
ಕೋಟೆನಾಡಿನ “ಪಟ್ಟೇದಂಚಿನ ಸೀರೆ”ಗೆ ಜಿಐ ಟ್ಯಾಗ್.
ನೇಕಾರರ ಸಂಘದಲ್ಲಿ ಹರ್ಷ.
ಗಜೇಂದ್ರಗಡ: ಸತ್ಯಮಿಥ್ಯ (ಎ-12).
ಗಜೇಂದ್ರಗಡ,ಇಳಕಲ್, ಅಮೀನಗಡ, ಕಮತಗಿ, ಗುಳೇದಗುಡ್ಡ, ಗದಗ, ಭಾಗ್ಯನಗರ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಸ್ಥಳಗಳು ನೇಕಾರಿಕೆಯ ತವರು ಮನೆ ಎಂದರೆ ತಪ್ಪಾಗಲಾರದು.
ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಕುರುಹು “ಪಟ್ಟೇದ ಅಂಚು” ಎಂಬ ಮಾದರಿಯ ಸೀರೆ ಪ್ರಖ್ಯಾತವಾದವುಗಳು. ಈಗ ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘದಲ್ಲಿ ತಯಾರಾಗುವ ಪತ್ತೇದಂಚಿನ ಸೀರೆಗೆ ಭೋಗೋಳಿಕ ಗುರುತು (ಜಿ ಐ ಟ್ಯಾಗ್) ದೊರಕಿದೆ. ರಾಮಯ್ಯ ಕಾಲೇಜ್ ಆಫ್ ಲಾ ಸೆಂಟರ್ ಫಾರ್ ಇಂಟಲೆಕ್ಚವಲ್ ಪ್ರಾಪರ್ಟಿ ರೈಟ್ಸ್ (ಆರ್ ಸಿ ಐ ಪಿ ಆರ್) ಸಹಯೋಗದಲ್ಲಿ ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಎಜೇಂನ್ಸಿಯಾಗಿರುವ ದಿ. ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್ ನಿಂದ( ವಿ ಟಿ ಪಿ ಸಿ)ಜಿಐ ಟ್ಯಾಗ್ ನೋಂದಣಿ ಮಾಡಲಾಗಿದೆ. ಕರ್ನಾಟಕದ ಶ್ರೀಮಂತ ನೇಕಾರಿಕೆ ಪರಂಪರೆಯನ್ನು ಸಂರಕ್ಷೀ ಸಲು ಹಾಗೂ ಸಂಪ್ರದಾಯಿಕ ನೇಕಾರರನ್ನು ಪ್ರೋತ್ಸಾಹಿಸಲು ಜಿಐ ಟ್ಯಾಗ್ ಮಹತ್ವದ್ದಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಅವಸಾನದ ಅಂಚಿನಲ್ಲಿರುವ ಉತ್ತರ ಕರ್ನಾಟಕ ಕೈಮಗ್ಗ ಸೀರೆಗಳು ಮತ್ತು ಬಡ ನೇಕಾರನ ಪರಿಸ್ಥಿತಿ ಅದೋಗತಿಗೆ ಬಂದು ನಿಂತಿದೆ. ಆದ್ದರಿಂದ ಸರ್ಕಾರ ನೇಕಾರ ಸಮುದಾಯವರ ಬದುಕನ್ನು ಸುಧಾರಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ನೇಕಾರರು ಆಗ್ರಹಿಸುತ್ತಿದ್ದಾರೆ.
ವರದಿ : ಸುರೇಶ ಬಂಡಾರಿ.