
ಮರೆಯಲಾಗದ ಮಾಣಿಕ್ಯನ ನಿಧನಕ್ಕೆ ಕಂಬನಿ ಮಿಡಿದ ಗ್ರಾಮಸ್ಥರು.

ಇಟಗಿ : ಸತ್ಯಮಿಥ್ಯ ( ನ-18)
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಹಾಗೂ ಗ್ರಾಮಸ್ಥರ ಪ್ರೀತಿಗೆ ಪಾತರರಾಗಿದ್ದ ಗ್ರಾಮದ ಹಿರಿಯರಾದ ಧರ್ಮಪ್ಪ ಜಡದೇಲಿ ಅವರು ಇಂದು ನಿಧನರಾಗಿದ್ದರೆ ಎಂಬ ಸುದ್ದಿ ಗ್ರಾಮದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಗ್ರಾಮಸ್ಥರು ಕಂಬಿನಿ ಮಿಡಿದಿದ್ದಾರೆ.
ಗ್ರಾಮದಲ್ಲಿ ಅಪಾರವಾದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದ ಧರ್ಮಪ್ಪ ಜಡದೇಲಿಯವರು. ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವ ಹಾಗೂ ಆತ್ಮೀಯತೆಯಿಂದ ಮಾತನಾಡಿಸುವುದರ ಮೂಲಕ ಗ್ರಾಮಸ್ಥರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು.
ಗ್ರಾಮದಲ್ಲಿ ಅವರನ್ನು ಡಿಸಿ ಧರ್ಮಪ್ಪ ಎಂದೇ ಕರೆಯುತ್ತಿದ್ದರು. ಜಿಲ್ಲೆಗೆ ಎಷ್ಟೋ ಜನ ಜಿಲ್ಲಾಧಿಕಾರಿಗಳು ಬಂದರು ನಮ್ಮ ಗ್ರಾಮಕ್ಕೆ ಅವರು ಶಾಶ್ವತವಾಗಿ ಡಿಸಿ ಧರ್ಮಪ್ಪ ಎಂದು ಅವರನ್ನು ಗ್ರಾಮಸ್ಥರು ಹೇಳುವುದರ ಮೂಲಕ ಅವರ ಮೇಲೆ ಇಟ್ಟಿರುವ ಅಪಾರ ಪ್ರೀತಿಗೆ ಕರೆಯುತ್ತಿದ್ದರು.
ಗ್ರಾಮ ದೇವತೆ ಶ್ರೀ ಇಟಗಿ ಭೀಮಾಂಬಿಕೆಯ ಪರಮ ಭಕ್ತರಾಗಿರುವ ಅವರು ಪ್ರತಿನಿತ್ಯವೂ ಬೆಳಗ್ಗೆ ದೇವಿಯ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸುತ್ತಿದ್ದರು ಅವರು ದೇವಿಯ ಪರಮ ಭಕ್ತರಾಗಿದ್ದರು.
ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದ ಅವರು ಗ್ರಾಮದಲ್ಲಿ ಪ್ರತಿಯೊಂದು ಸಾಮಾಜಿಕ ಕಾರ್ಯಗಳಲ್ಲಿ ಮುಂದಾಳತ್ವವನ್ನು ವಹಿಸಿ ಗ್ರಾಮದ ಅಭಿವೃದ್ಧಿಗಳ ಕುರಿತಂತೆ ಕನಸು ಕಂಡಿದ್ದ ಅವರು ಗ್ರಾಮ ಅಭಿವೃದ್ಧಿಗಳ ಕುರಿತಂತೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವುದರೊಂದಿಗೆ ಗ್ರಾಮದ ಅಭಿವೃದ್ಧಿಯ ಹರಿಕಾರನನ್ನು ಕಳೆದುಕೊಂಡಂತೆ ಆಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯ ಮನೆಯ ಸಮಾರಂಭ ಸೇರಿದಂತೆ ದುಃಖದ ಪರಿಸ್ಥಿತಿಗಳಲ್ಲಿ ಮನೆಯ ಒಬ್ಬ ಹಿರಿಯನಂತೆ ವ್ಯಕ್ತಿತ್ವದ ನಡತೆಯೊಂದಿಗೆ ಜನರ ಪ್ರೀತಿಗೆ ಪಾತ್ರರಾಗಿ ಇಂದು ನಿಧನರಾಗಿದ್ದು ಅವರ ನಿಧನದಿಂದಾಗಿ ದುಃಖವಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಅವರ ನಿಧನದಿಂದಾಗಿ ಅಪಾರ ದುಃಖಕ್ಕೆ ಒಳಗಾದ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವಂತಹ ಶಕ್ತಿ ಕೊಡಲಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ವರದಿ :ಮುತ್ತು ಗೋಸಲ .




