2.6 ಕೋಟಿ ರೂಪಾಯಿ ಕಾಮಗಾರಿಗೆ ಶಾಸಕ ಜಿ. ಎಸ್. ಪಾಟೀಲ ಚಾಲನೆ.
ಗ್ಯಾರಂಟಿಗಳೊಂದಿಗೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದಲ್ಲಿ ಹಣ ಇಲ್ಲ ಎಂಬ ವಿರೋಧ ಪಕ್ಷದ ಮಾತು ಸುಳ್ಳು- ಜಿ ಎಸ್ ಪಿ.

2.6 ಕೋಟಿ ರೂಪಾಯಿ ಕಾಮಗಾರಿಗೆ ಶಾಸಕ ಜಿ. ಎಸ್. ಪಾಟೀಲ (ಚಾಲನೆ)ಗುದ್ದಲಿ ಪೂಜೆ.

ಗ್ಯಾರಂಟಿಗಳೊಂದಿಗೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದಲ್ಲಿ ಹಣ ಇಲ್ಲ ಎಂಬ ವಿರೋಧ ಪಕ್ಷದ ಮಾತು ಸುಳ್ಳು- ಜಿ ಎಸ್ ಪಿ
ಗಜೇಂದ್ರಗಡ : ಸತ್ಯಮಿಥ್ಯ (ನ -13)
ತಾಲೂಕಿನ ಅನೇಕ ಹಳ್ಳಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸ್ಟೇಟ್ ಮಿನಿರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್.ಪಾಟೀಲ 2.6 ಕೋಟಿ ರೂ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ವಿರೋಧ ಪಕ್ಷದವರು ಸರ್ಕಾರದಲ್ಲಿ ದುಡ್ಡಿಲ್ಲ ಎಂಬ ಹೇಳಿಕೆ ಸುಳ್ಳು ಎಂಬುವದನ್ನು ಇಂದಿನ ಭೂಮಿಪೂಜೆ ಕಾಮಗಾರಿ ಕಾರ್ಯಕ್ರಮ ನೋಡಿದರೆ ಅರ್ಥವಾಗುತ್ತದೆ ಎಂದರು.

ತಾಲೂಕಿನ ಬೆಣಚಮಟ್ಟಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಸಿ ಡಿ ನಿರ್ಮಾಣ, 10 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ.ನಾಗರಸಕೊಪ್ಪ ತಾಂಡಾದಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಮಿಠುಲಾಲ್ ದೇವಸ್ಥಾನದ ಭೂಮಿ ಪೂಜೆ. ನಾಗರಸಕೊಪ್ಪ ಗ್ರಾಮದಲ್ಲಿ 40 ಲಕ್ಷ ರೂ ವೆಚ್ಚದಲ್ಲಿ ಹುಲಗೆಮ್ಮನ ಗುಡಿ ಹತ್ತಿರ ಸಿ ಡಿ ನಿರ್ಮಾಣ. ಮಾಟರಂಗಿ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ಸಿ ಸಿ ರಸ್ತೆ ಕಾಮಗಾರಿ ಭೂಮಿ ಪೂಜೆ. ಗೋಗೇರಿ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಮರಾಠ ಸಮುದಾಯ ಸಮುದಾಯ ಭವನ ಕಟ್ಟಡ ನಿರ್ಮಾಣ ಅಡಿಗಲ್ ಮತ್ತು 70 ಲಕ್ಷ ವೆಚ್ಚದಲ್ಲಿ ಸಿ ಸಿ ರಸ್ತೆ ಭೂಮಿ ಪೂಜೆ ಹಾಗೂ 8 ಲಕ್ಷ ರೂ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆ ಕೊಠಡಿ ಉದ್ಘಾಟನೆ. ರಾಜೂರ ಗ್ರಾಮದಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ಸಿ ಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಶೋಕ ಬಾಗಮಾರ,ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ಮುದಿಯಪ್ಪ ಮುಧೋಳ, ಕೆ. ಎಸ್ ಕೊಡತಗೇರಿ, ಶ್ರೀಧರ ಗಂಜಿಗೌಡ್ರ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಅನೇಕರು ಇದ್ದರು.




