
ವಿಜೃಂಭಣೆಯಿಂದ ಜರುಗಿದ ಖಾನತೋಟ ಯುವಕ ಮಂಡಳದ ಹಿಂದೂ ಮಹಾಗಣಪತಿ ಶೋಭಯಾತ್ರೆ.
ಗದಗ : ಸತ್ಯಮಿಥ್ಯ (ಸೆ-16).
ನಗರದ ಖಾನತೋಟ ಯುವಕ ಮಂಡಳ,ಗಣೇಶೋತ್ಸವ ಸಮಿತಿಯ ಹಿಂದೂ ಮಹಾ ಗಣಪತಿಯ 50ನೇ ಗಣೇಶೋತ್ಸವವ ಕಾರ್ಯಕ್ರಮ ಅಂಗವಾಗಿ ಜರುಗಿದ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನ ಯುವಕರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು .
ಗಣೇಶೋತ್ಸವದ ಶೋಭಾ ಯಾತ್ರೆ ಮೆರವಣಿಗೆಯು ಖಾನತೋಟದಿಂದ ಪ್ರಾರಂಭಗೊಂಡು ನಗರದ ವೀರನಾರಾಯಣ ದೇವಸ್ಥಾನ, ಗಂಗಾಪುರ ಪೇಟೆ, ಡಿ,ಸಿ ಮಿಲ್ ರಸ್ತೆ, ಮಹೇಂದ್ರಕರ್ ವೃತ್ತ,ಗಾಂಧಿ ಸರ್ಕಲ್ಬ,ಸವೇಶ್ವರ ವೃತ್ತ, ತಿಲಕ್ ಪಾರ್ಕ್. ಸೇರಿದಂತೆ ವಿವಿಧಡೆ ವಿಜೃಂಭಣೆಯ ಮೆರವಣಿಗೆಯು ಜರುಗಿತು.
ಮೆರವಣಿಗೆಯಲ್ಲಿ ನೂರಾರು ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತ ಗಜಾನನ ಮಹಾರಾಜಕಿ ಜೈ ಹೋ ಎಂಬ ಘೋಷಣೆಯೊಂದಿಗೆ ಶೋಭಾ ಯಾತ್ರೆಯ ಮೆರವಣಿಗೆಯಲ್ಲಿ ಸಾಗಿದರು.
ಗಣೇಶೋತ್ಸವದ ಶೋಭಾ ಯಾತ್ರೆ ಮೆರವಣಿಗೆಯ ಪ್ರಯುಕ್ತ ಗಜಾನನ ಪ್ರತಿಷ್ಠಾಪನೆಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಗಣೇಶೋತ್ಸವದ ಶೋಭಾ ಯಾತ್ರೆಯ ಮೆರವಣಿಗೆಯು ಪೊಲೀಸ್ ಬಂದೋಬಸ್ತಿನಲ್ಲಿ ಜರುಗಿತು,
ವರದಿ : ಮುತ್ತು ಗೋಸಲ.