
ಬೆಟಗೇರಿ ಪೊಲೀಸರ ಕಾರ್ಯಾಚರಣೆ ಕಳ್ಳತನದ ಪ್ರಕರಣದ ಆರೋಪಿಯ ಬಂಧನ.
ಗದಗ : ಸತ್ಯಮಿಥ್ಯ (ಜು-07)
ನಗರದ ಬೆಟಗೇರಿಯ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆಯ ಮೂಲಕ ಕಾರಿನಲ್ಲಿ ಪ್ರಯಾಣಿಸುವಾಗ ಬಂಗಾರದ ಬಳೆಗಳನ್ನು ಕಳ್ಳತನವಾದ ಪ್ರಕರಣವು ದಾಖಲಾಗಿತ್ತು ಪ್ರಕರಣವನ್ನು ಕೈಗೆತ್ತಿಕೊಂಡ ಬೆಟಗೇರಿ ಪೊಲೀಸರು ಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿರ್ಯಾಧಿದಾರರಾದ ಶಿಲ್ಪಾ ತಂದೆ ಕಾಶೀನಾಥ ಬಿರಾದಾರ ಇವರು ತಮ್ಮ ಸಬಂಧಿಕರ ಮದುವೆಯ ಕುರಿತು ಬೆಟಗೇರಿ ಶಹರದ ಸೆಟ್ಲಮೆಂಟ್ ಎ.ಎಸ್.ಎಸ್. ಕಾಮರ್ಸ್ ಕಾಲೇಜ್ ಹತ್ತಿರ ಇರುವ ಮನೆಗೆ ಬಂದು ದಿನಾಂಕ: 17/05/2025 ರಂದು ಬಾಗಲಕೋಟೆ ಜಿಲ್ಲೆಯ ಮುದ್ದೇಬಿಹಾಳಕ್ಕೆ ತಮ್ಮ ಸಬಂಧಿಕರು ಮೃತಪಟ್ಟಿದ್ದರಿಂದ ಅಲ್ಲಿಗೆ ಹೋಗುವ ಕುರಿತು ವಿನಾಯಕ ಟ್ರಾವೆಲ್ಸ್ ಗದಗನಲ್ಲಿ ಕಾರ್ ಬುಕ್ಸ್ ಮಾಡಿ ಸದರಿ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ತಮ್ಮ ಬ್ಯಾಗನ್ನು ಕಾರಿನ ಡಿಕ್ಕಿಯಲ್ಲಿಟ್ಟಿದರು ಬ್ಯಾಗನಲ್ಲಿಟ್ಟಿದ್ದ 4 ಬಂಗಾರದ ಬಳೆಗಳು ಕಳ್ಳತನವಾದ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿತ್ತು
ಪ್ರಕರಣದ ಆರೋಪಿನಾದ ನವೀನಕುಮಾರ ತಂದೆ ಶರಣಬಸವರಾಜ ದೊಡ್ಡಮನಿ, ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿರುತ್ತಾನೆ ಆರೋಪಿತನಿಂದ 2.60,000/- ರೂಗಳು ಕಿಮ್ಮತ್ತಿನ 45 ಗ್ರಾಂ ತೂಕದ 4 ಬಂಗಾರದ ಬಳೆಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಬಾಡಿಗೆ ಸ್ವೀಫ್ಟ್ ಡಿಸೈರ್ ಕಾರ್ ನಂಬರ್: ಕೆಎ-06. ಝಡ್-4363 ನೇದ್ದನ್ನು ವಶಪಡಿಸಿಕೊಂಡಿದ್ದಾರೆ
ಕಳ್ಳತನ ಪ್ರಕರಣದಲ್ಲಿ ಬಿ.ಎಸ್. ನೇಮಗೌಡ ಪೊಲೀಸ್ ಅಧೀಕ್ಷಕರು ಗದಗ ರವರು ಹಾಗೂ ಮುರ್ತುಜಾ ಖಾದ್ರಿ. ಉಪ-ಅಧಿಕ್ಷಕರು ಗದಗ ಉಪ ವಿಭಾಗ. ಧೀರಜ, ಬಿ. ಶಿಂದೆ. ಸಿಪಿಐ ಬೆಟಗೇರಿ ವೃತ್ತ ಇವರ ಮಾರ್ಗದರ್ಶನದಲ್ಲಿ ಎಲ್.ಎಂ. ಆರಿ. ಪಿ.ಎಸ್.ಐ ಎಸ್ ಎ ಗುಡ್ಡಿಮಠ ಎಂ.ಎಸ್. ಗಾಣಿಗೇರ , ಎಸ್.ಡಿ.ಬಳ್ಳಾರಿ, ಹೆಚ್.ಐ. ಯಡಿಯಾಪೂರ, ಪಿ.ಎ.ಭರಮಗೌಡ್ರ, ಇವರು ಹಾಗೂ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿಯವರಾದ ಶ್ರೀ ಗುರುರಾಜ ಬೂದಿಹಾಳ, ಎ.ಆರ್.ಎಸ್.ಐ. ಎಸ್.ಸಿ. ಕೊರಡೂರ, ತಂಡವನ್ನು ರಚಿಸಲಾಗಿತ್ತು
ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾನ್ಯ ಬಿ.ಎಸ್. ನೇಮಗೌಡ, ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಗದಗ ರವರು ಶ್ಲಾಘಿಸಿದ್ದಾರೆ.
ವರದಿ:ಮುತ್ತು ಗೋಸಲ