
ವೈಭವದಿಂದ ಜರುಗಿದ ಶಿವಭಜನೆ ಮಹಾಮಂಗಲೋತ್ಸವ.
ತಾವರಗೇರಾ: ಸತ್ಯಮಿಥ್ಯ (ಆ – 22).
ಪಟ್ಟಣದ ಕುರುಹಿನಶೆಟ್ಟಿ ಟ್ರಸ್ಟ್ ಹಾಗೂ ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ತಾವರಗೇರಾ ಇವರ ವತಿಯಿಂದ ನಡೆದ ಶಿವ ಭಜನೆಯ ಮಹಾಮಂಗಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಊರಿನ ಪ್ರಮುಖ ಬೀದಿಗಳಲ್ಲಿ ನೀಲಕಂಠೇಶ್ವರ ಭಾವಚಿತ್ರವನ್ನು, ಸಕಲ ವಾದ್ಯಗಳ ಜೈಂಕಾರದಲ್ಲಿ ಭಕ್ತಿಯ ಘೋಷಣೆಗಳೊಂದಿಗೆ ನೂರಾರು ಮಹಿಳೆಯರು ಪೂರ್ಣ ಕುಂಭದದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು .
ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿತ್ತು ಜೊತೆಗೆ ನೂರಾರು ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಟ್ರಸ್ಟ್ ವತಿಯಿಂದ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಲಕ್ಷ್ಮಣಪ್ಪ ಶಿರವಾರ, ಹನುಮಂತಪ್ಪ ಐಲಿ, ನಾರಾಯಣಪ್ಪ ಐಲಿ, ಮಹೇಶ ಉಪ್ಪಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:ಎಸ್ ಪಿ ಶಿರವಾರ.