
ವದೇಗೋಳ / ಸಂಭ್ರಮದ 79 ನೇ ಸ್ವಾತಂತ್ರ ದಿನೋತ್ಸವ.
ವದೇಗೋಳ:ಸತ್ಯಮಿಥ್ಯ (ಆ -15)
ಸ.ಕಿ.ಪ್ರಾ.ಶಾಲೆ ವದೇಗೋಳದಲ್ಲಿ ಇಂದು ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕಾಶಿಮಸಾಬ್ ಸುಂಕದರವರು ನೆರವೇರಿಸಿ ಮಾತನಾಡುತ್ತ. ಭಾರತ ದೇಶವನ್ನು ಸ್ವತಂತ್ರಗೊಳಿಸಲು ಅನೇಕ ಜನರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ್ದಾರೆ. ಅವರೆಲ್ಲರನ್ನು ಇಂದು ಸ್ಮರಿಸಬೇಕು ಮತ್ತು ಅವರ ಬಗ್ಗೆ ನಮ್ಮ ಮಕ್ಕಳಿಗೆ ಕಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶಂಕ್ರಗೌಡ ಗೌಡರ ವಿದ್ಯಾರ್ಥಿಗಳಿಗೆ ನೋಟ ಬುಕ್ ಪೆನ್ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಕುಂಟೋಜಿ ಗ್ರಾಮ ಪಂಚಾಯತ್ ಸದಸ್ಯ ಬಸವರಾಜ ಕುರಿ ಭಾಗವಯಿಸಿದ್ದರು. ಗ್ರಾಮದ ಗುರುಹಿರಿಯರು ಸಮಿತಿಯ ಸರ್ವ ಸದಸ್ಯರು ಹಾಗೂ ಪಾಲಕರು ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮಾರುತಿ ಬುಟ್ಟಾ ಹಾಗೂ ಪುಟ್ಟಪ್ಪ ಲಮಾಣಿ ಶಿಕ್ಷಕರು ನೆಡೆಸಿಕೊಟ್ಟರು.
ವರದಿ : ಸುರೇಶ ಬಂಡಾರಿ.