
ರೋಣದ ಮಾಣಿಕ್ಯ ಯುವರತ್ನ ಮಿಥುನ್ ಜಿ ಪಾಟೀಲ್ ಅವರ ಹುಟ್ಟು ಹಬ್ಬದ ಕುರಿತು ವಿಶೇಷ ಲೇಖನ.
ರೋಣ: ಸತ್ಯಮಿಥ್ಯ (ಜ -12)
ಸದಾ ಬಡವರ ಪರ ಕೆಲಸಗಳನ್ನು ಮಾಡುತ್ತಾ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾ ಸೈ ಎನಿಸಿಕೊಂಡ ರೋಣದ ಚಿಕ್ಕ ಗೌಡರಾದ ಮಿಥುನ್ ಪಾಟೀಲರವರು ಮಧ್ಯಮ ವರ್ಗದವರ ಕೆಲಸಗಳಿಗೆ ಒತ್ತು ನೀಡುವ ಮೂಲಕ ಎಲ್ಲರಿಂದಲೂ ಜೈ ಎನಿಸಿಕೊಳ್ಳುತ್ತಿದ್ದಾರೆ.
ಜನನಾಯಕ ಎಂದರೆ ಕೇವಲ ಪೋಸ್ಟರ್ ಶೂರರೇ ತುಂಬಿರುವ ಈ ಕಾಲದಲ್ಲಿ ಕ್ಷೇತ್ರದಲ್ಲಿನ ಸರ್ವ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಯನ್ನು ತನ್ನ ಸಮಸ್ಯೆ ಎಂಬಂತೆ ಬಗೆಹರಿಸುವ ನಾಯಕ ಎಂದರೆ ಅದುವೇ ಮಿಥುನ್ ಸರ್ ಎನ್ನುತ್ತಾರೆ ಅವರ ಅಭಿಮಾನಿಗಳು.
ಪ್ರಸ್ತುತ ರೋಣ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜಿ. ಎಸ್. ಪಾಟೀಲರ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪಕ್ಕೆ ಹೆಗಲುಕೊಡುತ್ತಿರುವ ಯುವ ನಾಯಕ ಜನಪರ ಕಾರ್ಯ ಹಾಗೂ ಬಡವರ, ದೀನ ದಲಿತರ ಆಶಾಕಕಿರಣವಾಗಿ ಕಾರ್ಯ ಸಾಧನೆ ಹಲವಾರು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮತಕ್ಷೇತ್ರದಲ್ಲಿ ಮಾಡುತ್ತಿದ್ದಾರೆ.
ಮಿಥುನ್ ಜಿ ಪಾಟೀಲ್ ಅವರು ಮಾನ್ಯ ರೋಣ ಮತಕ್ಷೇತ್ರದ ಶಾಸಕರು ಹಾಗೂ ಗದಗ್ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಜಿ,ಎಸ್ ಪಾಟೀಲ್ ಅವರು ರೋಣ ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿಪರ ಕೆಲಸಗಳನ್ನು ಮಾಡಿರುವ ಹಾಗೂ ಜನರ ಪ್ರೀತಿಗೆ ಪಾತ್ರರಾಗಿರುವ ಶಾಸಕರು ಅವರಂತೆಯೊ ತಂದೆಗೆ ತಕ್ಕ ಮಗ ಎನ್ನುವಂತೆ ಮಿಥುನ್ ಜಿ ಪಾಟೀಲ್ ಅವರು ರೋಣ ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಭಿವೃದ್ಧಿಪರ ಕೆಲಸಗಳನ್ನು ಮಾಡುತ್ತಾ ಜನರ ಕಷ್ಟಗಳಿಗೆ ಸ್ಪಂದಿಸುವ ಯುವ ನಾಯಕರಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ರೋಣ ಕ್ಷೇತ್ರದಲ್ಲಿ ಯುವ ಕ್ರೀಡಾಪಟುಗಳಿಗೆ ಕ್ರೀಡಾಕೂಟಗಳನ್ನು ಏರ್ಪಡಿಸುವುದರ ಮೂಲಕ ಕ್ರೀಡೆಯಲ್ಲಿ ಭಾಗವಹಿಸುವ ಆಟಗಾರರ ಪ್ರತಿಭೆಯನ್ನು ತಾಲೂಕು, ಜಿಲ್ಲೆ, ರಾಜ್ಯ, ಮಟ್ಟದಲ್ಲಿ ಬೆಳೆಸುವಂತಹ ಹಾಗೂ ಕ್ರೀಡಾಪಟುಗಳಿಗೆ ಯುವ ನಾಯಕರು ದಾರಿದೀಪವಾಗಿದ್ದಾರೆ ಎಂದು ಕ್ರೀಡಾಪಟುಗಳು ಹೇಳುತ್ತಾರೆ.
ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಬಡ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯುವಲ್ಲಿ ಹಲವಾರು ಸಹಾಯ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಿಂದ ವಿವಿಧ ಕ್ಷೇತ್ರಗಳು ಪ್ರಗತಿ ಹೊಂದುತ್ತವೆ. ಎಲ್ಲದ್ದಕ್ಕೂ ಮೂಲ ಶಿಕ್ಷಣವಾಗಿದೆ. ವಿದ್ಯಾರ್ಥಿಗಳುಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿಸುವಲ್ಲಿ, ನಾಗರಿಕ ಸಮಾಜದ ಸಂಪನ್ಮೂಲ ವ್ಯಕ್ತಿಗಳನ್ನಾಗಿಸುವಲ್ಲಿ ಗುಣಾತ್ಮಕ ಶಿಕ್ಷಣ ಬುನಾದಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಟಿ.ವಿ., ಮೋಬೈಲ್ ನೋಡುತ್ತಾ ಕಾಲಹರಣ ಮಾಡದೇ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವಲ್ಲಿ ಎಂದು ಕಿವಿ ಮಾತನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳು ಮಿಥುನ್ ಜಿ ಪಾಟೀಲ್ ಅವರನ್ನು ಶಿಕ್ಷಣ ಪ್ರೇಮಿ ಎಂದು ಸಹ ಕರೆಯುತ್ತಾರೆ.
ಮಿಥುನ್ ಜಿ ಪಾಟೀಲ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅವರು ತಮ್ಮದೇ ಆದ ಯುವ ಬಳಗವನ್ನು ಹೊಂದಿದ್ದು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಯುವ ಬಳಗವನ್ನು ಕಾರ್ಯನಿರ್ವಹಿಸುವಂತೆ ಮಾಡುತ್ತಾ ಬರುತ್ತಿದ್ದು ಅವರುಗಳು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪುಸ್ತಕ ವಿತರಣೆ ಬ್ಯಾಗುಗಳ ವಿತರಣೆ ಕಲಿಕಾ ಸಾಧನಗಳ ವಿತರಣೆ ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಕೊಡುವುದರ ಮೂಲಕ ಹಾಗೂ ರೋಣ ಮತಕ್ಷೇತ್ರದ ಯಾವುದೇ ಅಭಿವೃದ್ಧಿಪರ ಕೆಲಸಗಳಲ್ಲಿ ಯುವ ಬಳಗವನ್ನು ಪಾಲ್ಗೊಳ್ಳುವಂತೆ ಯುವ ನಾಯಕರಾದ ಮಿಥುನ್ ಜಿ ಪಾಟೀಲ್ ಅವರು ಯುವಕರಿಗೆ ಆದರ್ಶ ಎನ್ನುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಯುವ ನಾಯಕ ಮಿಥುನ್ ಜಿ ಪಾಟೀಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ರೋಣ ಕ್ಷೇತ್ರದಲ್ಲಿ ರಕ್ತದಾನ ಶಿಬಿರ, ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಪುಸ್ತಕ ಹಾಗೂ ಪೆನ್ನುಗಳ ವಿತರಣೆಯನ್ನು ಮಾಡುತ್ತಿದ್ದಾರೆ.ಹೀಗೆ ಹಲವಾರು ಅಭಿವೃದ್ಧಿಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯುವ ನಾಯಕರಾಗಿ ಜನಪರ ಕಾರ್ಯ ಹಾಗೂ ಬಡವರ, ದೀನ ದಲಿತರ ಆಶಾಕಕಿರಣವಾಗಿ ರೋಣ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯ ಕನಸು ಕಂಡಂತಹ ಯುವ ನಾಯಕ ಮಿಥುನ್ ಜಿ ಪಾಟೀಲ್ ಅವರಿಗೆ ರೋಣ ಕ್ಷೇತ್ರದ ಜನರು ಜನ್ಮದಿನದ ಶುಭಾಶಯಗಳು ಹೇಳುತ್ತಿದ್ದಾರೆ.
ಲೇಖನ: ಮುತ್ತು ಗೋಸಲ