿಗೆ ಪತ್ರಿಕಾ ಮಾಧ್ಯಮ ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿ ಅದರ ಐತಿಹ್ಯಗಳನ್ನು ತಿಳಿಸಿದರು.
ಬಳಿಕ ಉಪನ್ಯಾಸವನ್ನು ಜಿಲ್ಲಾ ವರದಿಗಾರರಾದ ಸಲೀಂ ಬಳಬಟ್ಟಿ ಮಾತನಾಡಿ ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ್ಯ ದೊರಕಲು ಪತ್ರಿಕೆಗಳು ಅತ್ಯವಶ್ಯಕವಾಗಿದ್ದವು. ಗಾಂಧೀಯವರು ೪ ಭಾಷೆಗಳಲ್ಲಿ ಪತ್ರಿಕೆಗಳನ್ನು ಆರಂಭಿಸಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಬಳಕೆ ಮಾಡಲು ಪತ್ರಿಕೆಗಳನ್ನು ಆರಂಭಿಸಿದರು.ಗಾಂಧಿ ಜೊತೆಗೂಡಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪತ್ರಿಕೆಗಳ ಮೂಲಕ ಹೋರಾಟ ಆರಂಭಿಸಿದರು. ಸು. ೧೮೨ ವರ್ಷಗಳು ಪತ್ರಿಕಾ ರಂಗ ಬೆಳದಿದೆ.
ಆಧುನಿಕ ಯುಗದಲ್ಲಿ ಸಾವಿರಾರು ಪತ್ರಿಕೆಗಳು, ಡಿಜಿಟಲ್ ಮಾಧ್ಯಮಗಳು ಬೆಳದಿವೆ. ಮಾಧ್ಯಮಗಳು ಜನರ ವಿಶ್ವಾಸಾರ್ಹತೆಗಳನ್ನು ಉಳಿಸಿದಾಗ ಪತ್ರಿಕಾ ಧರ್ಮ ಬೆಳೆಸಿದಂತಾಗುತ್ತದೆ. ಸಾಮಾಜಿಕ ಮಾಧ್ಯವದಲ್ಲೂ ಬರುವ ಎಲ್ಲಾ ಅಂಶಗಳನ್ನು ನಂಬಲು ಸಾಧ್ಯವಿಲ್ಲ ಅದರೆ ಅದನ್ನು ಒರೆಗಚ್ಚಿದಾಗ ಮಾತ್ರ ಸತ್ಯದ ಅರಿವು ಮೂಡುತ್ತದೆ ಯುವ ಪೀಳಿಗೆಗೆ ಅದನ್ನು ಅರಿಯವುದು ಅವಶ್ಯವಿದೆ ಎಂದರು.
ಕಾರ್ಯಕ್ರಮವನ್ನು ತಾಲೂಕಾ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತಾದ ರಾಘವೇಂದ್ರ ಕುಲಕರ್ಣಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯರಾದ ಡಾ.ಆರ್.ಎಸ್.ಜೀರೆ ವಹಿಸಿ ಮಾತನಾಡಿದರು.
ಇನ್ನೂ ಕಾರ್ಯಕ್ರಮದಲ್ಲಿ ಎಸ್.ಎಮ್.ಭೂಮರೆಡ್ಡಿ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಜಿ.ಬಿ.ಗುಡಿಮನಿ, ಎ.ಸಿ.ಎನ್. ವಾಹಿನಿಯ ಮುಖ್ಯಸ್ಥರಾದ ಕಾಶಿನಾಥ ಮಿಸ್ಕಿನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಿರಣ ನಿಡಗುಂದಿ, ಆಕಾಶ ತಾಳಿಕೋಟಿ, ಶಂಕರ ರಾಠೋಡ, ಮಸ್ತಾಕ ಹುಟಗೂರ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ.