
ಪಂಡಿತ್ ದೀನದಯಾಳ ಉಪಾಧ್ಯಾಯರ ಜೀವನ ಯುವಪೀಳಿಗೆಗೆ ಮಾರ್ಗದರ್ಶನ – ಮಾಜಿ ಸಚಿವ ಕಳಕಪ್ಪ ಬಂಡಿ.

ಗಜೇಂದ್ರಗಡ:ಸತ್ಯಮಿಥ್ಯ (ಸೆ-26).
ಸರಳ ಜೀವನ ಉನ್ನತ ಚಿಂತನೆ ಹೊಂದಿದ್ದ ಪಂಡಿತ್ ದೀನದಯಾಳ ಉಪಾಧ್ಯಾಯರವರ ಸಾಮಾಜಿಕ ಚಿಂತನೆಗಳನ್ನು ಇಂದಿನ ಯುವ ಜನತೆ ಮೈಗೂಡಿಸಿಕೊಳ್ಳುವದರ ಮೂಲಕ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕೆಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಸ್ಥಳೀಯ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಡಿಯಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಉಮೇಶ ಮಲ್ಲಾಪುರ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಗೋರ್ಪಡೆ,ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ನಿಂಗಪ್ಪ ಕೆಂಗಾರ, ಪಕ್ಷದ ಮುಖಂಡರಾದ ಶಿವಾನಂದ ಮಠದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌಹಾನ್, ಮಾಜಿ ಪುರಸಭೆ ಅಧ್ಯಕ್ಷ ಈರಪ್ಪ ಪಟ್ಟಣಶೆಟ್ಟಿ,ಪುರಸಭೆ ಸದಸ್ಯರಾದ ಯಮನೂರು ತಿರಕೋಜಿ, ರೂಪಲೇಶ್ ರಾಠೋಡ್, ಮಾಂತೇಶ ಪೂಜಾರ, ದುರ್ಗಪ್ಪ ಸಂದಿಮನಿ, ಯಡಿಯೂರಪ್ಪ ಅಬ್ಬಿಗೇರಿ,ಅಂದಪ್ಪ ಅಂಗಡಿ, ರಂಗನಾಥ ಮೇಟಿ,ಕಳಕಪ್ಪ ರಾಠೋಡ್, ಕರಣ ಬಂಡಿ ದೇವರಾಜ ವರಗಾ,ಶಿವಾನಂದ ಕಟ್ಟಿಗಾಲ, ರಾಜು ರಜಪೂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಸುರೇಶ ಬಂಡಾರಿ.