ಸ್ಥಳೀಯ ಸುದ್ದಿಗಳು

ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜಿನಲ್ಲಿ ವ್ಯಸನಮುಕ್ತ ದಿನಾಚರಣೆ.

Share News

ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜಿನಲ್ಲಿ ವ್ಯಸನಮುಕ್ತ ದಿನಾಚರಣೆ.

ಪ್ರತಿಜ್ಞಾ ವಿಧಿ ಭೋದಿಸಿ ಮಕ್ಕಳಲ್ಲಿ ಅರಿವು ಮೂಡಿಸಿದ ಕಾರ್ಯಕ್ರಮ.

ಗಜೇಂದ್ರಗಡ : ಸತ್ಯ ಮಿಥ್ಯ (ಅ-01).

ಆಗಸ್ಟ್ 1 ರಂದು ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳವರ ಜನ್ಮದಿನದ ಅಂಗವಾಗಿ. ಕಾಲೇಜು ವಿದ್ಯಾರ್ಥಿಗಳಿಗೆ ಮದ್ಯಪಾನ, ತಂಬಾಕು, ಮಾದಕ ವಸ್ತುಗಳ ವ್ಯಸನದಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ನಂತರ ವ್ಯಸನದಿಂದ ಮುಕ್ತಗೊಳಿಸುವ ಪತಿಜ್ಞಾ ವಿಧಿ ಭೋದಿಸಿ ಮಾಹಿತಿ ನೀಡಿ ಅರ್ಥಪೂರ್ಣವಾಗಿ ಆಚರಿಸಿದರು.

ವ್ಯಸನಗಳಿಗೆ ಬಲಿಯಾದವರು ಶಾರೀರಿಕ, ಮಾನಸಿಕ ನಿಯಂತ್ರಣ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಯುವ ಪೀಳಿಗೆ ಮಾದಕ ಪದಾರ್ಥಗಳ ಗೀಳು ಅಂಟಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಮಾದಕ ವ್ಯಸನದ ಸುಳಿಗೆ ಸಿಲುಕಿದರೆ, ಸುಲಭದಲ್ಲಿ ಹೊರಬರಲು ಸಾಧ್ಯವಿಲ್ಲ, ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗಿದೆ, ದೇಶದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಉಪನ್ಯಾಸಕಿ ಅಭಿಲಾಶ ಗಂಜಿಹಾಳ ಹೇಳಿದರು.

ಉಪನ್ಯಾಸಕಿ ಆಶಾದೀಪ ಮಾತನಾಡಿ ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡದೆ ದುಶ್ಚಟಗಳ ದುಷ್ಪರಿಣಾಮ ಅರಿತು ಎಚ್ಚರದಿಂದಿದ್ದು ದೇಶದ ಸತ್ಪ್ರಜೆಗಳಾಗಿ ಬದುಕು ನಡೆಸಬೇಕು, ಮಾದಕ ವಸ್ತುಗಳ ಮೋಡಿಗೆ ಯುವ ಜನರು ಬಲಿಯಾಗದಂತೆ ಎಚ್ಚರ ವಹಿಸಲು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು, ದುಶ್ಚಟಗಳನ್ನು ತ್ಯಜಿಸುವಂತೆ ಜನಜಾಗೃತಿ ಮೂಡಿಸಲು ಮುಂದಾಗಬೇಕು, ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ಸಂಘಟಿತರಾಗಿ ಕೈ ಜೋಡಿಸಲು ಕಂಕಣಬದ್ಧರಾಗಬೇಕು ಎಂದರು .                                                                                  “ಮಧ್ಯಪಾನ, ಮಾದಕವಸ್ತು, ತಂಬಾಕು ವಸ್ತುಗಳ ಸೇವನೆಯು ನನಗೆ ಮತ್ತು ಮಾನವ ಸಮಾಜಕ್ಕೆ ಮಾರಕವೆಂದು, ಇದರಿಂದ ಮಾನವನ ದೇಹವಲ್ಲದೇ, ಮನಸ್ಸು ಮತ್ತು ಸ್ವಸ್ಥ್ಯ ಸಮಾಜ ಅನಾರೋಗ್ಯ ಪೀಡಿತವಾಗುತ್ತಿರುವುದು ಮತ್ತು ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನತೆ ಇದರ ದಾಸ್ಯಕ್ಕೆ ಒಳಗಾಗುತ್ತಿರುವುದು ತಿಳಿದಿದೆ. ಇದರಿಂದ ಮಾನವನ ಆರ್ಥಿಕ, ಸಾಮಾಜಿಕ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ, ಆದ್ದರಿಂದ ಪೂಜ್ಯ ಮ.ನಿ.ಪ್ರ. ಡಾ|| ಮಹಾಂತ ಶಿವಯೋಗಿ ಸ್ವಾಮಿಜಿಗಳ ಜನ್ಮದಿನದ ಈ ಶುಭದಿನದಂದು ನಾನು ಮಧ್ಯಪಾನ, ಮಾದಕ ವಸ್ತು, ತಂಬಾಕು ವಸ್ತುಗಳನ್ನು ತ್ಯಜಿಸುತ್ತೇನೆ ಹಾಗೂ ಇನ್ನೆಂದಿಗೂ ಮುಟ್ಟುವುದಿಲ್ಲ ಎಂದು ಪ್ರತಿಜ್ಞಾವಿಧಿ ಕೈಗೊಳ್ಳುತ್ತೇನೆ” ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಸಂಗಮೇಶ ಬಾಗೂರ, ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಶೃತಿ ನಡಕಟ್ಟಿನ, ಆನಂದ ಜೂಚನಿ, ಫಾತಿಮಾ ಐ. ವಣಗೇರಿ, ಶರಣು ಅಂಗಡಿ, ಸಿದ್ರಾಮೇಶ ಕರಬಾಶೆಟ್ಟರ, ಹನಮಪ್ಪ ನಡಕಟ್ಟಿನ, ಮಾಧುರಿ ನಾಡಗೇರ್‌, ಸಂಗೀತಾ ಕಡಿವಾಲ, ಶಿಲ್ಪಾ ಸಿಂಧೂರ, ಅಶೋಕ ಅಂಗಡಿ, ಮಲ್ಲನಗೌಡ್ರ, ಪ್ರವೀಣ ಚಿತ್ರಗಾರ, ಪ್ರಶಾಂತ ಹಾರೂಗೇರಿ, ಮಹೇಶ ಇಟಗಿ ಉಪಸ್ಥಿತರಿದ್ದರು.

ವರದಿ : ಸುರೇಶ ಬಂಡಾರಿ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!