
ಹುತಾತ್ಮ ವೀರಯೋಧ ಅಮರ್ ಹೈ ಘೋಷಣೆಯೊಂದಿಗೆ ಪುಷ್ಪಾರ್ಪಣೆ.
ಗದಗ : ಸತ್ಯಮಿಥ್ಯ (ಸೆ-11)
ಗದಗ ತಾಲೂಕು ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಗಿಡಮಲ್ಲನವರ ಅವರು ಪಂಜಾಬ್ ರಾಜ್ಯದ ಜಲಂಧರನಲ್ಲಿ ಕರ್ತವ್ಯದಲ್ಲಿ ಇದ್ದಾಗ ಹುತಾತ್ಮನಾಗಿದ್ದು ಹುತಾತ್ಮ ಯೋಧನಿಗೆ ಇಂದು ಬೆಟಗೇರಿಯಲ್ಲಿ ಹುತಾತ್ಮ ವೀರಯೋಧ ಅಮರ್ ಹೈ ಎಂಬ ಘೋಷಣೆಯೊಂದಿಗೆ ಪುಷ್ಪಾರ್ಪಣೆಯನ್ನು ಮಾಡುವುದರೊಂದಿಗೆ ನಮನ ಸಲ್ಲಿಸಿದರು.
ಹುತಾತ್ಮ ಯೋಧನಿಗೆ ವಿವಿಧ ಸಂಘ-ಸಂಸ್ಥೆಗಳು ಗಜಾನನ ಮಂಡಳಿಯವರು ಸೇರಿದಂತೆ ಅಪಾರ ಜನತೆ ಸೆಲ್ಯೂಟ್ ಮೂಲಕ ಯೋಧನ ಹೆಸರನ್ನು ಘೋಷಣೆಯೊಂದಿಗೆ ನಮನ ಸಲ್ಲಿಸಿದರು.
ವರದಿ : ಮುತ್ತು ಗೋಸಲ.