
ನಗರದ ಗ್ರಾಮೀಣ ಪೊಲೀಸ್‌ರಿಂದ ಟಗರು ಕಳ್ಳರ ಬಂಧನ 25 ಟಗರುಗಳ ಜಪ್ತಿ
ಗದಗ:ಸತ್ಯ ಮಿಥ್ಯ (ಜು-28)
ನಗರದ ಗ್ರಾಮೀಣ ಪೊಲೀಸರ ಕಾರ್ಯಚರಣೆಯ ಮೂಲಕ ಟಗರು ಕಳ್ಳತನದ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಳ್ಳರಿಂದ 25 ಟಗರುಗಳ ಜಪ್ತಿಮಾಡಿಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ.
ಹುಲಕೋಟಿ ಗ್ರಾಮದ ಗಿರಿಯಪ್ಪ ಅಳವಂಡಿ ರವರ ಮನೆಯ ಮುಂದೆ ಕಟ್ಟಿ ಹಾಕಿದ್ದ 5 ಟಗರುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು ಪ್ರಕರಣವನ್ನು
ವೈಜ್ಞಾನಿಕ ವಿಧಾನಗಳ ಮೂಲಕ ಮಾಹಿತಿ ಕಲೆ ಹಾಕಿ ತನಿಖೆ ಮಾಡಿ ಆರೋಪಿತರನ್ನು ಪತ್ತೆ ಮಾಡಿ ಅವರನ್ನು ವಿಚಾರಣೆಗೊಳಪಡಿಸಿದಾಗ 3-4 ತಿಂಗಳಿನಿಂದ ಗದಗ ನಗರದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಮೋಟಾರ ಸೈಕಲ್ ದಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿರುತ್ತಾರೆ ಆರೋಪಿತರಿಂದ
ಸುಮಾರು 3,85,000/- ರೂ. ಕಿಮ್ಮತಿನ 25 ಟಗರುಗಳನ್ನು ಕೃತ್ಯಕ್ಕೆ ಬಳಸಿದ ಮೋಟಾರ ಸೈಕಲ್ ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಶಿವರಾಜ ಚಂದ್ರಪ್ಪ ಭಜಂತ್ರಿ
ಆಕಾಶ ಫಕ್ಕಿರಪ್ಪ ಭಜಂತ್ರಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಂಧಿಸಿದ್ದಾರೆ
ಆರೋಪಿಗಳನ್ನು ಮತ್ತು ಟಗರುಗಳನ್ನು ಪತ್ತೆ ಮಾಡಲು ರೋಹನ ಜಗದೀಶ್ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ, ಗದಗ ರವರ ನಿರ್ದೇಶನದ ಮೇರೆಗೆ ಮಹಾಂತೇಶ ಸಜ್ಜನ ಕೆ.ಎಸ್.ಪಿ.ಎಸ್. ಡಿಎಸ್‌ಪಿ ಸಿಇಎನ್ ಪ್ರಭಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗದಗ ಹಾಗೂ ಮಾನ್ಯ ಮುರ್ತುಜಾ ಖಾದ್ರಿ ಕೆ.ಎಸ್.ಪಿ.ಎಸ್ ಡಿಎಸ್‌ಪಿ ಗದಗ ಉಪ-ವಿಭಾಗ, ಗದಗ ರವರ ಮಾರ್ಗದರ್ಶನದಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ರವರಾದ ಸಿದ್ದರಾಮೇಶ್ವರ ಗಡೇದ ರವರ ನೇತೃತ್ವದಲ್ಲಿ ಶ್ರೀಮತಿ ಎಸ್.ಬಿ ಕವಲೂರ. ಪಿಎಸ್‌ಐ ಹಾಗೂ ಸಿಬ್ಬಂದಿ ರವರಾದ ಪ್ರಕಾಶ ಗಾಣಿಗೇರ, ಬಸವರಾಜ ಗುಡ್ಲಾನೂರ. ಹೇಮಂತ ಪರಸನ್ನವರ, ಅಶೋಕ ಬೂದಿಹಾಳ, ಅನೀಲ ಬನ್ನಿಕೊಪ್ಪ, ಕೋಟೆಪ್ಪ ಒಡೆಯರ, ಪ್ರವೀಣ ಶಾಂತಪ್ಪನವರ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿ ಜನರಾದ ಗುರು ಬೂದಿಹಾಳ, ಸಂಜೀವ ಕೊರಡೂರ ಇವರನ್ನೊಳಗೊಂಡ ತಂಡ ರಚಿಸಿದ್ದರು.
ಟಗರು ಕಳ್ಳರನ್ನು ಪತ್ತೆ ಮಾಡಿದ ತಂಡಕ್ಕೆ ಪೊಲೀಸ್ ವರಿಷ್ಠಅಧಿಕಾರಿಗಳಾದ ರೋಹನ ಜಗದೀಶ್ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
ವರದಿ : ಮುತ್ತು ಗೋಸಲ.