
ಮಕ್ಕಳಿಗೆ ಉಚಿತ ನೋಟ ಬುಕ್ ವಿತರಿಸುವ ಮೂಲಕ ಮಾಜಿ ಸಚಿವ ಕೆ.ಜಿ. ಬಂಡಿಯವರ ಜನ್ಮದಿನಾಚರಣೆ.
ಗಜೇಂದ್ರಗಡ : ಸತ್ಯಮಿಥ್ಯ (ಆ-19).
ಗಜೇಂದ್ರಗಡ ಬಿಜೆಪಿ ನಗರ ಘಟಕ ಹಾಗೂ ಬಿಜೆಪಿ ರೋಣ ಮಂಡಲ ಹಿಂದುಳಿದ ಮೋರ್ಚಾದ ವತಿಯಿಂದ ಮಾಜಿ ಸಚಿವರಾದ ಕಳಕಪ್ಪ ಬಂಡಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಪಟ್ಟಣದ ರೋಣ ರಸ್ತೆಯಲ್ಲಿರುವ ಅಲೆಮಾರಿ ಜನಾಂಗದ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಿಹಿಯನ್ನು ಹಂಚುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಳಕಪ್ಪ ಬಂಡಿಯವರ ಸುಪುತ್ರದ ಕರಣ್ ಬಂಡಿ ಬಿಜೆಪಿಯ ಹಿರಿಯ ಮುಖಂಡರಾದ ಶಿವಾನಂದ ಮಠದ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ರಾಜೇಂದ್ರ ಘೋರ್ಪಡೆ. ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ರಂಗನಾಥ ಮೇಟಿ, ಗಜೇಂದ್ರಗಡ ಪುರಸಭೆಯ ಸದಸ್ಯರಾದ ಯಮನೂರಪ್ಪ ತೀರಕೋಜಿ, ರೂಪಲೇಶ ರಾಠೋಡ್, ಯು ಆರ್ ಚನ್ನಮ್ಮನವರ ಹಾಗೂ ವಿವೇಕಾನಂದ ಆಶ್ರಮ ಶಾಲೆಯ ಅಧ್ಯಕ್ಷರಾದ ವಿನಾಯಕ ಜಾದವ ಬಿಜೆಪಿ ರೋಣ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಬಾಳೋಜಿರಾವ್ ಭೋಸ್ಲೆ, ಮುಖಂಡರಾದ ಮಹಾತೇಶ ಪೂಜಾರ, ಸುಗೀರೇಶ ಕಾಜಗಾರ,ಬದ್ರಿ ಜೋಷಿ ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ : ಸುರೇಶ ಬಂಡಾರಿ.