
ಸೂಡಿ ಗ್ರಾಮ ಪಂಚಾಯತ ಅಧ್ಯಕ್ಷ ಗಾದೆ ಬಿಜೆಪಿ ತೆಕ್ಕೆಗೆ – ಕಾಂಗ್ರೇಸ್ ಸದಸ್ಯರ ರಾಜೀನಾಮೆ ಪ್ರಹಸನ.
ಗಜೇಂದ್ರಗಡ/ಸೂಡಿ : ಸತ್ಯಮಿಥ್ಯ (ಜು-14)
ಗಜೇಂದ್ರಗಡ ತಾಲೂಕು ಸೂಡಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಆಯಶ ಬೇಗಂ ಮುಕಾಸಿ ಆಯ್ಕೆಯಾಗಿದ್ದಾರೆ.
ಇದರಿಂದ ತಾಲೂಕಿನಲ್ಲಿ ಮತ್ತು ಈ ಹಿಂದಿನ ಅವಧಿವರೆಗೆ ಸೂಡಿ ಗ್ರಾಮ ಪಂಚಾಯತಿಯಲ್ಲಿ ಆಡಳಿತ ನಡೆಸಿರುವಂತ ಕಾಂಗ್ರೇಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಒಟ್ಟು 17 ಸದಸ್ಯ ಬಲ ಹೊಂದಿರುವ ಪಂಚಾಯತಿಯಲ್ಲಿ ಕಾಂಗ್ರೇಸ್ -11 ಮತ್ತು ಬಿಜೆಪಿ -6 ಸ್ಥಾನಗಳನ್ನು ಹೊಂದಿತ್ತು.ಈ ಅದ್ಯಕ್ಷಿಯ ಚುನಾವಣೆ ಮುನ್ನ ಸೂಡಿ ಗ್ರಾಮ ಪಂಚಾಯತ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯೇ ಆಡಳಿತ ನಡೆಸುತ್ತಿದ್ದರು ಆದರೆ ತನ್ನದೇ ಪಕ್ಷದ ಇನ್ನೊಬ್ಬ ಅಭ್ಯರ್ಥಿಗೆ ಇನ್ನುಳಿದ ಅವಧಿಗೆ ಆಯ್ಕೆ ಮಾಡಲು ಹೋಗಿ ಕಾಂಗ್ರೇಸ್ ಪೇಚಿಗೆ ಸಿಲುಕಿದೆ ಎನ್ನಲಾಗುತ್ತಿದೆ.
ಸೂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಗಂಗಮ್ಮ ಗೊರವರ ಮತ್ತು ಬಿಜೆಪಿಯಿಂದ ಆಯಶಾ ಬೇಗಂ ಸ್ಪರ್ಧೆ ಮಾಡಿದ್ದರು ಅಂತಿಮವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಸ್ವಪಕ್ಷಿಯಾ 6 ಮತ್ತು ಕಾಂಗ್ರೇಸ್ಸಿನ 3 ಬೆಂಬಲ ವ್ಯಕ್ತಪಡಿಸುವ ಮೂಲಕ ಸೂಡಿ ಗ್ರಾಮ ಪಂಚಾಯತ್ ಬಿಜೆಪಿ ಮಡಿಲಿಗೆ ಬಿದ್ದಿದೆ.
ಮಾಜಿ ಸಚಿವ ಕಳಕಪ್ಪ ಬಂಡಿ ಮನೆಗೆ ಭೇಟಿ ನೀಡಿದ ನೂತನ ಅಧ್ಯಕ್ಷೆ ಆಯುಶಾ ಬೇಗಂ ಮೂಕಾಸಿ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕಾಂಗ್ರೇಸ್ ನ 10 ಸದಸ್ಯರು ಗ್ರಾಮ ಪಂಚಾಯತ ಉಪಾಧ್ಯಕ್ಷರಿಗೆ ರಾಜೀನಾಮೆ ನೀಡಿದ್ದು ಆಶ್ಚರ್ಯ ಉಂಟುಮಾಡಿತು. ಕಾಂಗ್ರೇಸ್ ಪಕ್ಷದ ಕೆಲವು ಸದಸ್ಯರ ಬೆಂಬಲದಿಂದಲೇ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದು ಮರಳಿ ಅವರೇ ರಾಜೀನಾಮೆ ಕೊಟ್ಟಿರುವುದು ಸಾರ್ವಜನಿಕವಲಯದಲ್ಲಿ ನಗೆಪಾಟಲಿಗಿಡಾಯಿತು.
ವರದಿ: ಸುರೇಶ ಬಂಡಾರಿ.