
ಶಿಕ್ಷಕ ವೀರೇಶ ಯಲಿಗಾರಗೆ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ ಪ್ರಧಾನ.
ಗದಗ : ಸತ್ಯಮಿಥ್ಯ ( ಸೆ-13).
ಬೆಂಗಳೂರಿನ ಭಾರತೀಯ ಶಿಕ್ಷಣ ಪ್ರಶಸ್ತಿ-2025 ಹಾಗೂ ಎನಿಎಲ್ಪ್ ಸಂಸ್ಥೆ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಸಮಾರಂಭ ನೆಡೆಯಿತು.
ಗದಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕನಾಗಿ ಗಜೇಂದ್ರಗಡದ ವೀರೇಶ ಯಲಿಗಾರ ಆಯ್ಕೆಯಾಗಿದ್ದರು.
ವಿರೇಶ ಯಲಿಗಾರರವರಿಗೆ ಕಳೆದ ಎರಡುದಿನಗಳ ಹಿಂದೆ ಬೆಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಡಾ.ಮಲ್ಲಯ್ಯ ಶಾಂತಮುನಿ ಮಹಾಸ್ವಾಮಿಗಳು,ನ್ಯಾಯ ಮೂರ್ತಿ ಸಂತೋಷ ಹೆಗಡೆ,ಮಾಜಿ ಸಚಿವ ಎಚ್. ಆಂಜನೇಯ,ನಟ ಚೇತನ್,ಜಿ ಎಚ್ ಪಿ ಯು ನ ನಿರ್ದೇಶಕರಾದ ಹೂಡಿ ಚಿನ್ನಿ, ಶಿಕ್ಷಣ ತಜ್ಞ ರಂಜನ್ ರಾಜೋರ ಶರ್ಮಾ ಉಪಸ್ಥಿತರಿದ್ದರು.
ಪ್ರಶಸ್ತಿ ಪಡೆದು ನಮ್ಮ ಪತ್ರಿಕಾ ಪ್ರತಿನಿಧಿಯೊಂದಿಗೆಮಾತನಾಡಿದ ಶಿಕ್ಷಕ ವೀರೇಶ.ನನ್ನ ಶೈಕ್ಷಣಿಕ ಸೇವೆ ಗಮನಿಸಿ ಪ್ರಶಸ್ತಿ ನೀಡಿರುವದು ನನ್ನ ಜವಾಬ್ದಾರಿ ಹೆಚ್ಚಿಸಿದೆ ನನ್ನ ಈ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ, ವಿಶೇಷವಾಗಿ ನನ್ನ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ನನಗೆ ಬೆಂಬಲ ನೀಡಿದ ನನ್ನ ತಂದೆ ತಾಯಿ ಹಾಗೂ ನನ್ನ ಅಣ್ಣಂದಿರಿಗೆ ಧನ್ಯವಾದಗಳು ಈ ಅವಕಾಶವನ್ನು ನನ್ನ ಜೀವನದಲ್ಲಿ ಮತ್ತು ನನ್ನ ವೃತ್ತಿಜೀವನದಲ್ಲಿ ಇನ್ನಷ್ಟು ಉತ್ತಮವಾಗಿ ಮತ್ತು ಪ್ರೇರಣೆಯಿಂದ ಕೆಲಸ ಮಾಡಲು ಬಳಸುತ್ತೇನೆ.” ಎಂದರು.
ವರದಿ : ಸುರೇಶ ಬಂಡಾರಿ.