ಜಾಮೀನಿನ ಮೇಲಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೊದಲು ರಾಜೀನಾಮೆ ನೀಡಲಿ – ಸಂಜಯ್ ದೊಡ್ಡಮನಿ ಆಗ್ರಹ.
ಜಾಮೀನಿನ ಮೇಲಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೊದಲು ರಾಜೀನಾಮೆ ನೀಡಲಿ.
ಗದಗ:ಸತ್ಯಮಿಥ್ಯ (ಅ -02)
ಮಾಜಿ ಸಿಎಂಗಳಾಗಿರುವ ಸಂಸದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ,ಎಸ್ ಯಡಿಯೂರಪ್ಪ ಅವರ ಮೇಲೆ ಡಿನೋಟಿಫೈ ಪ್ರಕರಣದಲ್ಲಿ ದಾಖಲಾಗಿದ್ದು ಇವರ ವಿರುದ್ಧ ಈಗಾಗಲೇ ದಾಖಲೆಗಳು ಬಿಡುಗಡೆಯಾವೆ ಈ ಇಬ್ಬರು ನಾಯಕರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಎಷ್ಟು ಪಾಲು ಪಡೆದಿದ್ದಾರೆ ಎಂಬುವದನ್ನು ನಾಡಿನ ಜನರಿಗೆ ತಿಳಿಸಬೇಕೆಂದು ಗದಗ್ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರರು ಸಂಜಯ್ ದೊಡ್ಡಮನಿ ಆಗ್ರಹಿಸಿದ್ದಾರೆ.
ಜಾಮೀನಿನ ಮೇಲೆ ಹೊರಗಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರಾ? ಬಿಜೆಪಿ ಪಕ್ಷದಿಂದಲೇ ಕುಮಾರಸ್ವಾಮಿ ಅವರನ್ನು ಮಂತ್ರಿ ಮಾಡಿದ್ದಾರೆ ಇವರ ವಿಷಯದಲ್ಲಿ ಏಕೆ ರಾಜೀನಾಮೆ ಕೇಳುತ್ತಿಲ್ಲ? ಗುಜರಾತಿನ ಗೋಧ್ರಾ ಹತ್ಯಾಕಾಂಡದ ನೈತಿಕ ಹೊಣೆ ಹೊತ್ತು ಅಂದಿನ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿಯವರು ರಾಜೀನಾಮೆ ನೀಡಿದ್ದಾರಾ? ಇತ್ತೀಚಿಗೆ ಚುನಾವಣಾ ಬಾಂಡಗಳನ್ನು ಮೋದಿ ಸರ್ಕಾರ ಕದ್ದಿದೆ ಅಂತರ್ ರಾಜ್ಯ ರಸ್ತೆ ಸೇತುವೆಗಳು ಕೂಡ ಕಳಪೆ ಕಾಮಗಾರಿಗಳಿಂದ ಕೂಡಿದ್ದು ಅವುಗಳ ಅನುದಾನವನ್ನು ಬಿಜೆಪಿ ಸರ್ಕಾರ ಕಬಳಿಸಿದೆ ಕೇಂದ್ರದ ವಿತ್ ಸಚಿವರಾದ ನಿರ್ಮಲಾ ಸೀತಾರಾಮನ್ ರಾಜೀನಾಮೆ ಯಾವಾಗ ಎಂದು ಪ್ರಶ್ನಿಸಿದ್ದರು.
ಈಗಾಗಲೇ ಜನಪ್ರತಿನಿಧಿಗಳು ವಿಶೇಷ ನ್ಯಾಯಾಲಯ ಇವರನ್ನೆಲ್ಲ ತನಿಖೆ ಮಾಡಬೇಕೆಂದು ಆದೇಶಿಸಿದೆ ಆರೋಪಿಯಾದ ನಿರ್ಮಲಾ ಸೀತಾರಾಮನ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ,ಪಿ ನಡ್ಡಾ ರಾಜ್ಯಾಧ್ಯಕ್ಷ ಬಿ,ವೈ,ವಿಜಯೇಂದ್ರ ಮಾಜಿ ಅಧ್ಯಕ್ಷ ನಳೆನಕುಮಾರ್ ಕಟೀಲ್ ಹಾಗೂ ಜಾರಿ ನಿರ್ದೇಶನಾಲಯದ ಕೆಲವು ಅಧಿಕಾರಿಗಳಿಗೆ ನ್ಯಾಯಾಲಯವು ತನಿಖೆಗೆ ಆದೇಶಿಸಿದೆ ಸ್ಥಿರವಾದ ಸರ್ಕಾರವನ್ನು ಆಸ್ಥಿರಗೊಳಿಸುವ ಹುನ್ನಾರ ಮಾಡಿರುವ ಬಿಜೆಪಿ ಹಾಗೂ ಜೆಡಿಎಸ್ ದವರು ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡ ಜನಪರ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವ ನೈತಿಕ ಆದಾರದ ಮೇಲೆ ರಾಜಿನಾಮೆ ಕೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ವರದಿ : ಮುತ್ತು ಗೋಸಲ್.