ಶ್ರಮದಾನದ ಮೂಲಕ ಸ್ವಚ್ಛತಾ ಹಿ ಸೇವಾ ಅಭಿಯಾನ ಎಸ್ ಎ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಗಾಂಧಿ ಮತ್ತು ಶಾಸ್ತ್ರೀಯವರ ಜಯಂತಿ ಆಚರಣೆ.
ಶ್ರಮದಾನದ ಮೂಲಕ ಸ್ವಚ್ಛತಾ ಹಿ ಸೇವಾ ಅಭಿಯಾನ ಎಸ್ ಎ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಗಾಂಧಿ ಮತ್ತು ಶಾಸ್ತ್ರೀಯವರ ಜಯಂತಿ ಆಚರಣೆ.
ಗಜೇಂದ್ರಗಡ:ಸತ್ಯಮಿಥ್ಯ (ಅ -02).
ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದೊಂದಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇಯ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಜಿ ಅವರ 120 ನೇಯ ಜಯಂತಿಯನ್ನು ಕಾಲೇಜಿನ ಆವರಣದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಸಂತ ರಾವ್ ಗಾರಗಿ ಅವರು ಮನಸ್ಸು ಶುದ್ದಗೊಂಡಾಗ ದೇಹ ಶುದ್ಧಗೊಂಡಂತೆ ಮೈಯನ್ನ ತೊಳೆದುಕೊಳ್ಳಲು ಹಲವಾರು ಸೋಪುಗಳು ಬೇರೆ ರೀತಿಯ ವಸ್ತುಗಳನ್ನು ಬಳಸಿಕೊಂಡು ಮೈ ತೊಳೆದು ರೀತಿ ಮನಸ್ಸನ್ನು ತೊಳೆದುಕೊಳ್ಳಲು ಅರಿಷಡ್ವರ್ಗಗಳನ್ನು ನಿಗ್ರಹಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧ್ಯ ಮನಸ್ಸು ಹಾಗೂ ಮೈ ಶುದ್ಧಗೊಂಡಾಗ ಅಂದರೆ ಪರಿಸರದ ಜೊತೆಗೆ ವಿದ್ಯಾರ್ಥಿಗಳು ಅವಿನಾಭಾವ ಸಂಬಂಧವನ್ನು ಹೊಂದಿದಾಗ ಮಾತ್ರ ಮನಸ್ಸು ಹಾಗೂ ಮೈ ಎರಡು ಸಂಪನ್ನವಾಗುತ್ತದೆ ಎಂದು ಪರಿಸರ ಪ್ರಜ್ಞೆ ಮೂಡಿಸುವುದರ ಮೂಲಕ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆಯನ್ನು ಮಾಡೋಣ ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನದಲ್ಲಿ ಕಾಲೇಜಿನ ಆವರಣದಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಸ ಕಡ್ಡಿ ಪ್ಲಾಸ್ಟಿಕ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸುಮಾರು ಒಂದುವರೆ ಎಕರೆ ಸ್ವಚ್ಛಗೊಳಿಸುವುದರೊಂದಿಗೆ ವಿದ್ಯಾರ್ಥಿಗಳು ಹರ್ಷವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಾಂಸ್ಕೃತಿಕ ವಿಭಾಗದ ಚೇರ್ಮನ್ನರಾದ ಜಿ,ಟಿ ರಾಯಬಾಗಿ ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ವಸಂತ್ ರಾವ್ ಗಾರಗಿ ಜಿ,ಟಿ, ರಾಯಭಾಗಿ ರವಿ ಹಲಗಿ, ಸಂಗಮೇಶ್ ವಸ್ತ್ರದ್, ಪ್ರತಿಭಾ ಲಕ್ಷಕೊಪ್ಪದ, ವಿಜಯಲಕ್ಷ್ಮಿ ಅರಳಿಕಟ್ಟಿ, ಮಂಜುನಾಥ್ ಕುಂಬಾರ್, ಮನೋಜ್ ಕಲಾಲ,ಕುಮಾರಿ ಸಂಗೀತಾ ನಾಲತವಾಡ. ಈರಣ್ಣ ಹಡಪದ್ ಎ,ಡಿ,ಜಾತಗೇರ, ಗಿರೀಶ್ ವೀರಗಂಟಿ ಶಬಾನಾ ಚಾಮಲಾಪುರ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ಸಿಬ್ಬಂದಿಗಳು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ್.