ಕ್ರಿಕೆಟ್ ಆಟಗಾರರಿಂದ ಅಂಬೇಡ್ಕರ್ ಜಯಂತಿ ಆಚರಣೆ.
ಮಾನವಕುಲಕ್ಕೆ ಸಮಾನತೆ ಕಲ್ಪಿಸಿದ ಮಹಾನ್ ಚೇತನ ಅಂಬೇಡ್ಕರ್ - ಬಸವರಾಜ ನಿಡಗುಂದಿ.

ಕ್ರಿಕೆಟ್ ಆಟಗಾರರಿಂದ ಅಂಬೇಡ್ಕರ್ ಜಯಂತಿ ಆಚರಣೆ.

ಗಜೇಂದ್ರಗಡ:ಸತ್ಯಮಿಥ್ಯ (ಎ -15).
ಪಟ್ಟಣದ ಎಸ್. ಎಂ. ಭೂಮರಡ್ಡಿ ಕಾಲೇಜ್ ಮೈದಾನದಲ್ಲಿ ಆಯೋಜಿಸಿರುವ ವಾರ್ಡ್ ವೈಸ್ ಕ್ರಿಕೆಟ್ ಟೂರ್ನಾಮೆಂಟ್ ಮೈದಾನದಲ್ಲಿ ಆಟಗಾರರಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ನಿಡಗುಂದಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಇಡೀ ಮಾನವ ಕುಲಕ್ಕೆ ಸಮಾನತೆ ಕಲ್ಪಿಸಿದ್ದಾರೆ. ಹಿಂದುಳಿದ ವರ್ಗದ ಜನತೆಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ, ಅವರು ಇತರರಂತೆ ಮೇಲ್ಪಂಕ್ತಿಗೆ ಬರಲಿ ಎಂದು ಸಂವಿಧಾನ ರಚಿಸಿದ್ದಾರೆ. ಅವರ ಮುಂದಾಲೋಚನೆ ಇಡೀ ಮಾನವ ಕುಲಕ್ಕೆ ಈಗ ಬೆಳಕಾಗಿದೆ ಎಂದರು.
ಭಜಂತ್ರಿ ಸಮಾಜದ ಮಾಜಿ ಅಧ್ಯಕ್ಷ ರವಿ ಭಜಂತ್ರಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಒಂದೇ ದಿನ ಆಚರಣೆ ಮಾಡುವುದಕ್ಕಿಂತ ವರ್ಷ ಪೂರ್ತಿ ಆಚರಿಸಬೇಕು.ಅವರ ಆಚಾರ- ವಿಚಾರ, ಬಡವರು, ದೀನ ದಲಿತರ ಬಗ್ಗೆ ಕಾಳಜಿ ಮೆಚ್ಚಬೇಕು. ಅವರು ಸಂವಿಧಾನ ರಚಿಸಿದ್ದರಿಂದ ಸಮಾನತೆ ಎಂಬುದು ಜಾರಿಯಾಯಿತು ಎಂದರು
ಇದೇ ಸಂದರ್ಭದಲ್ಲಿ ನಾಗರಾಜ್ ಎಚ್ ಬಂಡಿವಡ್ಡರ್, ಅಶೋಕ ಭಜಂತ್ರಿ,ಬಸವರಾಜ ರೇವಡಿ,ರವಿಚಂದ್ರ ನಿಡಗುಂದಿ, ಅಂಬರೀಶ ಬಂಡಿವಡ್ಡರ, ದುರಗಪ್ಪ ಕಲ್ಲವಡ್ಡರ,ಅನಿಲ ನಿಡಗುಂದಿ,ಶಶಿಕಾಂತ ಸರ್ಜನ್, ಮಂಜು ಬಂಕದ, ಕನಕಪ್ಪ ಮಾದರ, ಮಂಜು ಸವಣೂರ,ರಾಜು ನಿಡಗುಂದಿ ಸೇರಿದಂತೆ ನೂರಾರು ಕ್ರಿಕೆಟ್ ಪ್ರೇಮಿಗಳು ಇದ್ದರು.
ವರದಿ : ಸುರೇಶ ಬಂಡಾರಿ.




