ಕನ್ನಡ ಭಾಷೆ ಶ್ರೀಮಂತಗೊಳ್ಳಲು ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯದ ಕೊಡುಗೆ ದೊಡ್ಡದು – ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ.

ಕನ್ನಡ ಭಾಷೆ ಶ್ರೀಮಂತಗೊಳ್ಳಲು ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯದ ಕೊಡುಗೆ ದೊಡ್ಡದು – ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ.

ಗಜೇಂದ್ರಗಡ-ಸತ್ಯಮಿಥ್ಯ (ನ-11)
ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯದ ಕೊಡುಗೆ ದೊಡ್ಡದು.ಕನ್ನಡ ಭಾಷೆಗೆ ಏಳು ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು ಕನ್ನಡಿಗರ ಹೆಮ್ಮೆ. ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿಸಲು 12 ನೇ ಶತಮಾನದ ಶಿವಶರಣೆಯರ ಕೊಡುಗೆ ಅಪಾರ. ಈ ದೇಶದಲ್ಲಿ ಸಮಾನತೆಯನ್ನು ಪ್ರತಿಪಾದಿಸಿದವರಲ್ಲಿ ಬುದ್ಧ ಬಸವ ಅಂಬೇಡ್ಕರ್ ಮೊದಲಿಗರು. ವಚನ ಸಾಹಿತ್ಯ ಮತ್ತು ಸಂವಿಧಾನ ಅನೇಕ ಸಾಮಿಪ್ಯಗಳನ್ನು ಹೊಂದಿವೆ ಎಂದು ಶಿರೋಳ-ಭೈರನಹಟ್ಟಿ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ‘ಕನ್ನಡ ಸಂಭ್ರಮ’ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಎನ್. ಎಮ್. ಪವಾಡಿಗೌಡ್ರ ಮಾತನಾಡಿ. 12 ನೇ ಶತಮಾನದ ಶರಣರು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಮಾನತೆ ಕಾಯಕ ಮಹತ್ವವನ್ನು ಜನರಿಗೆ ಸರಳವಾಗಿ ತಿಳಿಸಿದ್ದಾರೆ ಎಂದರು.
ಬಸವರಾಜ ಕೊಟಗಿ, ಸಂಗಮೇಶ ಬಾಗೂರ, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರೇಶ ಗಾಣಿಗೇರ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಲಲಿತಾ ಪವಾರ, ರವೀಂದ್ರ ಕವಡಿಮಟ್ಟಿ, ಲಕ್ಷ್ಮಿ ಓದ್ಸುಮಠ, ಬಸವರಾಜ ಮೂಲಿಮನಿ, ರಮೇಶ ಮಾಸ್ತಿ, ಬಸವರಾಜ ಮುನವಳ್ಳಿ, ಕಳಕಯ್ಯ ಸಾಲಿಮಠ, ರವಿ ಗಡೇದವರ,ಎಸ್ ಎಸ್ ನರೇಗಲ್, ಅಭಿಲಾಶ ಗಂಜಿಹಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಸುರೇಶ ಬಂಡಾರಿ.




