
ಬೆಟಗೇರಿ : ಪೊಲೀಸರ ಕಾರ್ಯಚರಣೆ ಮನೆ ಕಳ್ಳತನದ ಆರೋಪಿಗಳ ಬಂಧನ.
401,900/- ರೂಗಳ ಕಿಮ್ಮತ್ತಿನ ಬಂಗಾರ, ಬೆಳ್ಳಿಯ ಆಭರಣಗಳು ವಶಕ್ಕೆ.
ಗದಗ : ಸತ್ಯಮಿಥ್ಯ (ಆ-20).
ನಗರದ ಬೆಟಗೇರಿ ಪೊಲೀಸರ ಕಾರ್ಯಚರಣೆ ಮೂಲಕ ಮನೆ ಕಳ್ಳತನದ ಆರೋಪಿಗಳನ್ನು ಬಂಧಿಸಿ ಆರೋಪಿಯಿಂದ 401,900/- ರೂಗಳ ಕಿಮ್ಮತ್ತಿನ ಬಂಗಾರ, ಬೆಳ್ಳಿಯ ಆಭರಣಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಕುರಿತು ಪ್ರಕಾಶ ತಂದೆ ಶಂಕ್ರಪ್ಪ ಗಟ್ಟಿರವರ ಮಾರುತಿ ನಗರ, 1 ನೇ ಕ್ರಾಸ್ 3 ನೇ ಅಡ್ಡ ರಸ್ತೆಯಲ್ಲಿರುವ ಅವರು ಮನೆಯ ಕೀಲಿ ಹಾಕಿಕೊಂಡು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆಯಲ್ಲಿ ಆರೋಪಿಗಳು
ಮನೆಯ ಮುಂದಿನ ಬಾಗಿಲನ್ನು ಮುರಿದು ಒಳಗೆ ಹೋಗಿ ಟ್ರೇಜರಿಯ ಲಾಕರ್ ಮುರಿದು 104500/- ರೂಗಳು ಮತ್ತು 25,000/- ರೂ ಕಿಮ್ಮತ್ತಿನ 5 ಗ್ರಾಂ ತೂಕದ ಬಂಗಾರ ಆಭರಣಗಳು ಹಾಗೂ 1400/-ರೂ ಕಿಮ್ಮತ್ತಿನ ಬೆಳ್ಳಿಯ ಆಭರಣಗಳು. 100 ರೂ ಕಿಮ್ಮತ್ತಿನ ಒಂದು ಕಾಲೇಜ್ ಬ್ಯಾಗ್‌ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಪ್ರಕರಣದ ಕುರಿತು ಸಂಜೀವ ತಂದೆ ಶಂಕರಲಾಲ ಚವ್ಹಾಣ, ಕೆ.ಸಿ. ರಾಣಿ ರಸ್ತೆ, ಮಾಡಲ್ ಹೈಸ್ಕೂಲ್ ಎದರುಗಡೆ ಇವರು ಬೆಟಗೇರಿ ಸೆಟ್ಲಮೆಂಟ್ 6 ನೇ ಕ್ರಾಸ್‌ನಲ್ಲಿ ವಾಸವಿರುವ ತಮ್ಮ ಸಹೋದರ ಆನಂದ @ ವಿಕಾಸ ತಂದೆ ಶಂಕರಲಾಲ ಚವ್ಹಾಣ ಅವರು ಮನೆಯ ಕೀಲಿ ಹಾಕಿಕೊಂಡು ಉತ್ತರ ಪ್ರದೇಶ ರಾಜ್ಯದ ಆಯೋಧ್ಯ ನಗರದಲ್ಲಿ ನಡೆಯುತ್ತಿದ್ದ ಕುಂಬಮೇಳಕ್ಕೆ ಹೋದ ವೇಳೆಯಲ್ಲಿ ಆರೋಪಿಗಳು ಮನೆಯ ಮುಂದಿನ ಗೇಟ್ ಮತ್ತು ಮುಂದಿನ ಬಾಗಿಲಿಗೆ ಹಾಕಿರುವ ಕೀಲಿಯನ್ನು ಮೀಟಿ ಮುರಿದು ಒಳಗೆ ಹೋಗಿ ದೇವರ ಕೋಣೆಯಲ್ಲಿಟ್ಟಿದ್ದ 30,000/- ರೂಗಳು ಮತ್ತು 90.000/-ರೂಗಳ ಕಿಮ್ಮತಿನ 19.6 ಗ್ರಾಂ ತೂಕದ ಬಂಗಾರದ ಆಭರಣಗಳು, ನಾಣ್ಯಗಳನ್ನು ಮತ್ತು 500/-ರೂ ಕಿಮ್ಮತ್ತಿನ 8 ಗ್ರಾಂ ತೂಕದ ಬೆಳ್ಳಿಯ ನಾಣ್ಯಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಮನೆಗಳನ್ನು ಕಳ್ಳತನ ಮಾಡಿದ ಪ್ರಶಾಂತಕುಮಾರ @ ಪ್ರಶಾಂತ @ ಮುತ್ತು ತಂದೆ ವೆಂಕಟೇಶ ಬಿನ್ನಾಳ, ಮಂಜುನಾಥ ತಂದೆ ಚನ್ನಪ್ಪ ಅಮರಶೆಟ್ಟಿ ಆರೋಪಿಗಳು
ಆರೋಪಿಗಳಿಂದ ಒಟ್ಟು 401,900/- ರೂಗಳ ಕಿಮ್ಮತ್ತಿನ ಕಳ್ಳತನವಾದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು, ಕಳ್ಳತನ ಮಾಡಿದ ಹಣದಲ್ಲಿ ಖರೀದಿ ಮಾಡಿದ ಒಂದು ಕಾರು, ಕೃತ್ಯಕ್ಕೆ ಬಳಸಿದ ಒಂದು ಆಟೋ ರೀಕ್ಷಾ ಹಾಗೂ ಒಂದು ಕಬ್ಬಿಣದ ರಾಡನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಮನೆಗಳ್ಳತನ ಪ್ರಕರಣಗಳಲ್ಲಿ ಮಾನ್ಯ ರೋಹನ ಜಗದೀಶ, ಪೊಲೀಸ್ ಅಧೀಕ್ಷಕರು ರವರು ಹಾಗೂ ಮಹಾಂತೇಶ ಸಜ್ಜನ, ಪೊಲೀಸ್ ಉಪ ಅಧೀಕ್ಷಕರು ಸಿ.ಇ.ಎನ್. ಪೊಲೀಸ್ ಠಾಣೆ, ಮುರ್ತುಜಾ ಖಾದ್ರಿ, ಪೋಲೀಸ್ ಉಪ-ಅಧೀಕ್ಷಕರು ಗದಗ ಉಪ ವಿಭಾಗ. ಧೀರಜ, ಬಿ. ಶಿಂದೆ, ಸಿಪಿಐ ಬೆಟಗೇರಿ ವೃತ್ತ ಇವರ ಮಾರ್ಗದರ್ಶನದಲ್ಲಿ ಎಲ್.ಎಂ. ಆರಿ. ಪಿ.ಎಸ್.ಐ ಬೆಟಗೇರಿ ಪೊಲೀಸ್ ಠಾಣೆ
ಎಸ್.ಎ. ಗುಡ್ಡಿಮಠ, ಆರ್.ವಿ. ಪಾಟೀಲ್ ಪಿ.ಆರ್. ರಾಠೋಡ, ಪಿ.ಎ.ಭರಮಗೌಡ್ರ, ಆರ್.ಎನ್.ನಾಯಕ ಹಾಗೂ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿಯವರಾದ ಶ್ರೀ ಗುರುರಾಜ ಬೂದಿಹಾಳ, ಎ.ಆರ್.ಎಸ್.ಐ, ಎಸ್.ಸಿ. ಕೊರಡೂರ, ನೇದ್ದವರನ್ನೊಳಗೊಂಡ ತಂಡವನ್ನು ರಚಿಸಲಾಯಿತು.
ಈ ಪತ್ತೆ ಕಾರ್ಯವನ್ನು ಕೈಕೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ರೋಹನ ಜಗದೀಶ,ಪೊಲೀಸ್ ಅಧೀಕ್ಷಕರವರು ಶ್ಲಾಘಿಸಿದ್ದಾರೆ.
ವರದಿ:ಮುತ್ತು ಗೋಸಲ.